AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷಾಚರಣೆ: ಕಾರವಾರ ಕಡಲ ತೀರಕ್ಕೆ ಪ್ರವಾಸಿಗರ ಪ್ರವಾಹ, ಹೋಟೆಲ್, ರೆಸಾರ್ಟ್, ಹೋಮ್ ಸ್ಟೇಗಳು ಹೌಸ್ ಫುಲ್

ಹೋಂ ಸ್ಟೇಗಳ ದರ ಪಟ್ಟಿಯಲ್ಲಿ ಏರಿಕೆ ಆಗಿದ್ದರೂ ತಲೆ ಕೆಡಿಸಿಕೊಳ್ಳದ ಯುವ ಸಮುಹ ಅನೇಕ ಹೊಂ ಸ್ಟೆಗಳನ್ನ ಬುಕ್ ಮಾಡಿದ್ದಾರೆ. ಮದುವೆ, ಶಾಲೆಗಳ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆ ಜಿಲ್ಲೆಯ ಕಲ್ಯಾಣ ಮಂಟಪ, ವಸತಿ ಗೃಹಗಳು ಸಹ ಬುಕ್ ಆಗಿದ್ದು ಎಲ್ಲಿ ನೋಡಿದರಲ್ಲಿ ಜನವೋ ಜನ ಕಂಡುಬರುತ್ತಿದ್ದಾರೆ.

ಹೊಸ ವರ್ಷಾಚರಣೆ: ಕಾರವಾರ ಕಡಲ ತೀರಕ್ಕೆ ಪ್ರವಾಸಿಗರ ಪ್ರವಾಹ, ಹೋಟೆಲ್, ರೆಸಾರ್ಟ್, ಹೋಮ್ ಸ್ಟೇಗಳು ಹೌಸ್ ಫುಲ್
ಕಾರವಾರ ಕಡಲತೀರ
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Dec 29, 2023 | 8:07 AM

Share

ಕಾರವಾರ, ಡಿಸೆಂಬರ್ 29: ಕೊರೊನಾ ವೈರಸ್ ಸೋಂಕಿನ ಆತಂಕದ ನಡುವೆಯೇ ಹೊಸ ವರ್ಷದ ಸಂಭ್ರಮಕ್ಕೆ (New Year celebrations) ಕ್ಷಣಗಣನೆ ಪ್ರಾರಂಭವಾಗಿದೆ. ಗೋವಾ ಸೇರಿದಂತೆ ಕರ್ನಾಟಕ ರಾಜ್ಯದ ಕಡಲತಿರಗಳಿಗೆ ಈಗಾಗಲೇ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ನ್ಯೂ ಇಯರ್ ಸೆಲಿಬ್ರೆಷನ್​​ಗೆ ಇನ್ನೂ ಹೆಚ್ಚಿನ ಜನ ಬರುವ ನೀರಿಕ್ಷೆ ಇದ್ದು ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಕಾರವಾರ (Karawar) ನಗರದ ಎಲ್ಲ ಹೊಟೆಲ್​​ಗಳು ಫುಲ್ ಆಗಿದ್ದು, ರೂಂ ಗಾಗಿ ಜನ ಪರದಾಡುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಸ್ಥಳಗಳಾದ ಗೋಕರ್ಣ, ಮುರುಡೇಶ್ವರ ಪ್ರದೇಶಗಳಿಗೆ ಪ್ರವಾಸಿಗರ ಪ್ರವಾಹವೇ ಹರಿದುಬಂದಿದೆ. ಕೊರೊನಾ ಆತಂಕದ ಮಧ್ಯೆಯೂ ಕ್ರಿಸ್​​ಮಸ್ ರಜೆ ಜೊತೆ ಹೊಸ ವರ್ಷದ ಸಂಭ್ರಮವನ್ನು ಎಂಜಾಯ್ ಮಾಡಲು, ಕಾರವಾರ ಜಿಲ್ಲೆಯತ್ತ ಜನರ ದಂಡೇ ಬರುತ್ತಿದೆ. ಕರಾವಳಿ ತೀರದತ್ತ ಮುಖ ಮಾಡಿರವ ಪ್ರವಾಸಿಗರು ಕಡಲ ಅಲೆಗೆ ಮೈ ಕೊಟ್ಟು ಸಂಭ್ರಮಿಸುತ್ತಿದ್ದಾರೆ. ಹೊಸ ವರ್ಷವನ್ನು ಸ್ವಾಗತಿಸಲು ಜನ ಸಜ್ಜಾಗಿದ್ದಾರೆ. ಈ ಮಧ್ಯೆ, ಡಿಸೆಂಬರ್ ಕೊನೆಯ ವಾರದಲ್ಲಿ ಸಾಲು ಸಾಲು ಮದುವೆ ಮಹೂರ್ತ ಕೂಡ ಇರುವುದರಿಂದ ಈ ಬಾರಿ ಹೊಸ ವರ್ಷಕ್ಕೆ 15 ದಿನ ಬಾಕಿ ಇರುವಾಗಲೆ, ಕಾರವಾರ ನಗರದ ಎಲ್ಲ ಹೊಟೆಲ್ ರೂಂ ಗಳು ಬಾಗಷಃ ಫುಲ್ ಆಗಿವೆ.

ಹೋಂ ಸ್ಟೇಗಳ ದರ ಪಟ್ಟಿಯಲ್ಲಿ ಏರಿಕೆ ಆಗಿದ್ದರೂ ತಲೆ ಕೆಡಿಸಿಕೊಳ್ಳದ ಯುವ ಸಮುಹ ಅನೇಕ ಹೊಂ ಸ್ಟೆಗಳನ್ನ ಬುಕ್ ಮಾಡಿದ್ದಾರೆ. ಮದುವೆ, ಶಾಲೆಗಳ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆ ಜಿಲ್ಲೆಯ ಕಲ್ಯಾಣ ಮಂಟಪ, ವಸತಿ ಗೃಹಗಳು ಸಹ ಬುಕ್ ಆಗಿದ್ದು ಎಲ್ಲಿ ನೋಡಿದರಲ್ಲಿ ಜನವೋ ಜನ ಕಂಡುಬರುತ್ತಿದ್ದಾರೆ.

ಇದನ್ನೂ ಓದಿ: ಎಣ್ಣೆ ಪಾರ್ಟಿ ಬಿಟ್ಟು ಹೊಸ ವರ್ಷವನ್ನು ಸ್ವಾಗತಿಸುವುದು ಹೇಗೆ? ಇಲ್ಲಿದೆ ಟಿಪ್ಸ್​

ಉತ್ತರ ಕನ್ನಡ ಜಿಲ್ಲೆಗೆ ಕಳೆದ ಮೂರು ದಿನದಿಂದ ಲಕ್ಷಾಂತರ ಜನ ಆಗಮಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಸಹ ಕರೋನಾ ನಿಯಂತ್ರಣದ ಜೊತೆ ಬಂದೊಬಸ್ತ್ ಸಹ ಹೆಚ್ಚಿಸಿದೆ. ಹೋಮ್ ಸ್ಟೇ, ರೆಸಾರ್ಟ್, ಹೋಟಲ್ ಮಾಲೀಕರ ಸಭೆ ಕರೆದು ಎಚ್ಚರಿಕೆ ನೀಡಿದ್ದು, ಪ್ರವಾಸಿ ಸ್ಥಳಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಹೆಚ್ಚು ಗುಂಪು ಸೇರದೆ ಕೋವಿಡ್ ನಿಯಮ ಪಾಲಿಸಿ ಹೊಸವರ್ಷಾಚರಣೆ ಆಚರಿಸಲು ಸೂಚನೆ ನೀಡಲಾಗಿದೆ.

ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸವರ್ಷದ ಸಂಭ್ರಮಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಹೋಟಲ್ ರೆಸಾರ್ಟ್ ಗಳು ಭರ್ತಿಯಾಗಿದ್ರೆ ಇತ್ತ ಕರೋನಾ ನಿಯಮ ಪಾಲಿಸಿ ಹೊಸವರ್ಷ ಆಚರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ