ಕಮಲಾಕರ್ ಭಟ್-ಸುಚಿತ್ರಾ ರಂಗಿನಾಟಕ್ಕೆ ಅಮಾಯಕ ಬಲಿ: ಜೋಡಿ ಹಕ್ಕಿಗೆ ಕೋರ್ಟ್ ಶಾಕ್

ಕಿಲಾಡಿ ಲೇಡಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಲವ್ವಿಡವ್ವಿಗೆ ಅಮಾಯಕ ವಸಂತ ನಾಯ್ಕ ಬಲಿಯಾಗಿದ್ದು, ಈ ಪ್ರಕರಣ ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದೆ. ಇನ್ನು ಘಟನೆ ಬಳಿಕ ಸುಚಿತ್​ರಾ ಹಾಗೂ ಕಮಲಾಕರನ ರಾಸಲೀಲೆಗಳು ಒಂದೊಂದಾಗಿಯೇ ಬಯಲಿಗೆ ಬರುತ್ತಿದ್ದು, ಇದೀಗ ಈ ಜೋಡಿ ಹಕ್ಕಿಗೆ ಜೈಲೇ ಗತಿಯಾಗಿದೆ. ಹಾಗಾದ್ರೆ, ಕೋರ್ಟ್ ಹೇಳಿದ್ದೇನು? ಎನ್ನುವ ವಿವರ ಇಲ್ಲಿದೆ.

ಕಮಲಾಕರ್ ಭಟ್-ಸುಚಿತ್ರಾ ರಂಗಿನಾಟಕ್ಕೆ ಅಮಾಯಕ ಬಲಿ: ಜೋಡಿ ಹಕ್ಕಿಗೆ ಕೋರ್ಟ್ ಶಾಕ್
Suchitra And Kamalakara Bhat
Edited By:

Updated on: Feb 11, 2026 | 6:32 PM

ಕಾರವಾರ, (ಫೆಬ್ರವರಿ 11): ಸಿದ್ಧಾಪುರ ವಸಂತ್ ನಾಯ್ಕ್ ಕೊಲೆ ಪ್ರಕರಣಕ್ಕೆ (Siddapura Vasanth Naik Murder Case) ಸಂಬಂಧಿಸಿದಂತೆ ಆರೋಪಿಗಳಾದ ಕಮಲಾಕರ್ ಭಟ್ ಗುರೂಜಿ(astrologer kamalakara bhat )ಹಾಗೂ ಪ್ರೇಯಸಿ ಸುಚಿತ್ರಾಳಿಗೆ (Suchitra) ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ. ಒಟ್ಟು 8 ಆರೋಪಿಗಳ ಪೈಕಿ ಮೂವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹೀಗಾಗಿ ಇನ್ನುಳಿದ A1 ಸುಚಿತ್ರಾ ಆರೋಪಿ ಹಾಗೂ A3ಕಮಲಾಕರ ಭಟ್ ಕಮಲಾಕರ ಭಟ್ ಸೇರಿದಂತೆ 5 ಆರೋಪಿಗಳಿಗೆ ಫೆಬ್ರವರಿ 21ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಸಿದ್ದಾಪುರ JMFC ನ್ಯಾಯಾಲಯದ ನ್ಯಾಯಾಧೀಶ ಉಮೇಶ್ ಎಂ.ಪಿ ಆದೇಶ ಹೊರಡಿಸಿದ್ದಾರೆ. ಇದರಿಂದ ಐಷಾರಾಮಿ ಜೀವನ ನಡೆಸುತ್ತಿದ್ದ  ಜೋಡಿ ಹಕ್ಕಿಗೆ ಜೈಲೇ ಗತಿ.

ಒಟ್ಟು 8 ಆರೋಪಿಗಳ ಪೈಕಿ ಮೂವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹೀಗಾಗಿ 5 ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಕೋರ್ಟ್, A1 ಸುಚಿತ್ರಾ, A2ಲೋಕನಾಥ್, A3ಕಮಲಾಕರ ಭಟ್, A4 ಆಕಾಶ ಮತ್ತು A8 ವಿನಯಗೆ ಫೆಬ್ರವರಿ 21ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಇನ್ನು ಪೊಲೀಸ್ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳ ವಿಚಾರಣೆ ಇದೇ ಫೆಬ್ರವರಿ 13ರಂದು ನಡೆಯಲಿದೆ.

ಇದನ್ನೂ ಓದಿ: ಮೊದಲ ಸಲ ಕಮಲಾಕರ ಜೊತೆ ಹೋಗಿದ್ದಕ್ಕೆ 10 ಸಾವಿರ ರೂ. ನಿರೀಕ್ಷಿಸಿದ್ದ ಸುಚಿತ್ರಾಗೆ ಸಿಕ್ಕಿದ್ದು 35 ಸಾವಿರ ರೂ.

ಘಟನೆ ಹಿನ್ನೆಲೆ

ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಇಬ್ಬರು ಬೆಂಗಳೂರಿನಲ್ಲಿ ಪರಿಚವಾಗಿದ್ದು, ಬಳಿಕ ಇವರ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದಳು. ನಂತರ ಸುಚಿತ್ರಾ ಹಾಗೂ ಕಮಲಾಕರ್ ಭಟ್ ನಡುವೆ ಲವ್ವಿಡವ್ವಿ ಶುರುವಾಗಿದ್ದು, ಜ್ಯೋತಿಷಿ ಸುಚಿತ್ರಾಳಿಗೆ ಶಿವಮೊಗ್ಗದಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಟ್ಟಿದ್ದ. ಹೀಗಾಗಿ ಸುಚಿತ್ರಾ 9 ತಿಂಗಳಿನಿಂದ ಶಿವಮೊಗ್ಗದ ಗುತ್ತೆಪ್ಪ ಕಾಲನಿಯ ಬಡಾವಣೆಯಲ್ಲಿ ಮನೆಯಲ್ಲಿ ಮಗಳೊದಿಗೆ ಕಮಲಾಕರ್ ಭಟ್ ಜೊತೆ ವಾಸವಾಗಿದ್ದಳು. ಆದ್ರೆ, ಸುಚಿತ್ರಾಳ ಪುತ್ರಿ ತನ್ನ ತಂದೆ ಮಹೇಶ್ ಗೆ ಕರೆ ಮಾಡಿ ತನ್ನನ್ನು ಕರೆದುಕೊಂಡು ಹೋಗುವಂತೆ ಬೇಡಿಕೊಂಡಿದ್ದಳು.

ಇದಕ್ಕೆ ತಂದೆ, ಅಲ್ಲಿಂದ ಬಂದುಬಿಡು ಎಂದು ಮಗಳಿಗೆ ಹೇಳಿದ್ದರು. ಅದರಂತೆ ಪುತ್ರಿ ಸುಚಿತ್ರಾಳಿಂದ ತಪ್ಪಿಸಿಕೊಂಡು ತಂದೆ ಮಹೇಶನ ಬಳಿಗೆ ಬಂದಿದ್ದು, ಬಳಿಕ ಪೊಲೀಸ್ ಠಾಣೆಗೆ ತೆರಳಿ ತಾಯಿ ಸುಚಿತ್ರಾ, ಕಮಲಾಕರ್ ಭಟ್​​ ಕಿರುಕುಳ ನೀಡುತ್ತಿದ್ದಾರೆಂದು ದೂರು ನೀಡಿದ್ದಳು. ಆಮೇಲೆ ಸುಚಿತ್ರಾ, ಮಗಳನ್ನು ಕರೆದುಕೊಂಡು ಬರುವಂತೆ ಗ್ಯಾಂಗ್​​ವೊಂದನ್ನು ಕಳುಹಿಸಿದ್ದಳು. ಆ ವೇಳೆ ಸುಚಿತ್ರಾ ಗ್ಯಾಂಗ್ ಹಾಗೂ ಪತಿ ಮಹೇಶ್ ಕುಟುಂಬಸ್ಥರ ನಡುವೆ ಗಲಾಟೆಯಾಗಿತ್ತು. ಈ ಸಂದರ್ಭದಲ್ಲಿ ಮಹೇಶನ ಸಹೋದರ ವಸಂತ್​​ಗೆ ಚಾಕುವಿನಿಂದ ಇರಿದಿದ್ದು, ತೀವ್ರ ರಕ್ತಸ್ರಾವವಾಗಿ ವಸಂತ್ ಸಾವನ್ನಪ್ಪಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Wed, 11 February 26

ಸೂರಜ್​, ಮಹಾವೀರ್​ ಉತ್ತರೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us