AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಮೀನು ಪ್ರಿಯರಿಗೆ ಆಘಾತ: ಪೂರೈಕೆಯಲ್ಲಿ ಶೇ.70ರಷ್ಟು ಇಳಿಕೆ, ಬೆಲೆ ಏರಿಕೆ!

Seafood Crunch: ಮೀನು ಸಂತಾನೋತ್ಪತ್ತಿ ಸಮಯದ ಕಾರಣ ಕರಾವಳಿಯಲ್ಲಿ ಸಮುದ್ರ ಮೀನುಗಾರಿಕೆ ನಿಷೇಧಿಸಿರುವುದರಿಂದ ಬೆಂಗಳೂರಿಗೆ ಮೀನು ಪೂರೈಕೆ ಶೇ.70 ರಷ್ಟು ಕುಸಿದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಶೇ.50ರಷ್ಟು ದುಬಾರಿಯಾಗಿದೆ. ಮೀನು ಮಾರಾಟಗಾರರು ಮಾತ್ರವಲ್ಲದೆ, ಮೀನು ಪ್ರಿಯರು ಹಾಗೂ ಹೋಟಲ್ ಮತ್ತು ರೆಸ್ಟೋರೆಂಟ್​ಗಳಿಗೂ ಇದರಿಂದ ಸಮಸ್ಯೆಯಾಗಿದೆ.

ಬೆಂಗಳೂರಿನ ಮೀನು ಪ್ರಿಯರಿಗೆ ಆಘಾತ: ಪೂರೈಕೆಯಲ್ಲಿ ಶೇ.70ರಷ್ಟು ಇಳಿಕೆ, ಬೆಲೆ ಏರಿಕೆ!
ಬೆಂಗಳೂರಿನ ಮೀನು ಪ್ರಿಯರಿಗೆ ಆಘಾತImage Credit source: Tv9 Kannada
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on:Jul 29, 2026 | 7:13 PM

Share

ಮುಖ್ಯಾಂಶಗಳು

  • ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧದ ಎಫೆಕ್ಟ್​​
  • ಬೆಂಗಳೂರಲ್ಲಿ ಮೀನು ಪ್ರಿಯರಿಗೆ ಭಾರೀ ನಿರಾಶೆ
  • ಪೂರೈಕೆ ಶೇ.70ರಷ್ಟು ಇಳಿಕೆ, ಬೆಲೆ ಶೇ.50 ಏರಿಕೆ!

ಬೆಂಗಳೂರು, ಜುಲೈ 29: ನಗರದಲ್ಲಿ ಕಳೆದ ಒಂದು ತಿಂಗಳಿಂದ ಮೀನು ಪ್ರಿಯರಿಗೆ ಭಾರೀ ನಿರಾಶೆ ಎದುರಾಗಿದೆ. ಮೀನು ಮಾರುಕಟ್ಟೆಗಳಿಗೆ ಪೂರೈಕೆಯಲ್ಲಿ ಶೇ.70ರಷ್ಟು ಇಳಿಕೆ ಕಂಡಿದ್ದು, ಗ್ರಾಹಕರು ಹಾಗೂ ಮಾರಾಟಗಾರರು ಹತಾಶೆಯಲ್ಲಿದ್ದಾರೆ. ಮೀನುಗಳ ಸಂತಾನೋತ್ಪತ್ತಿ ಕಾರಣ, ಕರಾವಳಿಯಲ್ಲಿ ಮೀನುಗಾರಿಕೆಯನ್ನ ನಿಷೇಧಿಸಲಾಗಿದೆ. ಹೀಗಾಗಿ ಮಾರುಕಟ್ಟೆಗಳಿಗೆ ಬರುತ್ತಿದ್ದ ಮೀನುಗಳ ಪೂರೈಕೆಯಲ್ಲಿ ದೊಡ್ಡ ವ್ಯತ್ಯವಾಗಿದೆ. ಪರಿಣಾಮ ಮೀನುಗಳ ಬೆಲೆಯಲ್ಲಿ ಶೇ. 50ರಷ್ಟು ಏರಿಕೆಯಾಗಿದೆ.

ಸಮುದ್ರ ಮೀನಿನ ಬೆಲೆಯಲ್ಲಿ ಏರಿಕೆ

ವಿಧ ಹಳೆಯ ದರ (ಕೆಜಿಗೆ) ಪ್ರಸ್ತುತ ದರ (ಕೆಜಿಗೆ)
ಅಂಜಲ್ 1500 1800
ಸೀ ಬಾಸ್ 650 750
ಬ್ಲಾಕ್ ಪ್ಯಾಂಪ್ಲೆಟ್ 1100 1200
ಶೀಲಾ 550 650
ಅರ್ನಾ 280 350
ಶಂಕರ 350 450
ಶಾಫಿ 450 550
ವೈಟ್ ಟೋನ್​​ 350 458
ಬ್ಲೂ ಕ್ರಾಬ್ 550 750
ಫ್ರಾನ್ಸ್​​ 350 450
ಬಟರ್ ಫಿಶ್ 450 550
ಬಾಂಗ್ಡಾ 200 300

ಇದನ್ನೂ ಓದಿ: ಕಾವೇರಿ ಜಲ ವಿವಾದ; CWRC ಆದೇಶದ ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ನಿರ್ಧಾರ

ಆಗಸ್ಟ್ 15ರ ಬಳಿಕ ಸಮಸ್ಯೆ ಸರಿಹೋಗುವ ಸಾಧ್ಯತೆ

ಇನ್ನು ಸಾಮಾನ್ಯವಾಗಿ ಮೀನು ಖರೀದಿ ಮಾಡುತ್ತಿದ್ದ ಗ್ರಾಹಕರು ವಿಪರೀತವಾಗಿ ಬೆಲೆ ಹೆಚ್ಚಳವಾಗಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪೂರೈಕೆಯಲ್ಲಿನ ವ್ಯತ್ಯಯ ಜುಲೈ 1ರಿಂದಲೇ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮೀನು ಮಾರಾಟಗಾರರು ಮಾತ್ರವಲ್ಲದೆ, ಮೀನು ಪ್ರಿಯರು ಹಾಗೂ ಹೋಟಲ್ ಮತ್ತು ರೆಸ್ಟೋರೆಂಟ್​ಗಳಿಗೂ ಇದರಿಂದ ಸಮಸ್ಯೆಯಾಗಿದೆ. ಆಗಸ್ಟ್ 15ರ ಬಳಿಕ ಸಮಸ್ಯೆ ಸರಿಹೋಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:49 pm, Wed, 29 July 26

Follow Us
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ