TV9 Kannada News Live: ಹಾನೂರು ಎನ್‌ಕೌಂಟರ್ ಬಳಿಕ ಅರಣ್ಯ ಇಲಾಖೆ ವಸತಿಗೃಹ, ವಾಹನಗಳೇ ಟಾರ್ಗೆಟ್, ಶಿಬಿರಗಳು ಧ್ವಂಸ
Karnataka News Today Live Updates: ವಿಧಾನ ಸಭೆ ಅಧಿವೇಶನದಲ್ಲಿ ಆಡಳಿತ-ವಿರೋಧ ಪಕ್ಷಗಳ ನಡುವೆ ಭಾರೀ ಗದ್ದಲ ಮುಂದುವರಿದಿದೆ. ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದ್ದು, ಕಾವೇರಿ ವಿವಾದ ಮತ್ತು ಚಾಮರಾಜನಗರ ಎನ್‌ಕೌಂಟರ್ ಕುರಿತು ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ನಕಲಿ ಔಷಧಿ ದಂಧೆಯೂ ಬೆಳಕಿಗೆ ಬಂದಿದೆ. ಈ ಎಲ್ಲಾ ಪ್ರಮುಖ ರಾಜಕೀಯ ಮತ್ತು ರಾಜ್ಯ ಸುದ್ದಿಗಳನ್ನು ಇಲ್ಲಿ ಲೈವ್ ಆಗಿ ಅಪ್ಡೇಟ್ ಮಾಡಲಾಗಿದೆ.

Breaking News Today Live Updates in Kannada: ವಿಧಾನಸಭೆ ಅಧಿವೇಶನ ಶುರುವಾಗಿದ್ದು, ವಿರೋಧ ಪಕ್ಷ ಹಾಗೂ ಆಡಿಳಿತ ಪಕ್ಷ ಕಾಂಗ್ರೆಸ್ ನಡುವೆ ಭಾರೀ ಗದ್ದಲ ಶುರುವಾಗಿದೆ. ಇದೀಗ ವಿಧಾನ ಸಭೆ ಅಧಿವೇಶನದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದೆ. ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿರುವ ಬಿಜೆಪಿ. ಇದೀಗ ಅಧಿವೇಶನದಲ್ಲೂ ಈ ಬಗ್ಗೆ ಹೋರಾಟ ಮುಂದುವರಿಸಿದೆ. ಸದನದಲ್ಲಿ ಬಿಜೆಪಿಯ ಪ್ರಶ್ನೆಗಳಿಗೆ ಹಾಗೂ ಹೋರಾಟಕ್ಕೆ ಕಾಂಗ್ರೆಸ್ ಕೂಡ ಉತ್ತರ ನೀಡಲು ಸಿದ್ಧತೆಯನ್ನು ಮಾಡಿದೆ. ಇನ್ನು ಚಾಮರಾಜನಗರದ ಎನ್‌ಕೌಂಟರ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರ ಜತೆಗೆ ವಿಧಾನಸಭೆಯಲ್ಲಿ ಕಾವೇರಿ ಬಗ್ಗೆಯೂ ಕಾವು ಹೆಚ್ಚಾಗಿದೆ.ರಾಜ್ಯದಲ್ಲಿ ಅಕ್ರಮ ಹಾಗೂ ನಕಲಿ ಔಷಧಿ ದಂದೆಗಳು ಕೂಡ ನಡೆಯುತ್ತಿದೆ. ಈಗಾಗಲೇ ಆರೋಗ್ಯ ಅಧಿಕಾರಿಗಳು ದಾಳಿಯನ್ನು ನಡೆಸಿದೆ. ಹೀಗೆ ಹಲವು ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ ಇಲ್ಲಿದೆ ನೋಡಿ.
LIVE NEWS & UPDATES
-
ಸತೀಶ್ ಜಾರಕಿಹೊಳಿ ಭೇಟಿಯಾದ ಯತೀಂದ್ರ ಸಿದ್ದರಾಮಯ್ಯ
ಕೆಲ ರಾಜಕೀಯ ಕಾರಣಾಂತರಗಳಿಂದ ಸತೀಶ್ ಜಾರಕಿಹೊಳಿ ಹಾಗೂ ಸಿದ್ದರಾಮಯ್ಯ ನಡುವೆ ಸರಿ ಇಲ್ಲ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಜೊತೆಗೆ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಯತೀಂದ್ರ ಸಿದ್ದರಾಮಯ್ಯನವರು ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಶಾಸಕ ಅನಿಲ್ ಚಿಕ್ಕಮಾದು ಸಾಥ್ ನೀಡಿದ್ದು, ಈ ಮೂಲಕ ಸತೀಶ್ ಭೇಟಿಯಾಗಿ ಗೊಂದಲಕ್ಕೆ ತೆರೆ ಎಳೆಯಲು ಮುಂದಾದ್ರ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
-
ಸಾಲು ಸಾಲು ರಜೆ ಹಿನ್ನೆಲೆ ಊರುಗಳತ್ತ ಹೊರಟ ಜನರು
ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಜನರು ಬೆಂಗಳೂರಿನಿಂದ ಊರಿನತ್ತ ಹೊರಟ್ಟಿದ್ದಾರೆ. ಹೌದು…ನಾಳೆ ವರಮಹಾಲಕ್ಷ್ಮೀ ಹಬ್ಬ, ಬಳಿಕ 4 ನೇ ಶನಿವಾರ, ಬಳಿಕ ಭಾನುವಾರ ಹಿನ್ನಲೆ ಜನರು ಊರುಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಮೆಜೆಸ್ಟಿಕ್ನಲ್ಲಿ ಜನ ತುಂಬಿ ತುಳುಕುತ್ತಿದ್ದು, ಬಸ್ಗಾಗಿ ಪರದಾಡುತ್ತಿದ್ದಾರೆ. ಇನ್ನೊಂದಡೆ ಇದೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ನವರು ಟಿಕೆಟ್ ದರವನ್ನು ಏರಿಕೆ ಮಾಡಿದ್ದಾರೆ.
-
-
ಉಡುಪಿಯಲ್ಲಿ ಆಹಾರ ಇಲಾಖೆ ಅಧಿಕಾರಿಗಳ ದಾಳಿ
ಬಾಳೆಹಣ್ಣಿಗೆ ರಾಸಾಯನಿಕ ಹಾಗೂ ಕೃತಕ ಬಣ್ಣ ಬಳಕೆ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಉಡುಪಿ ತಾಲೂಕಿನ ಅಲೆವೂರು ಗ್ರಾಮದ ಹಲವೆಡೆ ಬಾಳೆಹಣ್ಣು ವ್ಯಾಪಾರಸ್ಥರು, 3 ಗೋದಾಮು ಮೇಲೆ ಆರೋಗ್ಯ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಈ ವೇಳೆ ರಾಸಾಯನಿಕ ಬಳಸಲು ಉಪಯೋಗಿಸುತ್ತಿದ್ದ ಪರಿಕರ ಪತ್ತೆಯಾಗಿದ್ದು, ರಾಸಾಯನಿಕಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ವಾಹನಗಳನ್ನ ಜಪ್ತಿ ಮಾಡಿದ್ದಾರೆ
-
ಎನ್‌ಕೌಂಟರ್ ಬಳಿಕ ಅರಣ್ಯ ಇಲಾಖೆ ವಸತಿಗೃಹ, ವಾಹನಗಳೇ ಟಾರ್ಗೆಟ್
ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಮೂವರ ಬಲಿ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದರ ಮಧ್ಯೆ ಇದೀಗ ಕಾವೇರಿ ವನ್ಯಜೀವಿಧಾಮ ಅರಣ್ಯ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಎನ್‌ಕೌಂಟರ್ ಬಳಿಕ ಅರಣ್ಯ ಇಲಾಖೆ ವಸತಿಗೃಹ, ವಾಹನಗಳೇ ಟಾರ್ಗೆಟ್ ಮಾಡಲಾಗುತ್ತಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 8 ಕಳ್ಳಬೇಟೆ ಶಿಬಿರಗಳು ಧ್ವಂಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಕಾವೇರಿ ವನ್ಯಜೀವಿಧಾಮದ ಕೊತ್ತನೂರು ವಲಯದ ಸುಂಡ್ರಳ್ಳಿ ನಾಲಾ ಬೋಳಿ ಮಿಂಚಿನಾರ ಹಳ್ಳ ಕಳ್ಳಬೇಟೆ ಶಿಬಿರ, ಹನೂರು ವಲಯದ ಹೊಳೆಮುರಿ ದಟ್ಟಿ ಬೇಟೆಗಾರನ ಗುಡ್ಡ, ಬೋದಿಕೆರೆ, ಕಳ್ಳಿದೊಡ್ಡಿ ಕಳ್ಳಬೇಟೆ ಶಿಬಿರ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮದ ಸೆಲ್ವಿಪುರ ಕಳ್ಳಬೇಟೆ ಶಿಬಿರ ಧ್ವಂಸಗೊಳಿಸಲಾಗಿದೆ. ಅರಣ್ಯ ಇಲಾಖೆ ವಸತಿಗೃಹ, ಅರಣ್ಯ ಇಲಾಖೆ ಒಂದು ಜೀಪ್ ಮೇಲೂ ದಾಳಿ ಮಾಡಲಾಗಿದೆ ಎಂದು ಪ್ರಕರಣೆಯಲ್ಲಿ ತಿಳಿಸಿದ್ದು, ಈ ಸಂಬಂಧ ಆಯಾ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡಲಾಗಿದೆ ಎಂದಿದ್ದಾರೆ.
-
ನಕಲಿ ಔಷಧ ಪ್ರಕರಣ ಎಸ್ಐಟಿಗೆ
ಕರ್ನಾಟಕದಲ್ಲಿ ನಕಲಿ ಔಷಧಗಳ ಜಾಲ ಪತ್ತೆಯಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದ್ದು, ಈ ಬಗ್ಗೆ ಇನ್ನಷ್ಟು ತನಿಖೆಗಾಗಿ ಪಕರಣವನ್ನು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿದೆ. ಐಪಿಎಸ್ ಹಿರಿಯ ಅಧಿಕಾರಿ ಸಿ ವಂಶಿಕೃಷ್ಣ ನೇತೃತ್ವದಲ್ಲಿ ಎಸ್ಐಟಿ ರಚಿಸಿ ಆದೇಶಿಸಲಾಗಿದೆ.
-
-
ವಿಧಾನಸಭೆ ಕಲಾಪ ಮುಂದೂಡಿಕೆ
ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಅಧಿವೇಶನದಲ್ಲಿ ವಿಪಕ್ಷ ಬಿಜೆಪಿಯ ಹೋರಾಟ ಮುಂದುವರಿದಿದೆ. ಇಂದು (ಆಗಸ್ಟ್ 20) ಸಹ ಭಾರೀ ಗದ್ದಲ ಗಲಾಟೆ ನಡೆದಿದ್ದು, ಇದರ ಮಧ್ಯೆ ಕೆಲ ಬಿಲ್ಗಳು ಅಂಗೀಕಾರಗೊಂಡವು. ಕೊನೆಗೆ ಕಲಾಪವನ್ನು ನಾಳೆ (ಆಗಸ್ಟ್ 21) ಮುಂದೂಡಲಾಯ್ತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಅಶೋಕ್,ನಾಗೇಂದ್ರ ರಾಜೀನಾಮೆ ಕೋಡೋವರೆಗೆ ನಮ್ಮ ಹೋರಾಟ. ನಾಳೆಯೂ ನಮ್ಮ ಹೋರಾಟ ಮುಂದುವರಿಸ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
-
ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಬಿಲ್ ಪಾಸ್
ವಿಧಾನಸಭೆಯಲ್ಲಿಂದು ವಿಪಕ್ಷಗಳ ಗದ್ದಲದ ನಡುವೆ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಬಿಲ್ ಪಾಸ್ ಆಯ್ತು.ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರನ್ನ ಸೇರಿಸಲು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಲು ಅವಕಾಶವಿದೆ.
-
ಹಾಡಹಗಲೇ ಸವಾರನನ್ನು ಅಡ್ಡಗಟ್ಟಿ ತಲ್ವಾರ್ ತೋರಿಸಿ ದರೋಡೆ
ಹಾಡಹಗಲೇ ಸವಾರನನ್ನು ಅಡ್ಡಗಟ್ಟಿ ತಲ್ವಾರ್ ತೋರಿಸಿ ದರೋಡೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುಲ್ಕಾಜೆ ಮಾಡ ಬಳಿ ನಡೆದಿದೆ. ನಾಲ್ವರು ದುಷ್ಕರ್ಮಿಗಳು ಹಾಡಹಗಲೇ ಬೈಕ್ ಸವಾರ ಸುರತ್ಕಲ್ನ ಮಯ್ಯದಿ ಎನ್ನುವರನ್ನು ಅಡ್ಡಗಟ್ಟಿ 8 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದಾರೆ.
-
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಗೀಕಾರ
ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷಗಳು ನಡೆಸುತ್ತಿರುವ ಗಲಾಟೆ ಗದ್ದಲದ ಮಧ್ಯೆ ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರವಾಗಿದೆ. ಸದನದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಗೀಕಾರ ಆಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಈ ವಿಧೇಯಕವನ್ನು ಮಂಡಿಸಿದರು.
-
ವಿಪಕ್ಷಗಳ ಗದ್ದಲದ ನಡುವೆ ವಿಧೇಯಕದ ಮೇಲೆ ಚರ್ಚೆ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಬಿಜೆಪಿಯ ಗದ್ದಲ ಗಲಾಟೆ ಮುಂದುವರಿದಿದೆ.ಈ ಗದ್ದಲ ಗಲಾಟೆ ಮಧ್ಯೆಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕದ ಮೇಲೆ ಚರ್ಚೆ ನಡೆದಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವ ಕೃಷ್ಣಭೈರೇಗೌಡ ಚರ್ಚೆ ಮುಂದುವರಿಸಿದ್ದಾರೆ.
-
ವನ್ಯಜೀವಿಗಳ ರಕ್ಷಣೆ ನನ್ನ ಕರ್ತವ್ಯ: ಅಭಿಮನ್ಯು ಆನೆ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ
ಅರಣ್ಯ ಇಲಾಖೆ ಸಚಿವನಾಗಿ ವನ್ಯಜೀವಿಗಳನ್ನು ರಕ್ಷಿಸುವುದು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ವಿಧಾನಸೌಧದಲ್ಲಿ ಸ್ಪಷ್ಟಪಡಿಸಿದ್ದಾರೆ.
-
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಅಡಕೆ ತೋಟಕ್ಕೆ ನುಗ್ಗಿದ ಖಾಸಗಿ ಬಸ್
ಜಿಲ್ಲೆಯ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಸಮೀಪ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಅಡಕೆ ತೋಟಕ್ಕೆ ನುಗ್ಗಿದ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಬಸ್‌ನಲ್ಲಿದ್ದ 15ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
-
ವಿಧಾನಪರಿಷತ್‌ನಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳ ಪಟ್ಟು: ಕಲಾಪದಲ್ಲಿ ತೀವ್ರ ಗದ್ದಲ
ಕರ್ನಾಟಕ ವಿಧಾನಪರಿಷತ್ ಅಧಿವೇಶನದ ಇಂದಿನ (ಆಗಸ್ಟ್ 20, 2026) ಕಲಾಪಕ್ಕೆ ಸಚಿವ ಬಿ. ನಾಗೇಂದ್ರ ಹಾಜರಾಗಿದ್ದು, ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತೀವ್ರ ಗದ್ದಲ ನಡೆಸಿದ ಘಟನೆ ನಡೆಯಿತು. ಸಚಿವ ಬಿ. ನಾಗೇಂದ್ರ ಕಲಾಪಕ್ಕೆ ಆಗಮಿಸುತ್ತಿದ್ದಂತೆ ವಿಪಕ್ಷ ಸದಸ್ಯರು ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಭಾಂಗಣದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
-
ನಕಲಿ ಬ್ರಾಂಡ್ ಔಷಧ, ಕಾಸ್ಮೆಟಿಕ್ಸ್ ಜಾಲ ಪ್ರಕರಣ: ಶೀಘ್ರವೇ ‘SIT’ ರಚನೆ
ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಬ್ರಾಂಡ್ ಔಷಧ ಹಾಗೂ ಕಾಸ್ಮೆಟಿಕ್ಸ್ ಜಾಲವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ತನಿಖೆಗೆ ಶೀಘ್ರವೇ ವಿಶೇಷ ತನಿಖಾ ತಂಡ (SIT) ರಚಿಸಲಾಗುವುದು ಎಂದು ವಿಧಾನಸೌಧದಲ್ಲಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಈ ದಂಧೆಯು ಅಂತಾರಾಜ್ಯ ಮಟ್ಟದಲ್ಲಿ ಹಬ್ಬಿರುವುದರಿಂದ ಕೇಂದ್ರ ಆರೋಗ್ಯ ಸಚಿವರಿಗೆ ಹಾಗೂ ಸಂಬಂಧಪಟ್ಟ ಇತರ ರಾಜ್ಯಗಳ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
-
ಸೈನ್ ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಭೀಕರ ಅಪಘಾತ; ಇಬ್ಬರು ದುರ್ಮರಣ, ಹಲವರಿಗೆ ಗಾಯ
ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಟೋಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಸೈನ್ ಬೋರ್ಡ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಅಸಹಾಯಕರಾಗಿ ದುರ್ಮರಣಕ್ಕೀಡಾಗಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.
-
ನಕಲಿ ಔಷಧ ಜಾಲಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಮಾಸ್ಟರ್ ಪ್ಲಾನ್: ಸುಳಿವು ಕೊಟ್ಟರೆ ಸಿಗಲಿದೆ 50,000 ರೂ. ಇನಾಮು
ರಾಜ್ಯದಲ್ಲಿ ನಕಲಿ ಔಷಧ ತಯಾರಿಕೆ ಮತ್ತು ಮಾರಾಟ ಜಾಲಕ್ಕೆ ಸಂಪೂರ್ಣ ಕಡಿವಾಣ ಹಾಕಲು ಕರ್ನಾಟಕ ಆರೋಗ್ಯ ಇಲಾಖೆ ಹಾಗೂ ಔಷಧ ನಿಯಂತ್ರಣ ಮಂಡಳಿ (Drug Control Board) ಅತ್ಯಂತ ಮಹತ್ವದ ಹೆಜ್ಜೆ ಇಟ್ಟಿದೆ. ನಕಲಿ ಔಷಧಗಳ ಬಗ್ಗೆ ನಿಖರ ಸುಳಿವು ನೀಡುವ ಸಾರ್ವಜನಿಕರಿಗೆ ₹10,000 ದಿಂದ ₹50,000 ದವರೆಗೆ ನಗದು ಬಹುಮಾನ (Cash Award) ನೀಡಲು ಇಲಾಖೆ ಯೋಜನೆ ರೂಪಿಸಿದೆ.
-
ರಾಣೆಬೆನ್ನೂರು ಬಳಿ ಭೀಕರ ಲಾರಿ ಅಪಘಾತ: ಬ್ರಿಡ್ಜ್‌ನಿಂದ ಕೆಳಗೆ ಬಿದ್ದು ಚಾಲಕ ದುರ್ಮರಣ
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹುಲಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಬ್ರಿಡ್ಜ್‌ನಿಂದ ಕೆಳಗೆ ಬಿದ್ದು, ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
-
ಚೆನ್ನೈನಲ್ಲಿ ದಕ್ಷಿಣ ವಲಯ ಮಂಡಳಿಯ 31ನೇ ಸಭೆ ಆರಂಭ: ಅಮಿತ್ ಶಾ ಅಧ್ಯಕ್ಷತೆಯಲ್ಲಿ ರಾಜ್ಯಗಳ ಸಿಎಂ ಭಾಗಿ
ತಮಿಳುನಾಡಿನ ಚೆನ್ನೈ ಬಳಿಯ ಕೋವಲಂನಲ್ಲಿ ದಕ್ಷಿಣ ವಲಯ ಮಂಡಳಿಯ (Southern Zonal Council) 31ನೇ ಸಭೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಅಧಿಕೃತವಾಗಿ ಆರಂಭವಾಗಿದೆ. ಸಭೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಆರ್ಥಿಕ ಪ್ರಗತಿ, ಬಂಡವಾಳ ಹೂಡಿಕೆ, ಜಲ ಮತ್ತು ಗಡಿ ವಿವಾದಗಳು ಹಾಗೂ ಪ್ರಮುಖವಾಗಿ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ (Delimitation) ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ.
Published On - Aug 20,2026 10:41 AM




