ಉತ್ತರ ಕನ್ನಡ: ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜನರೊಂದಿಗೆ ಬೆರೆತು ಕ್ರಿಕೆಟ್ ಆಡಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಬಿಡುವಿನ ವೇಳೆ ತಮ್ಮ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕುಳವೆಯಲ್ಲಿ ಮಕ್ಕಳು ಮತ್ತು ಸ್ಥಳೀಯರೊಂದಿಗೆ ಸೇರಿ ಕ್ರಿಕೆಟ್ (Cricket) ಆಡಿದ್ದಾರೆ. ಸದ್ಯ ಸ್ಪೀಕರ್ ಕ್ರಿಕೆಟ್ ಆಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social media) ವೈರಲ್ ಆಗಿದೆ. ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವ ಕಾಗೇರಿ, ಇಂದು ತಮ್ಮ ಕೆಲಸಗಳನ್ನು ಮುಗಿಸಿ ಬಿಡುವಾದ ವೇಳೆ ಜನರೊಂದಿಗೆ ಬೆರೆತು ಸ್ವಲ್ಪ ಸಮಯ ಕಾಲಕಳೆದಿದ್ದಾರೆ.
ಧಾರವಾಡ ಜಿಲ್ಲಾಡಳಿತದ ಜತೆ ಕೇಂದ್ರ ಸಚಿವ ಜೋಶಿ ಸಭೆ
ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ಧಾರವಾಡ ಜಿಲ್ಲಾಡಳಿತದ ಜತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಭೆ ನಡೆಸಿದ್ದಾರೆ. ಹುಬ್ಬಳ್ಳಿಯ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಮುನೇನಕೊಪ್ಪ, ಧಾರವಾಡ ಜಿಲ್ಲಾಧಿಕಾರಿ, ಡಿಹೆಚ್‌ಒ, ಕಿಮ್ಸ್ ಅಧೀಕ್ಷಕ, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇನ್ನು ಪೊಲೀಸ್ ಆಯುಕ್ತ ಲಾಭೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ, ಹು-ಧಾ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಕೂಡ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರು: ಸಚಿವಾಲಯ ಸೇವೆಯ ಅಧಿಕಾರಿಗಳಿಗೆ ಜನವರಿ 30ರವೆರೆಗೆ ಶೇ. 50ರಷ್ಟು ಹಾಜರಾತಿ ಅವಕಾಶ ವಿಸ್ತರಣೆ ಸಚಿವಾಲಯ ಸೇವೆಯ ಗ್ರೂಪ್ ಬಿ, ಸಿ, ಡಿ ವೃಂದದ ಅಧಿಕಾರಿ ಮತ್ತು ಸಿಬ್ಬಂದಿಗೆ ಜನವರಿ 30ರವರೆಗೆ ಶೇಕಡಾ 50ರಷ್ಟು ಹಾಜರಾತಿ ಅವಕಾಶ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಕೂಡ ರಾಜ್ಯ ಸರ್ಕಾರ ಹೊಸ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿತ್ತು. ಅದರಂತೆ ಸಚಿವಾಲಯದ ಅಧಿಕಾರಿಗಳು ಮುಂಚಿತವಾಗಿ ನಿಗದಿಪಡಿಸಲಾಗಿರುವ ಭೇಟಿಗೆ ಆಗಮಿಸುವ ಇಲಾಖೆಯ ಸಿಬ್ಬಂದಿಗಳಿಗೆ ಎರಡು ಡೋಸ್ ಲಸಿಕೆಯಾಗಿರಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿತ್ತು. ಇಂದು ಸಚಿವಾಲಯ ವೃಂದದ ಅಧಿಕಾರಿ ಮತ್ತು ಸಿಬ್ಬಂದಿಗೆ ಹಾಜರಾತಿ ವಿಸ್ತರಣೆಯ ಆದೇಶ ನೀಡಲಾಗಿದೆ.
ಇದನ್ನೂ ಓದಿ: ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಸಭಾಧ್ಯಕ್ಷರೂ ಸೇರಿದಂತೆ ಇಡೀ ಸದನ ರಾಜ್ಯದ ಜನರ ಕ್ಷಮೆ ಕೇಳಲಿ’ ವಿಮಲಾ ಕೆ. ಎಸ್.