ಹಿಂದೂ ಯುವತಿ ಅಪಹರಣ ಕೇಸ್​​ಗೆ ಟ್ವಿಸ್ಟ್: ಮುಸ್ಲಿಂ ಯುವಕನ ವಿರುದ್ಧ ಕೇಸ್ ಬುಕ್, ಆಗಿದ್ದೇನು?

ಹಿಂದೂ ಯುವತಿಯನ್ನು ಕಾಡಿನತ್ತ ಕರೆದುಕೊಂಡು ಹೋಗುತ್ತಿದ್ದ ಮುಸ್ಲಿಂ ಯುವಕನ ಕಾರನ್ನು ಅಡ್ಡಗಟ್ಟಿದ್ದ ಹಿಂದೂ ಸಂಘಟನೆಯ ಮುಖಂಡರ ವಿರುದ್ಧವೇ ಪ್ರಕರಣ ದಾಖಲು ಕೇಸ್​ಗೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಯುವತಿ ದೂರಿನ ಮೇರೆಗೆ ಯುವಕನ ವಿರುದ್ಧ ದೂರು ದಾಖಲಾಗಿದ್ದು, ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.

ಹಿಂದೂ ಯುವತಿ ಅಪಹರಣ ಕೇಸ್​​ಗೆ ಟ್ವಿಸ್ಟ್: ಮುಸ್ಲಿಂ ಯುವಕನ ವಿರುದ್ಧ ಕೇಸ್ ಬುಕ್, ಆಗಿದ್ದೇನು?
ಪೊಲೀಸ್​ ಠಾಣೆ ಮುಂದೆ ಹಿಂದೂ ಕಾರ್ಯಕರ್ತರ ಪ್ರತಿಭಟನೆ
Image Credit source: tv9 kannada
Edited By:

Updated on: Jun 19, 2026 | 6:23 PM

ಕಾರವಾರ, ಜೂನ್​​ 19: ಮುರಿನ ಕಟ್ಟೆ ವಿವಾದ ತನ್ನಗಾಯಿತು ಎನ್ನುವಷ್ಟರಲ್ಲಿ, ಮುಸ್ಲಿಂ ಯುವಕನಿಂದ (Muslim Boy) ಹಿಂದೂ ಯುವತಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾರಂಭದಲ್ಲಿ ಪೊಲೀಸರ ಗಮನಕ್ಕೆ ತಂದಿದ್ದ ಹಿಂದೂ ಮುಖಂಡರ ಮೇಲೇ ಕೇಸ್ ದಾಖಲಿಸಲಾಗಿತ್ತು. ಆದರೆ ಹಿಂದೂ ಮುಖಂಡರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತಿದ್ದಂತೆ ಪ್ರತಿ ದೂರು ದಾಖಲಿಸಿಕೊಂಡು ಇದೀಗ ಮುಸ್ಲಿಂ ಯುವಕನನ್ನ ಬಂಧಿಸಲಾಗಿದೆ (Arrested).

ಮುಖ್ಯಾಂಶಗಳು

  • ಠಾಣೆಗೆ ಮುತ್ತಿಗೆ ಹಾಕುತ್ತಿದ್ದಂತೆ ಕೌಂಟರ್ ಕೇಸ್ ದಾಖಲು
  • ಯುವಕನ ವಿರುದ್ಧ ಯುವತಿ ದೂರು
  • ಲೈಂಗಿಕ ದೌರ್ಜನ್ಯ ಕೇಸ್​ ದಾಖಲು

ನಡೆದಿದ್ದೇನು?

ಭಟ್ಕಳದ ಅನಪಾಲ್ ಸೂಪರ್ ಮಾರ್ಕೆಟ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಿಂದೂ ಯುವತಿಯನ್ನು ಅದೇ ಸೂಪರ್ ಮಾರ್ಕೆಟ್​ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಶಾಹೀದ್ ಪ್ರೀತಿಸುತ್ತಿದ್ದ. ನಿನ್ನೆ ಮಾತನಾಡಬೇಕು ಎಂದು ಯುವತಿಯನ್ನು ಸೂಪರ್ ಮಾರ್ಕೆಟ್​​ನಿಂದ ಕಾರಿನಲ್ಲಿ ಕೂರಿಸಿಕೊಂಡು ಸಾಗರ ರಸ್ತೆಯತ್ತ ತೆರಳಿದ್ದ. ಈ ವೇಳೆ ಕಾರು ಕೈಕೊಟ್ಟಿದ್ದು, ಅಲ್ಲಿ ಬರುತ್ತಿದ್ದ ಹಿಂದೂ ಕಾರ್ಯಕರ್ತರು ಕಾರಿನಲ್ಲಿ ಕುಳಿತಿರುವ ಯುವತಿಯನ್ನ ಗಮನಿಸಿದ್ದಾರೆ. ವಿಚಾರಿಸಿದಾಗ ಆತ ಬಲವಂತವಾಗಿ ಕರೆತಂದಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಪೊಲೀಸರನ್ನ ಕರೆಸಿ ಇಬ್ಬರನ್ನ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ತಣ್ಣಗಾಗಿದ್ದ ಭಟ್ಕಳದಲ್ಲಿ ಮತ್ತೆ ಕೊಮು ಸಂಘರ್ಷ: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

ಇತ್ತ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಶಾಹೀದ್ ತಮ್ಮ ಮೇಲೆ ಹಿಂದೂ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದಾನೆ. ಈ ಸಂಬಂಧ ಹಿಂದೂ ಕಾರ್ಯಕರ್ತರಾದ ಶ್ರೀಕಾಂತ್ ನಾಯ್ಕ ಸೇರಿ ನಾಲ್ಕು ಜನರ ಮೇಲೆ ಪ್ರಕರಣ ದಾಖಲಾಗಿದೆ. ಇನ್ನು ಈ ವೇಳೆ ಯುವತಿ ದೂರನ್ನ ಸ್ವೀಕರಿಸದೇ ಠಾಣೆಯ ಸಿಪಿಐ ಕೇವಲ ಯುವಕನ ದೂರು ಮಾತ್ರ ಸ್ವೀಕರಿಸಿದ್ದು, ಹಿಂದೂ ಕಾರ್ಯಕರ್ತರಲ್ಲಿ ಅಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರ ಈ ನಿರ್ಧಾರವನ್ನ ಖಂಡಿಸಿ ಹಿಂದೂಪರ ಕಾರ್ಯಕರ್ತರು ಠಾಣೆಯಲ್ಲಿ ರಾತ್ರೋರಾತ್ರಿ ಪ್ರತಿಭಟಿಸಿ ಪ್ರಕರಣವನ್ನ ಹಿಂಪಡೆಯುವಂತೆ ಆಗ್ರಹಿಸಿದರು.

ಯುವಕನ ವಿರುದ್ಧವೇ ಯುವತಿ ದೂರು

ಇನ್ನು ಕೇವಲ ಮುಸ್ಲಿಂ ಯುವಕನ ದೂರನ್ನ ಮಾತ್ರ ತೆಗೆದುಕೊಂಡದ್ದಕ್ಕೆ ಹಿಂದೂಪರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರಕರಣಕ್ಕೆ ಬಿಗ್ ಟ್ಟಿಸ್ಟ್ ಸಿಕ್ಕಿದೆ. ಶಾಹೀದ್ ತನ್ನನ್ನು ಬಲವಂತವಾಗಿ ಅಪಹರಣ ಮಾಡಿ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಇದೀಗ ಈ ದೂರು ಆಧರಿಸಿ ಆರೋಪಿ ಶಾಹೀದ್​ನನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಎರಡು ಕಡೆ ದೂರು, ಪ್ರತಿ ದೂರುಗಳು ದಾಖಲಾಗಿವೆ.

ಇದನ್ನೂ ಓದಿ: ಪೊಲೀಸರ ಕೊರಳ ಪಟ್ಟಿ ಹಿಡಿದು ರಂಪಾಟ: ಜೀಪ್​​​​​​​ನಿಂದ ಇಳಿಯದ PSI ಸಸ್ಪೆಂಡ್, 8 ಜನ ಸಿಬ್ಬಂದಿ ಎತ್ತಂಗಡಿ

ಸದ್ಯ ಶಾಹೀದ್ ಹಿಂದೂ ಸಂಘಟನೆ ವಿರುದ್ಧ ದೂರು ನೀಡಿದರೆ, ಯುವತಿ ಶಾಹೀದ್ ವಿರುದ್ಧ ದೂರು ನೀಡಿದ್ದು, ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾಳೆ. ಸದ್ಯ ಪ್ರಕರಣ ಎರಡು ಕೋಮು ಗುದ್ದಾಟಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us