AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಟ್ಕಳದಲ್ಲಿ ಶುಕ್ರವಾರ ರಾತ್ರಿ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕರಿಂದ ಇಬ್ಬರ ಮೇಲೆ ಮೊಟ್ಟೆ ಎಸೆದು ದುಷ್ಕೃತ್ಯ

ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ವೇಳೆ ಜನರ ಕೈಗೆ ಸಿಕ್ಕಿದ ಓರ್ವ ಹುಡುಗ ಅಪ್ರಾಪ್ತ ವಯಸ್ಸಿನವ. ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಟ್ಕಳ ಪೊಲೀಸರು ಈಗಾಗಲೇ ಮೂರು ಮಂದಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ಭಟ್ಕಳದಲ್ಲಿ ಶುಕ್ರವಾರ ರಾತ್ರಿ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕರಿಂದ ಇಬ್ಬರ ಮೇಲೆ ಮೊಟ್ಟೆ ಎಸೆದು ದುಷ್ಕೃತ್ಯ
ಭಟ್ಕಳದಲ್ಲಿ ಶುಕ್ರವಾರ ರಾತ್ರಿ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕರಿಂದ ಇಬ್ಬರ ಮೇಲೆ ಮೊಟ್ಟೆ ಎಸೆದು ದುಷ್ಕೃತ್ಯ
TV9 Web
| Edited By: |

Updated on:Apr 09, 2022 | 3:55 PM

Share

ಕಾರವಾರ: ಭಟ್ಕಳದಲ್ಲಿ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕರು ನಿನ್ನೆ ಶುಕ್ರವಾರ ರಾತ್ರಿ 9.30 ಹಾಗೂ 9.45ರ ಸಮಯದಲ್ಲಿ ಇಬ್ಬರು ಸಾರ್ವಜನಿಕರ ಮೇಲೆ ಮೊಟ್ಟೆ ಎಸೆದಿದ್ದಾರೆ. ಭಟ್ಕಳದ ಬಂದರು ಪ್ರದೇಶದ ನಿವಾಸಿಗಳಾದ ಸುಮಾರು 17 ವರ್ಷ ಪ್ರಾಯದ 6 ಮಂದಿ ಯುವಕರಿಂದ ಈ ಕುಕೃತ್ಯ ನಡೆದಿದೆ ಎನ್ನಲಾಗಿದೆ. ಮೂರು ಪ್ರತ್ಯೇಕ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಂದು ಬಾಲಕರು ಕೃತ್ಯವೆಸಗಿದ್ದಾರೆ. ಭಟ್ಕಳ ಪುರವರ್ಗದ ಮಂಜುನಾಥ್ (29) ಹಾಗೂ ಹನುಮಾನ್ ನಗರದ ಕೃಷ್ಣ (50) ಎಂಬುವವರ ಮೇಲೆ ಮೊಟ್ಟೆ ಎಸೆದಿದ್ದಾರೆ.

ಪಿಯುಸಿ ಪರೀಕ್ಷೆ ಬಳಿಕ ಉಳಿದ ಮೂವರು ಆರೋಪಿಗಳ ಅರೆಸ್ಟ್: ಮಂಜುನಾಥ್ ಕೂಲಿ ಕೆಲಸ ಮಾಡುತ್ತಿದ್ದರೆ, ಕೃಷ್ಣಾ ರಿಕ್ಷಾ ಚಾಲಕರಾಗಿದ್ದಾರೆ. ರಾತ್ರಿ 9.30ರಲ್ಲಿ ಮೊದಲು ಕೃಷ್ಣ ಎದೆಯ ಮೇಲೆ ಮೊಟ್ಟೆ ಬಿಸಾಕಿದ್ದ ಆರೋಪಿಗಳು, ಬಳಿಕ 9.45ರ ಸುಮಾರಿಗೆ ಮಂಜುನಾಥ್ ಅವರನ್ನು ಅವಾಚ್ಯವಾಗಿ ನಿಂದಿಸಿ ಕೈ ಹಾಗೂ ಎಡಕಾಲಿನ‌ ತೊಡೆಯ ಮೇಲೆ ಮೊಟ್ಟೆ ಎಸೆದಿದ್ದಾರೆ ಇದೇ ಆರೋಪಿಗಳು. ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ವೇಳೆ ಜನರ ಕೈಗೆ ಸಿಕ್ಕಿದ ಓರ್ವ ಹುಡುಗ ಅಪ್ರಾಪ್ತ ವಯಸ್ಸಿನವ. ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಟ್ಕಳ ಪೊಲೀಸರು ಈಗಾಗಲೇ ಮೂರು ಮಂದಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಪಿಯುಸಿ ಪರೀಕ್ಷೆಯ ಬಳಿಕ ಉಳಿದ ಮೂವರನ್ನು ವಶಕ್ಕೆ ಪಡೆಯುವುದಾಗಿ ಭಟ್ಕಳ ಪೊಲೀಸರು ತಿಳಿಸಿದ್ದಾರೆ. ಮೊಟ್ಟೆ ಎಸೆಯುವ ಹಿಂದೆ ಯುವಕರ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರಿನ ಗೋರಿಪಾಳ್ಯದಲ್ಲಿ ವೀಲಿಂಗ್ ಶೋಕಿ; ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಗುದ್ದಿದ ಪುಂಡರು ಬೆಂಗಳೂರಿನಲ್ಲಿ ಪುಂಡರ ವೀಲಿಂಗ್ ಹಾವಳಿ ಯಾವುದೇ ಅಂಕುಶವಿಲ್ಲದೆ ಮುಂದುವರಿದಿದೆ! ಜೊತೆಗೆ ಅನಾಹುತಗಳಿಗೂ ಕಾರಣವಾಗುತ್ತಿದೆ. ಬೆಂಗಳೂರು ಪೊಲೀಸರು ಎಷ್ಟೇ ನಿಗಾ ವಹಿಸಿದರು ವೀಲಿಂಗ್ ಪುಂಡರ ಹಾವಳಿಗೆ ಲಗಾಮು ಹಾಕಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಗೋರಿಪಾಳ್ಯದ ನರಸಿಂಹ ಸ್ವಾಮಿ ದೇವಾಲಯ ರಸ್ತೆಯಲ್ಲಿ ಕಳೆದ ಬುಧವಾರ ಮಧ್ಯಾಹ್ನ ಇಂತಹುದೇ ಅನಾಹುತಕಾರಿ ಘಟನೆ ನಡೆದಿದೆ.

ಇಬ್ಬರು ಪುಂಡರು ವೀಲಿಂಗ್ ಶೋಕಿ ಮಡುತ್ತಾ, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೆ ವಾಹನ ಸಮೇತ ಗುದ್ದಿದ್ದಾರೆ. ವೀಲಿಂಗ್ ಮಾಡಲು ಹೋಗಿ ಮಹಿಳೆಯ ಮೇಲೆ ಬೈಕ್ ಬೀಳಿಸಿ ಅನಾಹುತ ಮಾಡಿದ್ದಾರೆ. ಮಹಿಳೆಯ ತಲೆ‌ ಮತ್ತು ಬೆನ್ನಿಗೆ ಪೆಟ್ಟು ಬಿದ್ದಿದೆ. ಮಹಿಳೆ ಮೇಲೆ ವೀಲಿಂಗ್ ಮಾಡುತ್ತ ಹೋಗಿ ಬೈಕ್ ಸವಾರರು ಬಿದ್ದಿದ್ದಾರೆ. ಆದರೆ ಮಹಿಳೆಗೆ ತಕ್ಷಣ ಆರೈಕೆ ಮಾಡದೆ, ಕ್ಷಣಾರ್ಧದಲ್ಲಿ, ಜನ ಗಲಾಟೆ ಮಾಡುತ್ತಾರೆ ಅನ್ನೋ ಭಯದಿಂದ ಬೈಕ್ ಸಮೇತ ಏಸ್ಕೇಪ್ ಆಗಿದ್ದಾರೆ. ಕೊನೆಗೆ ಸ್ಥಳೀಯರು ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಮಹಿಳೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಹತ್ಯೆಗೀಡಾದ ಹರ್ಷ ಕುಟುಂಬಸ್ಥರಿಂದ ಹರ್ಷ ಚಾರಿಟಬಲ್ ಟ್ರಸ್ಟ್ ಕಾರ್ಯಾರಂಭ ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ಹರ್ಷ ಕುಟುಂಬಸ್ಥರಿಂದ ಹರ್ಷ ಚಾರಿಟಬಲ್ ಟ್ರಸ್ಟ್ ಕಾರ್ಯಾರಂಭ ಮಾಡಿದೆ. ಹರ್ಷ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾಗಿ ಮೃತ ಹರ್ಷನ ಸಹೋದರಿ ಅಶ್ವಿನಿ, ಕಾರ್ಯದರ್ಶಿಯಾಗಿ ಸಚಿವ ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್ ಆಯ್ಕೆಯಾಗಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ನೊಂದವರಿಗೆ ಟ್ರಸ್ಟ್​ ಮೂಲಕ ನೆರವು ನೀಡುವುದು ಟ್ರಸ್ಟ್ ಉದ್ದೇಶವಾಗಿದೆ. ಈ ಸಂಬಂಧ ಹರ್ಷ ಕುಟುಂಬಸ್ಥರು ಮತ್ತು ಕೆ.ಇ. ಕಾಂತೇಶ್ ಜಂಟಿ ಪತ್ರಿಕಾಗೋಷ್ಠಿ ಮೂಲಕ ಈ ಘೋಷಣೆ ಮಾಡಿದ್ದಾರೆ.

ಹತ್ಯೆಗೀಡಾದ ಹರ್ಷ ತಾಯಿ ಪದ್ಮಾ ಹೇಳಿಕೆ: ಹರ್ಷ ಮೃತಪಟ್ಟ ಬಳಿಕ ನಮ್ಮ ಕುಟುಂಬಕ್ಕೆ ಅನೇಕರು ಸಹಾಯ ಮಾಡಿದ್ದಾರೆ. ಸಂಗ್ರಹವಾದ ಹಣದ ಸದ್ಭಳಕೆ ಮಾಡುವ ನಿರ್ಧಾರವನ್ನು ಹರ್ಷ ಕುಟುಂಬ ತೆಗೆದುಕೊಂಡಿದೆ. ಹರ್ಷ ಟ್ರಸ್ಟ್ ನಿಂದ 2015ರಲ್ಲಿ ಪಿಎಫ್ಐ ಸಂಘಟನೆಯ ಗಲಭೆಯಲ್ಲಿ ಮೃತಪಟ್ಟ ವಿಶ್ವನಾಥ್ ಮಗನ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತುಕೊಳ್ಳುತ್ತದೆ. ಕಾಸರಗೋಡಿನಲ್ಲಿ ಮೃತ ಆರ್ ಎಸ್ ಎಸ್ ಕಾರ್ಯಕರ್ತ ಜ್ಯೋತಿಶ್ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಹಾಯ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಇದೂ ಓದಿ: Harsha Charitable Trust: ಹತ್ಯೆಗೀಡಾದ ಹರ್ಷ ಕುಟುಂಬಸ್ಥರಿಂದ ಹರ್ಷ ಚಾರಿಟಬಲ್ ಟ್ರಸ್ಟ್ ಕಾರ್ಯಾರಂಭ

ಇದೂ ಓದಿ: ದಾವಣಗೆರೆಯ ದಾರುಣ ಘಟನೆ: ಆಂಬುಲೆನ್ಸ್​ನಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಕೊನೆಯುಸಿರೆಳೆದ ನವಜಾತ ಶಿಶು

Published On - 2:28 pm, Sat, 9 April 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ