ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿದೆ: ಆದ್ರೆ ಇದು ಸರ್ಕಾರಕ್ಕೆ ಸಂಬಂಧವಿಲ್ಲ ಎಂದ ಸಿಎಂ
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಇದೀಗ ಸಚಿವ ನಾಗೇಂದ್ರ ತಲೆದಂಡವಾಗಿದೆ. ವಿಪಕ್ಷಗಳು ಈ ಹಗರಣದ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಂತೆಯೇ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಷ್ಟಕ್ಕೆ ಬಿಡದ ಬಿಜೆಪಿ ಈ ಹಗರಣವನ್ನು ಇಟ್ಟುಕೊಂಡು ಅಧಿವೇಶನದಲ್ಲಿ ಭಾರೀ ಚರ್ಚೆ ನಡೆಸಿದೆ, ಇದರ ಬೆನ್ನಲ್ಲೇ ಇದೀಗ ಈ ಹಗರಣದ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿದ್ದು, ಹಗರಣ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಬೆಂಗಳೂರು, (ಜುಲೈ 19): ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಕೆಯ ಸಚಿವನಾಗಿದ್ದೇನೆ. ನಾಗೇಂದ್ರ ರಾಜೀನಾಮೆ ಕೊಟ್ಟ ಬಳಿಕ ನಾನೇ ಇಟ್ಟುಕೊಂಡಿದ್ದೇನೆ. ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿಲ್ಲ ಎಂದು ಹೇಳುತ್ತಿಲ್ಲ. ಅಕ್ರಮ ಆಗಿದೆ ಅಂತಲೇ ನಾವೂ ಹೇಳುತ್ತಿರುವುದು. ಅಕ್ರಮ ಮಾಡಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಮೂಲಕ ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಆದ್ರೆ, ಇದು ಸರ್ಕಾರಕ್ಕೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಬ್ಯಾಂಕ್ ಅಧಿಕಾರಿಗಳತ್ತ ಬೊಟ್ಟು ತೋರಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ಬಸನಗೌಡ ದದ್ದಲ್ ನ ವಾಲ್ಮೀಕಿ ನಿಗಮದ ಅಧ್ಯಕ್ಷನಾಗಿ ಮಾಡಿದ್ದೇವೆ. ನಾಗೇಂದ್ರ ಇಲಾಖೆ ಮಂತ್ರಿಯಾಗಿದ್ದರು. ಯೂನಿಯನ್ ಬ್ಯಾಂಕ್ ನಲ್ಲಿ ಶೋಭನಾ ಎನ್ನುವರು ಎಂಡಿ ಇದ್ದಾರೆ. ಅದೇ ಬ್ಯಾಂಕ್ ಎಂಜಿ ರಸ್ತೆಯಲ್ಲಿದೆ. ಯೂನಿಯನ್ ಬ್ಯಾಂಕ್ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತೆ. ವಸಂತನಗರದ ಬ್ಯಾಂಕ್ ನಿಂದ ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಗೆ ವರ್ಗಾವಣೆ ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಣ ವಸಂತನಗರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇಡುತ್ತಿದ್ದರು. ಸಾಮಾನ್ಯವಾಗಿ ಹಣಕಾಸು ವ್ಯವಹಾರ ನಿಭಾಯಿಸುವರು. ಡ್ರಾಯಿಂಗ್ ಅಂಡ್ ಡಿಸ್ಪರ್ಸಿಂಗ್ ಅಧಿಕಾರಿಯ ಜವಾಬ್ದಾರಿ. ಹೆಚ್ಚು ಜವಾಬ್ದಾರಿ ನಿಗಮದ ಎಂಡಿಯ ಮೇಲೆಯೇ ಇದೆ. ಇದು ಪಾಲಿಸಿ ಮೇಕಿಂಗ್ ಅಷ್ಟೇ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿನ 21 ಹಗರಣ ಪಟ್ಟಿ ಬಿಚ್ಚಿಟ್ಟ ಸಿದ್ದರಾಮಯ್ಯ: ಯಾವುವು? ಇಲ್ಲಿದೆ ನೋಡಿ
ಸರ್ಕಾರಕ್ಕೂ ಇದಕ್ಕೂ ಸಂಬಂಧ ಇಲ್ಲ
ಯೂನಿಯನ್ ಬ್ಯಾಂಕ್ ಡೆಪ್ಯುಟಿ ಮ್ಯಾನೇಜರ್ ಮಹೇಶ.ಜೆ ಅವರು ಜೂನ್ 3ರಂದು ದೀಪಾ, ಸುಚಿಶ್ಮಿತಾ ರಾವ್, ಚೀಫ್ ಮ್ಯಾನೇಜರ್, ಕೃಷ್ಣಮೂರ್ತಿ ಸೇರಿ ಹಲವರ ವಿರುದ್ದ ದೂರು ನೀಡಿದ್ದಾರೆ. ಅದರ ಮೇಲೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಗಿರೀಶ್ ಚಂದ್ರ ಜೋಶಿ, ಜೂನ್ 3ರಂದು ಎಂಜಿ ರಸ್ತೆಯ ಅದೇ ಅಧಿಕಾರಿಗಳ ವಿರುದ್ಧ ಸೆಕ್ಷನ್ 17A ಕ್ರಿಮಿನಲ್ ಕೇಸ್ ಬಗ್ಗೆ ಪತ್ರ ಬರೆದಿದ್ದಾರೆ. ದೀಪಾ, ಕೃಷ್ಣಾಮೂರ್ತಿ ಇಬ್ಬರೂ ದೂರು ಕೊಟ್ಟಿರೋದು ನೋಡೊಲ್ಲ. ಇದು ಸುಳ್ಳಾ? ಸರ್ಕಾರಕ್ಕೂ ಇದಕ್ಕೂ ಸಂಬಂಧ ಇಲ್ಲ . 25 ಕೋಟಿ ರೂ. ಅಧಿಕ ಹಣ ವರ್ಗಾವಣೆ ಆದ್ರೆ CBI ವ್ಯಾಪ್ತಿಗೆ ಬರುತ್ತೆ. ಯಾವಾಗ್ಲೂ ಕ್ಲಾರಿಟಿ ಇದ್ರೆ ಕ್ಲಿಯರ್ ಆಗಿರುತ್ತೆ. ಇಲ್ಲಾಂದ್ರೆ ಗೊಂದಲ ಆಗಿಬಿಡುತ್ತೆ. ಬ್ಯಾಂಕ್ ನವರೇ ಅಪ್ರೂವಲ್ ಕೊಡುತ್ತಾರೆ. ದೀಪಾ ಮತ್ತು ಸುಚಿಶ್ಮಿತಾ ಮೇಲೆ ಅದೇ ರೀತಿ ಇರುತ್ತೆ. ನೀಡ್ ಟೂ ಎಕ್ಸಾಮಿನ್ ಅಂತ ದೂರಿನಲ್ಲಿ ಬರೆದಿರುತ್ತಾರೆ. ಈ ಹಗರಣದಲ್ಲಿ ಎಸ್ ಐಟಿ, ಸಿಬಿಐ ವಿಚಾರಣೆ ನಡೆಸುತ್ತಿದ್ದಾರೆ. ಸೊಮೊಟೊ ವಿಚಾರಣೆಯನ್ನ ಇಡಿ ನಡೆಸುತ್ತಿದೆ. ಇಡಿ ಈಗಾಗಲೇ ದದ್ದಲ್, ನಾಗೇಂದ್ರ ಮನೆ ರೇಡ್ ಮಾಡಿದ್ದಾರೆ. ನಂತರ ವಿಚಾರಣೆಗೆ ಕರೆದು ನಾಗೇಂದ್ರರನ್ನ ಅರೆಸ್ಟ್ ಮಾಡಿದ್ದಾರೆ. ದದ್ದಲ್ನ ಸಹ ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದರು.
ಸೋಮವಾರದಿಂದ ಅಧಿವೇಶನ ಆರಂಭವಾಗಿದೆ. ವಿಧಾನಸಭೆ, ಪರಿಷತ್ ಅಧಿವೇಶ ಪ್ರಾರಂಭ ಆಯ್ತು. ಕಳೆದ ಬಾರಿ ಬಜೆಟ್ ಅಧಿವೇಶನ ಫೆಬ್ರವರಿ ತಿಂಗಳಲ್ಲಿ ನಡೆಯಿತು. ಆರು ತಿಂಗಳ ಅಂತರ ಕೊಟ್ಟು ಅಧಿವೇಶ ನಡೆಸಬೇಕು. ಮಳೆಗಾಲ ಅಧಿವೇಶನ ಪ್ರಾರಂಭ ಆಗಿದ್ದು, ಬಿಜೆಪಿ-ಜೆಡಿಎಸ್ ಜಂಟಿಯಾಗಿ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಪ್ರಸ್ತಾಪ ನಾಡಿದ್ದಾರೆ. ನಿಯಮ 60 ರಡಿ ಚರ್ಚೆ ಮಾಡಿದ್ರು. ನಿಯಮ 69ರ ಅಡಿ ಚರ್ಚೆಗೆ ಸ್ಪೀಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಒಟ್ಟು 7 ಗಂಟೆಗೂ ಅಧಿಕ ಕಾಲ ಚರ್ಚೆ ಮಾಡುತ್ತಾರೆ. ನಾವು ಉತ್ತರ ಕೊಡ್ತಾ ಇದ್ವಿ. ಅಷ್ಟೇ ಹಕ್ಕು ಸರ್ಕಾರದ ನಿಲುವನ್ನ ಹೇಳೋಕೆ ಹಕ್ಕು ಇದೆ ಎಂದರು.
ಅಧಿಕಾರಿಗಳ ಬಗ್ಗೆ ಅಶೋಕ್ ಏಕೆ ಪ್ರಸ್ತಾಪ ಮಾಡ್ತಿಲ್ಲ?
ವಸಂತನಗರ ಬ್ಯಾಂಕ್, ಓಡಿ, ಸರ್ಕಾರದ ಖಜಾನೆಯಲ್ಲಿದ್ದು ಸೇರಿ 187 ಕೋಟಿ 33 ಲಕ್ಷ ರೂಪಾಯಿ ಇತ್ತು ಎಂ.ಜಿ ರೋಡ್ ನಲ್ಲಿ ಮೂರು ಅಧಿಕಾರಿಗಳು ಇದ್ದಾರೆ. ಅಶೋಕ್ ಈ ಅಧಿಕಾರಿಗಳ ಬಗ್ಗೆ ಪ್ರಸ್ತಾಪ ಮಾಡೇ ಇಲ್ಲ. ಯಾಕೆ ವರ್ಗಾವಣೆ ಎಂದು ಇವರು ಕೇಳಬೇಕಲ್ಲ. 187 ಕೋಟಿ ರೂ. ಪೈಕಿ 89 ಕೋಟಿ 63 ಲಕ್ಷ 18 ಅಕೌಂಡ್ ಗಳಿಗೆ ಹೋಗುತ್ತೆ. ತೆಲಂಗಾಣ ಹೈದರಾಬಾದ್ಗೆ ಹೋಗುತ್ತೆ. 198 ಕೋಟಿ ರೂ. ಅಡೀಷನಲ್ ಅಕೌಂಟ್ಗೆ ಹೋಗುತ್ತೆ 117 ಅಕೌಂಟ್ ಗೆ ಹಣ ಹೋಗುತ್ತೆ. ರತ್ನಾಕರ ಅನ್ನೋದು ಕೋ-ಅಪರೇಟಿವ್ . ಯಾಕೆ ಅಲ್ಲಿ ಹೋಗುತ್ತೆ ಎಂದು ಅಧಿಕಾರಿಗಳು ಪ್ರಶ್ನೆ ಮಾಡಬೇಕಲ್ವಾ? ಅಶೋಕ್ ಈ ಅಧಿಕಾರಿಗಳ ಬಗ್ಗೆ ಯಾಕೆ ಪ್ರಸ್ತಾಪ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕನಿಗೆ ಪ್ರಶ್ನೆ ಮಾಡಿದರು.
ಇನ್ನು ಇದೇ ವೇಳೆ ಚಂದ್ರಶೇಖರ್ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಜೆ.ಜಿ ಪದ್ಮನಾಭ, ಪರಶುರಾಮ, ಸುಚಿಸ್ಮಿತಾ ರಾವ್ ಎಂದು ಮೂರು ಜನ ಕಾರಣ ಎಂದು ಚಂದ್ರಶೇಖರ್ ಡೆತ್ ನೋಟ್ ಬರೆದಿದ್ದಾರೆ. ಸಚಿವರು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಶಿವಕುಮಾರ್ ಎನ್ನುವ ವ್ಯಕ್ತಿ ನಮ್ಮ ನಿಗಮದಲ್ಲೇ ಇಲ್ಲ. ಸಾಯಿ ತೇಜನ ಕಳಿಸಿ ಶಿವಕುಮಾರ್ ಅಂತ ಇವರೇ ಹೆಸರಿಡುತ್ತಾರೆ. ಲೂಟಿ ಹೊಡೆದವರು ಹೆಸರು ಬದಲಿಸುತ್ತಾರೆ. ಬಳಿಕ ಶಿವಕುಮಾರ್ ಕೈಗೆ ದಾಖಲೆ ಕೊಡುತ್ತಾರೆ. ಸಾಯಿ ತೇಜ ಎಂಬವನೇ ಶಿವಕುಮಾರ. ಅವನ ಹೆಸರು ಹೇಳಿಕೊಂಡು ಇವನೇ ಹೋಗ್ತಾನೆ ಎಂದು ಗಂಭೀರ ಆರೋಪ ಮಾಡಿದರು.
187 ಕೋಟಿ 33 ಲಕ್ಷ ಎಂಜಿ ರಸ್ತೆ ಬ್ಯಾಂಕ್ ಗೆ ಸೇರುತ್ತೆ. ಈ ಬಗ್ಗೆ ಏಪ್ರಿಲ್ 17ರಂದು ಚಂದ್ರಶೇಖರ್ ಪತ್ನಿ ದೂರು ಕೊಡುತ್ತಾರೆ. ಬಳಿಕ ಎಫ್ ಐಆರ್ ಆಗುತ್ತೆ. ನಂತರ ಏಪ್ರಿಲ್ 28ರಂದು ವಾಲ್ಮೀಕಿ ನಿಗಮನದ ಮ್ಯಾನೇಜರ್ ರಾಜಶೇಖರ್ ಅವರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು ಕೊಡುತ್ತಾರೆ. ಇದಾದ್ಮೇಲೆ ಪೊಲೀಸರು ನನಗೆ ಹೇಳಿದ್ದಾರೆ. ಬಳಿಕ ಹೆಚ್ಚು ಹಣ ಇರುವ ಕಾರಣ ಸ್ಪೆಷಲ್ ಟೀಂಗಾಗಿ CID ವಹಿಸಿದ್ದೇನೆ ಎಂದರು.
ಪರೋಕ್ಷವಾಗಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಿಎಂ ಆರೋಪ
ಅಕೌಂಡ್ ನವರು ಆರ್ಥಿಕ ಇಲಾಖೆಗೆ ತಿಳಿಸಬೇಕು, ತಿಳಿಸದೆ ಮಾಡುವ ಹಾಗಿಲ್ಲ. ಬೋರ್ಡ್ ಮೀಟಿಂಗ್ ನಲ್ಲಿ ಅನುಮತಿ ಪಡೆದಿರುವುಲ್ಲ. ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಆಗುವುದಿಲ್ಲ. ಅದನ್ನೇ ಬ್ಯಾಂಕ್ ನವರು ಹೇಳಿದ್ದಾರೆ. ನೀತಿ ಸಂಹಿತೆ ಇದ್ರೆ ಯಾಕೆ ಸಭೆ ಮಾಡಲು ಒಪ್ಪಿಕೊಂಡ್ರಿ ಅಂತ ಕೇಳಿದ್ದಾರೆ. ಇದೆಲ್ಲ ಆರ್ಗನೈಸ್ಡ್ . ತನಿಖೆ ಪೂರ್ಣ ಆಗಿಲ್ಲ. ಯಾರನ್ನೂ ಜವಾಬ್ದಾರರನ್ನಾಗಿ ಮಾಡುವುದಿಲ್ಲ. ಕನಿತಾ, ಪದ್ಮನಾಭ, ಪರಶುರಾಮ್, ಸುಚಿಶ್ಮಿತಾ ರಾವ್ ವಿರುದ್ಧ ಎಫ್‌ಐಆರ್ ಆಗಿದೆ. ಮೂರನೇ ದೂರನ್ನು ಬ್ಯಾಂಕ್ ನವರೇ ನೀಡಿದ್ದಾರೆ ಎಂದರು.
ಮೊದಲ ಕಂತು ಪ್ರಧಾನ ಕಾರ್ಯದರ್ಶಿ, ನಂತರ ನಿಗಮದ ಮುಖ್ಯಸ್ಥ, ಎಂಡಿಗೆ ಕೊಡುತ್ತಾರೆ. 2023-24ರಲ್ಲಿ ಖಜಾನೆಯಲ್ಲಿ ಇರುತ್ತೆ. ಕಲ್ಲೇಶ್ ಎಂಬವನೇ ನಿರ್ದೇಶಕ. ಖಜಾನೆಯಿಂದ ಅವನೇ ಡ್ರಾ ಮಾಡಿಕೊಂಡಿದ್ದಾರೆ. ನಂತರ ಅಲ್ಲಿ ಇಟ್ಟಿದ್ದಾನೆ, ಇದಕ್ಕೆ ಯಾರು ಹೊಣೆ? ಯಾರು ಜವಾಬ್ದಾರರು? ಡೆತ್ ನೋಟ್ ನಲ್ಲಿ ನಾಗೇಂದ್ರ ಹೆಸರು ಇದ್ದಿದ್ದಕ್ಕೆ ರಾಜೀನಾಮೆ ಕೊಡು ಎಂದು ನಾನೇ ಹೇಳಿದೆ. ವೀಡಿಯೋ ರೆಕಾರ್ಡ್ ನಲ್ಲಿ ಸಂಬಂಧಿತ ಸಚಿವರ ಮೌಖಿಕ ಆದೇಶ ಅಂತಾನೂ ಇತ್ತು. ಇದಕ್ಕಾಗಿ ನಾಗೇಂದ್ರ ರಾಜೀನಾಮೆ ಪಡೆದುಕೊಂಡೆ ಎಂದು ಸ್ಪಷ್ಟಪಡಿಸಿದರು.
ಅಕ್ರಮವಾಗಿರುವ ಹಣ ಮಾಹಿತಿ ನೀಡಿದ ಸಿಎಂ
ಎಸ್ ಐಟಿನವರು ತನಿಖೆ ನಡೆಸಿದ್ದಾರೆ. ಎಸ್ ಐಟಿರಚನೆ ಆಗಿ ಎರಡು ತಿಂಗಳಾಗಿಲ್ಲ. ಈವರೆಗೆ 12 ಜನರನ್ನ ಬಂಧಿಸಿದ್ದಾರೆ. ಪದ್ಮನಾಭ, ಪರಶುರಾಮ, ನಾಗೇಶ್ವರ್ ರಾವ್, ಗಾಧಿರಾವ್, ಜಗದೀಶ್, ಸಾಯಿತೇಜ, ಶ್ರೀನಿವಾಸ್ ಸೇರಿ 9 ಜನರಿಗೆ ಜೈಲಿಗೆ ಕಳುಹಿಸಿದ್ದಾರೆ. 3 ಜನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇನ್ನು ಒಟ್ಟು 89.63 ಕೋಟಿಯಲ್ಲಿ 5 ಕೋಟಿ ವಾಪಾಸ್ ಬಂದಿದೆ. ದುಡ್ಡು ಹಂಚಿಕೊಂಡಿದ್ದ 14 ಕೋಟಿ 34 ಲಕ್ಷ ರೂ. ರಿಕವರಿ ಮಾಡಿದ್ದಾರೆ 84.63 ಲಕ್ಷ ಬಾಕಿ ಉಳಿದುಕೊಂಡಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಆರೋಪಗಳಿಗೆ ಸಿಎಂ ತಿರುಗೇಟು
ಸಿಎಂ ರಾಜೀನಾಮೆ ಕೊಡ್ಬೇಕು ಅಂತ ಬಿಜೆಪಿಯವರು ಹೇಳ್ತಿದ್ದಾರೆ. ದಲಿತರ ಹಣ ತಿಂದಿದ್ದಾರೆ ಅಂತಿದ್ದಾರೆ. ಇವರು ದಲಿತರ ಪರ ಯಾವಾಗ ಇದ್ರು? ದಲಿತರ ಕಾರ್ಯಕ್ರಮ ಮಾಡಿದವರು ನಾವು. 4% ಬ್ಯಾಂಕ್ ಸಾಲ ಮಾಡಿದವರು ನಾವು. ಅವರು ಏನು ಮಾಡಿದ್ದಾರೆ? ಭೋಮಿ ಅಭಿವೃದ್ಧಿ ಯಾರದು? ಬಿಮ್ಮಾಯಿ ಸಿಎಂ ಆಗಿದ್ದಾಗ 87 ಕೋಟಿಗೂ ಅಧಿಕ ಹಣ ಅವ್ಯಹಾರ ಆಯಿತು. ಯಾರು ರಾಜೀನಾಮೆ ಕೊಟ್ರು? ಬೊಮ್ಮಾಯಿ ಕೊಟ್ರಾ? ಎಪಿಎಂಸಿ 46.18 ಕೋಟಿ ರೂ. ಲೂಟಿ ಆಯ್ತು. ಆಗ ಯಡಿಯೂರಪ್ಪ ಸಿಎಂ ಆಗಿದ್ರು. ಅವರು ರಾಜೀನಾಮೆ ಕೊಟ್ರಾ? ಎಂದು ಬಿಜೆಪಿಗೆ ತಿರುಗೇಟು ನಿಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.