ಲಿಂಗೈಕ್ಯ ಡಾ.ಶಿವಕುಮಾರಶ್ರೀಗಳಿಗೆ ಭಾರತ ರತ್ನ ನೀಡಲೇಬೇಕು -ವಾಟಾಳ್ ನಾಗರಾಜ್ ‘ಏಕಾಂಗಿ’ ಸತ್ಯಾಗ್ರಹ
ನಡೆದಾಡುವ ದೇವರು, ತ್ರಿವಿಧ ದಾಸೋಹಿಗಳಾದ ಲಿಂಗೈಕ್ಯ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಲೇಬೇಕೆಂದು ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ಸತ್ಯಾಗ್ರಹಕ್ಕೆ ಇಳಿದರು.
ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿಗಳಾದ ಲಿಂಗೈಕ್ಯ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಲೇಬೇಕೆಂದು ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ಚಳುವಳಿಗೆ ಇಳಿದರು.
ಏಕಾಂಗಿ ಸತ್ಯಾಗ್ರಹ ಆರಂಭಿಸಿದ ವಾಟಾಳ್ ನಾಗರಾಜ್ ಜಿಲ್ಲೆಯ ಕ್ಯಾತಸಂದ್ರ ರೈಲ್ವೇ ನಿಲ್ದಾಣದಲ್ಲಿ ರೈಲು ಹಳಿ ಮೇಲೆ ಕೂತು ಪ್ರತಿಭಟನೆ ನಡೆಸಿದರು. ಈ ಕೂಡಲೇ ಲಿಂಗೈಕ್ಯರಾದ ಡಾ.ಶಿವಕುಮಾರಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ವಾಟಾಳ್ ಆಗ್ರಹಿಸಿದರು. ಈ ವೇಳೆ, ರೈಲ್ವೇ ಹಳಿ ಮೇಲೆ ಕುಳಿತು ಸತ್ಯಾಗ್ರಹ ನಡೆಸ್ತಿರೋ ವಾಟಾಳ್ಗೆ ಕೆಲ ಅಭಿಮಾನಿಗಳು ಸಾಥ್ ಕೊಟ್ಟರು.
ಕರ್ನಾಟಕ ಬಂದ್ ಆಯ್ತು ಈಗ ರೈಲು ಬಂದ್ಗೆ ಕರೆ ನೀಡಿದ ವಾಟಾಳ್ ನಾಗರಾಜ್