ಚುನಾವಣೆಯಲ್ಲಿ ಸೋತರೂ ಉಚ್ಚಗೆಮ್ಮೆ ದೇವಿಗೆ ಚಿನ್ನದ ಮುಖವಾಡ ನೀಡಿ ಹರಕೆ ತೀರಿಸಿದ ಮಾಜಿ ಶಾಸಕ ಎಸ್ ವಿ ಆರ್
ಉಚ್ಚಂಗಿದುರ್ಗ ವಿಜಯ ನಗರ ಜಿಲ್ಲೆಯ ವ್ಯಾಪ್ತಿಗೆ ಬಂದರು ಅದು ಬರುವುದು ಜಗಳೂರರು ವಿಧಾನ ಸಭೆ ವ್ಯಾಪ್ತಿಯಲ್ಲಿ. ಮೇಲಾಗಿ ಉಚ್ಚಗೆಮ್ಮ ಮಾಜಿ ಶಾಸಕ ಎಸ್ ವಿ ರಾಮಚಂದ್ರ ಅವರ ಮನೆ ದೇವರು. ಯಾವುದೇ ಕಾರ್ಯ ಮಾಡಿದರು ಮಾಯಮ್ಮ ಹಾಗೂ ಉಚ್ಚಂಗೆಮ್ಮನಿಗೆ ಪೂಜೆ ಸಲ್ಲಿಸಿಯೇ ರಾಮಚಂದ್ರ ಅವರು ಮುಂದಿನ ಕೆಲ್ಸ ಮಾಡೋದು.
ದಾವಣಗೆರೆ: ಜಿಲ್ಲೆಯ ಜಗಳೂರಿನ ಮಾಜಿ ಶಾಸಕ ಎಸ್ ವಿ ರಾಮಚಂದ್ರ(SV Ramachandra )ಅಂದ್ರೆ ದೈವಭಕ್ತಿಗೆ ಹೆಸರುವಾಸಿ. ವರ್ಷದಲ್ಲಿ ಒಂದಿಲ್ಲೊಂದು ಹಬ್ಬಕ್ಕೆ ದೇವರಿಗೆ ಹರಕೆ ತೀರಿಸುವುದು ಇವರ ಸಂಪ್ರದಾಯ. ಇವರ ಪತ್ನಿ ಇಂದಿರಾ ಅಷ್ಟೆ ದೈವ ಭಕ್ತಿ ಇರುವ ಮಹಿಳೆ. ಇಂದು ವಿಜಯನಗರ ಜಿಲ್ಲೆಯ ಹಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಇರುವ ಉಚ್ಚಗೆಮ್ಮೆ ದೇವಿಗೆ(Ucchangemma Devi) ರಾಮಚಂದ್ರ ಅವರು ಹರಕೆ ತೀರಿಸಿದ್ದಾರೆ. ವಿಶೇಷ ಅಂದ್ರೆ ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ದೇವೇಂದ್ರಪ್ಪ ವಿರುದ್ಧ ಕೇವಲ 873 ಮತಗಳಿಂದ ಸೋಲು ಕಂಡಿದ್ದರು. ರಾಮಚಂದ್ರ ಅವರು ಮೂರು ಸಲ ಶಾಸಕರಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹೆಸರು ಮಾಡಿದವರು.
ಉಚ್ಚಂಗಿದುರ್ಗ ವಿಜಯ ನಗರ ಜಿಲ್ಲೆಯ ವ್ಯಾಪ್ತಿಗೆ ಬಂದರು ಅದು ಬರುವುದು ಜಗಳೂರರು ವಿಧಾನ ಸಭೆ ವ್ಯಾಪ್ತಿಯಲ್ಲಿ. ಮೇಲಾಗಿ ಉಚ್ಚಗೆಮ್ಮ ಮಾಜಿ ಶಾಸಕ ಎಸ್ ವಿ ರಾಮಚಂದ್ರ ಅವರ ಮನೆ ದೇವರು. ಯಾವುದೇ ಕಾರ್ಯ ಮಾಡಿದರು ಮಾಯಮ್ಮ ಹಾಗೂ ಉಚ್ಚಂಗೆಮ್ಮನಿಗೆ ಪೂಜೆ ಸಲ್ಲಿಸಿಯೇ ರಾಮಚಂದ್ರ ಅವರು ಮುಂದಿನ ಕೆಲ್ಸ ಮಾಡೋದು. ಈಗ ಗಮನ ಸೆಳೆದಿದ್ದು ಅಂದ್ರೆ ಚುನಾವಣೆಯಲ್ಲಿ ಸೋಲು ಕಂಡರೂ ಸಹ ದೇವಿಯ ಹರಕೆ ರೀರಿಸುವುದನ್ನ ಮಾತ್ರ ನಿಲ್ಲಿಸಿಲ್ಲ ರಾಮಚಂದ್ರ. ಇದೇ ಕಾರಣಕ್ಕೆ ಇಂದು ಸಹ ಕುಟುಂಬ ಸದಸ್ಯರೊಂದಿಗೆ ಉಚ್ಚಂಗಿದುರ್ಗಕ್ಕೆ ತೆರಳಿದ ರಾಮಚಂದ್ರ ಅವರು ದೇವಿಗೆ ಚಿನ್ನದ ಮುಖ ಅರ್ಪಿಸಿದರು. ಇದರ ತೂಕ ಅಂದಾಜು 200 ಗ್ರಾಂ ಎನ್ನಲಾಗಿದೆ. ದೇವರಿಗೆ ಕೊಟ್ಟಿದ್ದನ್ನ ಲೆಕ್ಕ ಹಾಕಬಾರದು ಎನ್ನುತ್ತಾರೆ ರಾಮಚಂದ್ರ.
ಇದನ್ನೂ ಓದಿ: ಮೊಟ್ಟೆ ಖರೀದಿಸಲು ಬಿಡುಗಡೆಯಾಗದ ಅನುದಾನ: ಸಾಲದ ಸುಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು
200 ಗ್ರಾಂ ಚಿನ್ನ ಅಂದ್ರೆ ಅಂದಾಜು ಹತ್ತರಿಂದ ಹನ್ನೇರಡು ಲಕ್ಷ ಆಗುತ್ತದೆ. ಹೀಗೆ ದೇವಿ ಮುಖ ಮಾಡಿಸಿ ಕೊಡುವ ಬಗ್ಗೆ ಮಾಜಿ ಶಾಸಕರು ಹರಕೆ ಕಟ್ಟಿಕೊಂಡಿದ್ದರು. ಚುನಾವಣೆ ಮುಗಿದ ಮೇಲೆ ದೇವಿಗೆ ಚಿನ್ನದ ಮುಖ ಮಾಡಿ ಕೊಡುವುದಾಗಿ ಬೇಡಿಕೊಂಡಿದ್ದರು. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಹೀಗಾಗಿ ಚುನಾವಣೆ ಮುಗಿದ ಬಳಿಕ ದೇವಿಗೆ ಹರಕೆ ಒಪ್ಪಿಸುತ್ತೇನೆ ಎಂದು ಬೇಡಿಕೊಂಡಿದ್ದರು. ಇದೇ ರೀತಿ ದೇವಿಗೆ ಬೇಡಿಕೊಂಡ ಕ್ಷಣದಲ್ಲಿ ದಾವಣಗೆರೆ ಚಿನ್ನದ ಅಂಗಡಿಯವರಿಗೆ ದೇವಿಯ ಫೋಟೋ ಕೊಟ್ಟು ದೇವಿಯ ಮುಖ ಮಾಡುವಂತೆ ಹೇಳಿದ್ದರು. ಚುನಾವಣೆ ಓಡಾಟ ಫಲಿತಾಂಶ, ಪಕ್ಷದ ವರಿಷ್ಠ ಸಭೆಗಳು ಜೊತೆಗೆ ಚುನಾವಣಾ ಫಲಿತಾಂಶದ ಚರ್ಚೆ ಹೀಗೆ ಹತ್ತು ಹಲವಾರು ಗದ್ದಲಗಳಿಂದ ಮುಕ್ತರಾದ ಬಳಿಕ ಮಾಜಿ ಶಾಸಕ ಎಸ್ ವಿ ಆರ್ ಇಂದು ದೇವಿಗೆ ಚಿನ್ನದ ಮುಖ ಒಪ್ಪಿಸಿದ್ದಾರೆ.
2008ರಲ್ಲಿ ಕಾಂಗ್ರೆಸ್ಸಿನಿಂದ ಜಗಳೂರು ಕ್ಷೇತ್ರದಿಂದ ಶಾಸಕರಾಗಿ, ನಂತರ ಬಿಜೆಪಿ ಸೇರಿ 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆದ್ದರು. ಮುಂದೆ 2018ರಲ್ಲಿ ಬಿಜೆಪಿಯಿಂದಲೇ ಶಾಸಕರಾದ್ರು. ಮೂರು ಸಲ ಶಾಸಕರಾಗಿದ್ದು, ಮಾಜಿ ಸಿಎಂ ಬಿಎಸ್ ವೈ ಅವರ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದರು. ಮೇಲಾಗಿ ಮಾಜಿ ಶಾಸಕ ಅವರ ತಾಯಿ ಕೂಡಾ ಉಚ್ಚಂಗೆಮ್ಮನ ಅಪ್ಪಟ ಭಕ್ತಿ. ಅವರು ಇರುವಷ್ಟು ದಿನ ಹುಣ್ಣಿಮೆ ಅಮವಾಸ್ಯೆಗೆ ತಪ್ಪದೆ ಉಚ್ಚಂಗೆಮ್ಮನ ದರ್ಶನ ಪಡೆಯುತ್ತಿದ್ದರು. ಅವರ ನಿಧನದ ನಂತರ ಕೂಡಾ ಪುತ್ರ ರಾಮಚಂದ್ರ ತಾಯಿಯಷ್ಟೆ ಭಕ್ತಿ ಉಚ್ಚಂಗೆಮ್ಮನ ಮೇಲೆ ಇಟ್ಟಿದ್ದಾರೆ. ಅದರ ಪ್ರತೀಕವೇ ಚಿನ್ನದ ಮುಖ ಮಾಡಿಸಿಕೊಟ್ಟಿದ್ದಾರೆ. ಇದಕ್ಕೆ ದೇವಿಯ ಆಳು ಮಗ ಎಂದೇ ನೇಮಕವಾಗಿ ಬಾಲ ಪೂಜಾರಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಗುರ್ಭ ಗುಡಿಯಲ್ಲಿ ಇರುವ ದೇವಿಯ ಮುಖಕ್ಕೆ ಚಿನ್ನದ ಮುಖ ಹಾಕಿ ಪೂಜೆ ಸಲ್ಲಿಸಲಾಯಿತು. ಇದಕ್ಕಾಗಿ ಉಚ್ಚಂಗಿದುರ್ಗ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ಗ್ರಾಮಸ್ಥರು ಸೇರಿ ವಿಶೇಷ ಕಾರ್ಯ ಕ್ರಮವನ್ನ ಸಹ ಮಾಡಿದ್ರು.
ಬಹುತೇಕರು ದೇವರಿಗೆ ಬೇಡಿಕೆ ಇಟ್ಟು ಆ ಬೇಡಿಕೆ ಪೂರೈಕೆ ಆದ್ರೆ ಮಾತ್ರ ಹರಕೆ ತೀರಿಸುವುದು ವಾಡಿಕೆ. ಆದ್ರೆ ಮಾಜಿ ಶಾಸಕ ರಾಮಚಂದ್ರ ಅವರು ಮಾತ್ರ ಇದಕ್ಕೆ ವಿರೋಧ.ಯಾವುದೇ ಬೇಡಿಕೆ ಇಡದೇ. ಚುನಾವಣೆಯಲ್ಲಿ ಅಲ್ಪ ಮತದಲ್ಲಿ ಸೋಲು ಕಂಡರೂ ತಮ್ಮ ಹರಕೆಯನ್ನ ತಾವು ಬಂದು ತೀರಿಸಿದ್ದು ಇಡೀ ಕ್ಷೇತ್ರದಲ್ಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ.
ದಾವಣಗೆರೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ