ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಬರುವ ಮುನ್ನ ಫ್ಯಾನ್ ಹಿಡಿದುಕೊಂಡೇ ಬನ್ನಿ! ತಿಂಗಳಿಗೆ ಸಾವಿರ ಹೆರಿಗೆಯಾಗುವ ಆಸ್ಪತ್ರೆಯಲ್ಲಿಲ್ಲ ಕನಿಷ್ಠ ಮೂಲ ಸೌಕರ್ಯ

ವಿಜಯನಗರ ಜಿಲ್ಲೆಯ ಹೊಸಪೇಟೆ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎಸಿ ಹಾಗೂ ಫ್ಯಾನ್‌ಗಳು ಕೆಟ್ಟು ನಿಂತಿದ್ದು, ಬಾಣಂತಿಯರು ಮತ್ತು ನವಜಾತ ಶಿಶುಗಳು ಬಿಸಿಲ ತಾಪಕ್ಕೆ ತತ್ತರಿಸುತ್ತಿದ್ದಾರೆ. ಸೌಲಭ್ಯಗಳ ಕೊರತೆಯಿಂದಾಗಿ ರೋಗಿಗಳು ಮನೆಯಿಂದಲೇ ಫ್ಯಾನ್ ತರುವ ಅನಿವಾರ್ಯತೆ ಎದುರಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಕ್ಷಣದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಬರುವ ಮುನ್ನ ಫ್ಯಾನ್ ಹಿಡಿದುಕೊಂಡೇ ಬನ್ನಿ! ತಿಂಗಳಿಗೆ ಸಾವಿರ ಹೆರಿಗೆಯಾಗುವ ಆಸ್ಪತ್ರೆಯಲ್ಲಿಲ್ಲ ಕನಿಷ್ಠ ಮೂಲ ಸೌಕರ್ಯ
ತಿಂಗಳಿಗೆ ಸಾವಿರ ಹೆರಿಗೆಯಾಗುವ ಆಸ್ಪತ್ರೆಯಲ್ಲಿ ಬಾಣಂತಿಯರಿಗಿಲ್ಲ ಎಸಿ ವ್ಯವಸ್ಥೆ
Edited By:

Updated on: May 02, 2026 | 11:04 AM

ವಿಜಯನಗರ, ಮೇ 02: ಜಿಲ್ಲೆಯಲ್ಲಿ ಬಿಸಿಲಿನ ತಾಪ (Weather) ಹೆಚ್ಚಾಗಿದ್ದು, ಜನರ ಅವಸ್ಥೆ ಹೇಳಲು ಅಸಾಧ್ಯವಾಗಿದೆ. ಇದರ ನಡುವೆ ಹೊಸಪೇಟೆ ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗಂಭೀರ ಅವ್ಯವಸ್ಥೆ ಬೆಳಕಿಗೆ ಬಂದಿದೆ. ಹೆರಿಗೆ ವಾರ್ಡ್‌ನಲ್ಲಿ ಎಸಿ ಹಾಗೂ ಫ್ಯಾನ್‌ಗಳು ಕಾರ್ಯನಿರ್ವಹಿಸದೆ ಇರುವುದರಿಂದ ಬಾಣಂತಿಯರು ಮತ್ತು ನವಜಾತ ಶಿಶುಗಳು ಬೇಸಿಗೆಯ ಬಿಸಿಗೆ ತತ್ತರಿಸುತ್ತಿದ್ದಾರೆ.

ಫ್ಯಾನ್​, ಎಸಿಗಳು ಇಲ್ಲಿ ಶೋ ಕೇಸ್ ವಸ್ತುಗಳಷ್ಟೆ!

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಿದ್ದ ಎಸಿಗಳು ಈಗ ಸಂಪೂರ್ಣ ಹಾಳಾಗಿದ್ದು, ರಿಪೇರಿ ಮಾಡುವವರೆ ಇಲ್ಲವೆಂದು ಆಸ್ಪತ್ರೆಗೆ ಬಂದವರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ಫ್ಯಾನ್‌ಗಳು ನಿಧಾನವಾಗಿ ತಿರುಗುತ್ತಿದ್ದು, ಇನ್ನೂ ಹಲವಾರು ಫ್ಯಾನ್‌ಗಳು ನಿಂತಲ್ಲೇ ನಿಂತಿವೆ. ಇದರ ಪರಿಣಾಮವಾಗಿ ಹೆರಿಗೆಗೆ ಬರುವವರು ಮನೆಯಿಂದಲೇ ಫ್ಯಾನ್ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಮನೆಯಿಂದ ಫ್ಯಾನ್ ತರದಿದ್ದರೆ 3 ಸಾವಿರ ರೂಪಾಯಿ ವೆಚ್ಚದಲ್ಲಿ ಹೊಸ ಫ್ಯಾನ್ ಖರೀದಿಸಬೇಕಾಗುತ್ತದೆ ಎಂದು ಜನ ಹೇಳುತ್ತಿದ್ದಾರೆ.

ಇದನ್ನೂ ಓದಿ ತುಮಕೂರಿನಲ್ಲಿ ಹಕ್ಕಿ ಜ್ವರದ ಭೀತಿ: ನವಿಲುಗಳ ಸಾವಿನ ಬೆನ್ನಲ್ಲೇ ಈಗ 30 ಕೋಳಿಗಳ ಸಾವು! ಜಿಲ್ಲೆಯಲ್ಲಿ ಹೈ ಅಲರ್ಟ್​

ತಿಂಗಳಿಗೆ 1000 ರಿಂದ 1500 ಹೆರಿಗೆಗಳು ನಡೆಯುವ ಈ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬಂದಿದೆ. ಹಿಂದಿನ ಡಿಸಿ ಎಂಎಸ್ ದಿವಾಕರ್ ಅವಧಿಯಲ್ಲಿ ಅಳವಡಿಸಿದ್ದ ಎಸಿಗಳು ನಿರ್ಲಕ್ಷ್ಯದಿಂದ ಬಳಕೆಗೆ ಅಸಾಧ್ಯವಾಗಿವೆ. ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:10 am, Sat, 2 May 26

Vinayak Badiger
Follow Us