ಹೊಸಪೇಟೆ- ಅರಸೀಕೆರೆ ನಡುವೆ ಡಿಇಎಂಯು ವಿಶೇಷ ರೈಲು ಸೇವೆ ಆರಂಭ: ಇಲ್ಲಿದೆ ಮಾಹಿತಿ

ಹೊಸಪೇಟೆ ಜಂಕ್ಷನ್ ಹಾಗೂ ಅರಸೀಕೆರೆ ಜಂಕ್ಷನ್ ನಡುವೆ 5 ದಿನಗಳ ಅನ್‌ರಿಸರ್ವ್ಡ್ ಡಿಇಎಂಯು ವಿಶೇಷ ರೈಲು ಸೇವೆ ಆರಂಭವಾಗಿದ್ದು, ವಿಜಯನಗರ ಹಾಗೂ ಮಧ್ಯ ಕರ್ನಾಟಕದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ವಿಜಯನಗರ ರೈಲ್ವೆ ಬಳಕೆದಾರರ ಸಂಘ ಹಾಗೂ ಹಗರಿಬೊಮ್ಮನಹಳ್ಳಿ-ಕೊಟ್ಟೂರು ರೈಲ್ವೆ ಸಮಿತಿಗಳು ಹಲವು ವರ್ಷಗಳಿಂದ ರೈಲು ಸಂಪರ್ಕ ಸುಧಾರಣೆಗೆ ಒತ್ತಾಯಿಸುತ್ತಿದ್ದವು. ಅದಕ್ಕೀಗ ಫಲ ಸಿಕ್ಕಿದೆ.

ಹೊಸಪೇಟೆ- ಅರಸೀಕೆರೆ ನಡುವೆ ಡಿಇಎಂಯು ವಿಶೇಷ ರೈಲು ಸೇವೆ ಆರಂಭ: ಇಲ್ಲಿದೆ ಮಾಹಿತಿ
ವಿಶೇಷ ರೈಲು

Updated on: Aug 28, 2026 | 2:17 PM

ಹೊಸಪೇಟೆ, ಆಗಸ್ಟ್​​ 28: ಹೊಸಪೇಟೆ ಜಂಕ್ಷನ್ ಮತ್ತು ಅರಸೀಕೆರೆ ಜಂಕ್ಷನ್ ನಡುವೆ ವಾರದ 5 ದಿನಗಳ ಕಾಲ ಸಂಚರಿಸಲಿರುವ ಡಿಇಎಂಯು ವಿಶೇಷ ರೈಲು ಸೇವೆ ಇಂದಿನಿಂದ ಆರಂಭವಾಗಿದ್ದು, ಇದರಿಂದ ವಿಜಯನಗರ ಹಾಗೂ ಮಧ್ಯ ಕರ್ನಾಟಕದ ನಡುವಿನ ಹಗಲು ರೈಲು ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ನಿರೀಕ್ಷೆ ಮೂಡಿದೆ. ಕಾಯ್ದಿರಿಸದ (ಅನ್‌ರಿಸರ್ವ್ಡ್) ಈ ರೈಲು ಸೋಮವಾರದಿಂದ ಶುಕ್ರವಾರದವರೆಗೆ ಸಂಚರಿಸಲಿದೆ. ಬೆಳಗ್ಗೆ 6.30ಕ್ಕೆ ಹೊಸಪೇಟೆಯಿಂದ ಹೊರಟು ಕೊಟ್ಟೂರು, ದಾವಣಗೆರೆ ಹಾಗೂ ಕಡೂರು ಮಾರ್ಗವಾಗಿ ಮಧ್ಯಾಹ್ನ 2.20ಕ್ಕೆ ಅರಸೀಕೆರೆ ತಲುಪಲಿದೆ. ವಾಪಸ್‌ ಮಧ್ಯಾಹ್ನ 2.30ಕ್ಕೆ ಅರಸೀಕೆರೆಯಿಂದ ಹೊರಟು ರಾತ್ರಿ 9.30ಕ್ಕೆ ಹೊಸಪೇಟೆ ತಲುಪಲಿದೆ.

ಈ ರೈಲು ಸೇವೆಯಿಂದ ಏನೆಲ್ಲ ಅನುಕೂಲ?

ಶಿಕ್ಷಣ, ವ್ಯಾಪಾರ, ಆರೋಗ್ಯ ಸೇವೆ ಸೇರಿದಂತೆ ವಿವಿಧ ಅಗತ್ಯಗಳಿಗಾಗಿ ದಾವರಣಗೆರೆಯನ್ನು ಅವಲಂಬಿಸಿರುವ ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳ ನಿವಾಸಿಗಳಿಗೆ ಈ ರೈಲು ಸೇವೆಯಿಂದ ಹೆಚ್ಚಿನ ಅನುಕೂಲವಾಗಲಿದೆ. ಅರಸೀಕೆರೆಯಿಂದ ಪ್ರಯಾಣಿಸುವವರಿಗೂ ಮೈಸೂರು ಸೇರಿದಂತೆ ಹಾಸನ, ಬೇಲೂರು-ಹಳೇಬೀಡು, ಶ್ರವಣಬೆಳಗೊಳ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ ಹಾಗೂ ಮಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಿಗೆ ಸುಲಭ ಸಂಪರ್ಕ ದೊರೆಯಲಿದೆ. ಇದರಿಂದ ಪ್ರವಾಸೋದ್ಯಮ, ಯಾತ್ರೆ ಹಾಗೂ ವಿದ್ಯಾರ್ಥಿಗಳ ಪ್ರಯಾಣಕ್ಕೂ ಉತ್ತೇಜನ ಸಿಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಭುವನೇಶ್ವರ – ಯಶವಂತಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

ಫಲಕೊಟ್ಟ ಹಲವು ವರ್ಷಗಳ ಪ್ರಯತ್ನ

ವಿಜಯನಗರ ರೈಲ್ವೆ ಬಳಕೆದಾರರ ಸಂಘ ಹಾಗೂ ಹಗರಿಬೊಮ್ಮನಹಳ್ಳಿ-ಕೊಟ್ಟೂರು ರೈಲ್ವೆ ಸಮಿತಿಗಳು ಹಲವು ವರ್ಷಗಳಿಂದ ರೈಲು ಸಂಪರ್ಕ ಸುಧಾರಣೆಗೆ ಒತ್ತಾಯಿಸುತ್ತಿದ್ದವು. ನಂದೀಪುರ ಮಠದ ಮಹೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಈ ಪ್ರಯತ್ನಗಳು ನಡೆದಿದ್ದವು. ಕೊಟ್ಟೂರು, ದಾವಣಗೆರೆ ಹಾಗೂ ಕಡೂರು ಮಾರ್ಗವಾಗಿ ಸುಮಾರು 360 ಕಿ.ಮೀ ಉದ್ದದ ಹೊಸಪೇಟೆ-ಅರಸೀಕೆರೆ ಮಾರ್ಗದಲ್ಲಿ ನಿಯಮಿತವಾಗಿ ಸಂಚರಿಸುವ ಪ್ರಯಾಣಿಕರಿಗೆ ಈ ಹೊಸ ಡಿಇಎಂಯು ಸೇವೆಯು ಅನುಕೂಲಕರ ಹಾಗೂ ವಿಶ್ವಾಸಾರ್ಹ ಹಗಲು ಪ್ರಯಾಣದ ಆಯ್ಕೆಯನ್ನು ಒದಗಿಸುವ ನಿರೀಕ್ಷೆಯಿದೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us