AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಭುವನೇಶ್ವರ – ಯಶವಂತಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

ಭುವನೇಶ್ವರ–ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ. ರೈಲು ಸಂಖ್ಯೆ 02811 ಸೆಪ್ಟೆಂಬರ್ 5ರಿಂದ ನವೆಂಬರ್ 28ರವರೆಗೆ ಹಾಗೂ 02812 ಸೆಪ್ಟೆಂಬರ್ 7ರಿಂದ ನವೆಂಬರ್ 30ರವರೆಗೆ ಸಂಚರಿಸಲಿದೆ. ಪ್ರತಿ ದಿಕ್ಕಿನಲ್ಲಿ 13 ಹೆಚ್ಚುವರಿ ಟ್ರಿಪ್‌ಗಳು ಇರಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಭುವನೇಶ್ವರ – ಯಶವಂತಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ
ಸಾಂದರ್ಭಿಕ ಚಿತ್ರImage Credit source: PTI
ಗಣಪತಿ ಶರ್ಮಾ
|

Updated on: Aug 26, 2026 | 9:22 AM

Share

ಮುಖ್ಯಾಂಶಗಳು

  • ಭುವನೇಶ್ವರ-ಯಶವಂತಪುರ ವಿಶೇಷ ರೈಲು ಸಂಚಾರ ವಿಸ್ತರಣೆ
  • ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ರೈಲು ಸೇವೆ
  • ಪ್ರತಿ ದಿಕ್ಕಿನಲ್ಲಿ 13 ಹೆಚ್ಚುವರಿ ಟ್ರಿಪ್

ಬೆಂಗಳೂರು, ಆಗಸ್ಟ್ 26: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಭುವನೇಶ್ವರ–ಯಶವಂತಪುರ–ಭುವನೇಶ್ವರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲುಗಳ (Special Train) ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ. ನೈಋತ್ಯ ರೈಲ್ವೆ (South Western Railway) ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ರೈಲು ಸಂಖ್ಯೆ 02811/02812ಗಳ ಸಂಚಾರವನ್ನು ಮತ್ತಷ್ಟು ದಿನಗಳವರೆಗೆ ಮುಂದುವರಿಸಲು ನಿರ್ಧರಿಸಿದೆ.

ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ರೈಲು ಸಂಚಾರ

ರೈಲು ಸಂಖ್ಯೆ 02811 ಭುವನೇಶ್ವರ–ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಈ ಹಿಂದೆ ಆಗಸ್ಟ್ 29, 2026ರವರೆಗೆ ಸಂಚರಿಸಲು ನಿಗದಿಯಾಗಿತ್ತು. ಇದೀಗ ಇದರ ಸಂಚಾರವನ್ನು ಸೆಪ್ಟೆಂಬರ್ 5ರಿಂದ ನವೆಂಬರ್ 28, 2026ರವರೆಗೆ ವಿಸ್ತರಿಸಲಾಗಿದೆ.

ಅದೇ ರೀತಿ, ರೈಲು ಸಂಖ್ಯೆ 02812 ಯಶವಂತಪುರ–ಭುವನೇಶ್ವರ ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲಿನ ಸಂಚಾರ ಅವಧಿಯನ್ನೂ ವಿಸ್ತರಿಸಲಾಗಿದೆ. ಈ ರೈಲು ಈ ಹಿಂದೆ ಆಗಸ್ಟ್ 31ರವರೆಗೆ ಸಂಚರಿಸಲು ನಿಗದಿಯಾಗಿತ್ತು. ಇದೀಗ ಸೆಪ್ಟೆಂಬರ್ 7ರಿಂದ ನವೆಂಬರ್ 30, 2026ರವರೆಗೆ ಸಂಚಾರ ನಡೆಸಲಿದೆ.

ನೈಋತ್ಯ ರೈಲ್ವೆ ಎಕ್ಸ್ ಸಂದೇಶ

ಪ್ರತಿ ದಿಕ್ಕಿನಲ್ಲಿ 13 ಹೆಚ್ಚುವರಿ ಟ್ರಿಪ್

ವಿಸ್ತರಿತ ಅವಧಿಯಲ್ಲಿ ಎರಡೂ ರೈಲುಗಳು ಪ್ರತಿ ದಿಕ್ಕಿನಲ್ಲಿ 13 ಹೆಚ್ಚುವರಿ ಟ್ರಿಪ್‌ಗಳನ್ನು ನಡೆಸಲಿವೆ. ರೈಲುಗಳ ವೇಳಾಪಟ್ಟಿ, ನಿಲುಗಡೆಗಳು ಹಾಗೂ ಕೋಚ್‌ಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಿಸಲಾಗಿದ್ದು, ಭುವನೇಶ್ವರ–ಯಶವಂತಪುರ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಎಟಿಎಂ ಯಂತ್ರವನ್ನೇ ಕಿತ್ತು, ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ಕಳ್ಳರು!
ಎಟಿಎಂ ಯಂತ್ರವನ್ನೇ ಕಿತ್ತು, ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ಕಳ್ಳರು!
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಇ-ಕೆವೈಸಿ ನೆಪದಲ್ಲಿ ಹಣ ವಸೂಲಿ
ಇ-ಕೆವೈಸಿ ನೆಪದಲ್ಲಿ ಹಣ ವಸೂಲಿ
ಹನೂರಿನ ಇಂಡಿಗನತ್ತ-ಮೆಂದಾರೆ ಗ್ರಾಮಸ್ಥರ ನರಕಯಾತನೆ
ಹನೂರಿನ ಇಂಡಿಗನತ್ತ-ಮೆಂದಾರೆ ಗ್ರಾಮಸ್ಥರ ನರಕಯಾತನೆ
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ