ಕೊವಿಡ್ ನಿಯಂತ್ರಣದ ಬಗ್ಗೆ ನಿರ್ಲಕ್ಷ್ಯ; ವಿಜಯಪುರ ಡಿಹೆಚ್ಒಗೆ ಕಡ್ಡಾಯ ರಜೆಯ ಶಿಕ್ಷೆ ನೀಡಿದ ಸರ್ಕಾರ
ರಾಜಕುಮಾರ್ಗೆ 4 ಬಾರಿ ಶೋಕಾಸ್ ನೋಟಿಸ್ ನೀಡಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಎಚ್ಚರಿಸಿದ್ದರು. ಆದರೆ ನೋಟಿಸ್ ನೀಡಿದ್ದರೂ ಎಚ್ಚೆತ್ತುಕೊಳ್ಳದ ಹಿನ್ನೆಲೆ ರಾಜಕುಮಾರ್ ಯರಗಲ್ ವರ್ತನೆಗೆ ಬೆಸತ್ತ ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ವಿಜಯಪುರ: ಪದೇ ಪದೇ ಕೊವಿಡ್ ಕರ್ತವ್ಯ ನಿರ್ಲಕ್ಷ್ಯ ಮಾಡಿದ ಆರೋಪದಿಂದಾಗಿ ವಿಜಯಪುರದ ಜಿಲ್ಲಾ ಆರೋಗ್ಯಾಧಿಕಾರಿಗೆ ಸರ್ಕಾರ ಕಡ್ಡಾಯ ರಜೆಯ ಶಿಕ್ಷೆಯನ್ನು ಘೋಷಿಸಿದೆ. ಡಿಹೆಚ್ಒ ರಾಜಕುಮಾರ್ ಯರಗಲ್ ಕೊವಿಡ್ ಕರ್ತವ್ಯದಲ್ಲಿ ನಿರ್ಲಕ್ಷ್ಯ ಹೊಂದಿದ್ದರು. ಈ ನಿಟ್ಟಿನಲ್ಲಿ ರಾಜಕುಮಾರ್ಗೆ 4 ಬಾರಿ ಶೋಕಾಸ್ ನೋಟಿಸ್ ನೀಡಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಎಚ್ಚರಿಸಿದ್ದರು. ಆದರೆ ನೋಟಿಸ್ ನೀಡಿದ್ದರೂ ಎಚ್ಚೆತ್ತುಕೊಳ್ಳದ ಹಿನ್ನೆಲೆ ರಾಜಕುಮಾರ್ ಯರಗಲ್ ವರ್ತನೆಗೆ ಬೆಸತ್ತ ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ಶವ ಸಾಗಿಸುವ ವಾಹನದ ಸ್ಟೇರಿಂಗ್ ಹಿಡಿದ ಪಾಲಿಕೆ ಅಧಿಕಾರಿ ಮೈಸೂರಿನಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ಸೋಂಕಿತರ ಶವ ಸಾಗಿಸುವ ವಾಹನದ ಚಾಲಕ ಗೈರಾದ ಹಿನ್ನೆಲೆಯಲ್ಲಿ ಶವಗಾರದ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅನಿಲ್ ಕ್ರಿಸ್ಟಿ ವಾಹನ ಚಾಲನೆ ಮಾಡಿದ್ದಾರೆ. ಇದೀಗ ವೃತ್ತಿಯಲ್ಲಿ ದಕ್ಷತೆ ಮೆರೆದ ಪಾಲಿಕೆ ಅಧಿಕಾರಿಯ ವಾಹನ ಚಲಾವಣೆಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಬೆಳಗಾವಿ ಪುರಸಭೆ ಮುಖ್ಯಾಧಿಕಾರಿ ಅಪೂರ್ವ ಬಿದರಿ ವಿರುದ್ಧ ರೊಚ್ಚಿಗೆದ್ದ ದಲಿತರು ಅಪೂರ್ವ ಬಿದರಿ ಪ್ರೋಬೇಶನರಿ ಸಮಯದಲ್ಲಿ ಸಾರ್ವಜನಿಕರ ಕೆಂಗಣ್ಣಿಗೆ ಇದೀಗ ಗುರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಯಾರನ್ನು ಕೇಳಿದರೂ ಬರಿ ಮಹಿಳಾ ಆಫೀಸರ್ ಬಗ್ಗೆನೇ ಮಾತು. ತಾನು ಸಿಕ್ಕಾಪಟ್ಟೆ ಖಡಕ್ ಆಧಿಕಾರಿ ಅಂತ ಪೋಸ್ ನೀಡುವ ಅಪೂರ್ವ ಬಿದರಿ ತಮ್ಮ ಮೇಲಾಧಿಕಾರಿಗಳಿಗೆ ತಲೆ ನೋವು ಆಗಿದ್ದಾರೆ. ಕೆ.ಎ.ಎಸ್ ಪ್ರೊಬೇಷನರಿ ಆಗಿರುವ ಅಪೂರ್ವ ಚಿಕ್ಕೋಡಿಯ ಪುರಸಭೆಯ ಮುಖ್ಯಾಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಪೂರ್ವ ತಾನು ಸಿಕ್ಕಾಪಟ್ಟೆ ಖಡಕ್ ಅಧಿಕಾರಿ ಅಂತ ಬಿಂಬಿಸಿಕೊಳ್ಳಲು ಕೈಯಲ್ಲಿ ಲಾಠಿ ಹಿಡಿದುಕೊಳ್ಳುತ್ತಾರೆಂಬ ಮಾತುಗಳು ಹೆಚ್ಚಾಗಿವೆ.
ಸಚಿವೆ ಜೊಲ್ಲೆ ಅವರಿಗೆ ಬಾಯಿ ಅಂತ ಕರೆದಿರುವ ಅಪೂರ್ವ ಬಗ್ಗೆ ಚಿಕ್ಕೋಡಿಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಪ್ರೊಬೇಷನರಿ ಹಂತವನ್ನೆ ಮುಗಿಸದ ಅಪೂರ್ವ ಅಧಿಕಾರದ ಮದ ಇಳಿಸಲು ದಲಿತ ಸಂಘನೆಗಳು ಮುಂದಾಗಿವೆ. ಲಿಕ್ಕರ್ ಡಾನ್ಗಳ ಅಣತಿಯಂತೆ ಅಧಿಕಾರ ನಡೆಸುತ್ತಿರುವ ಅಪೂರ್ವ ದಲಿತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಕೊರೊನಾ ನಿಯಂತ್ರಿಸಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಮಹಿಳಾ ಅಧಿಕಾರಿ ಅಪೂರ್ವ ಖಾಸಗಿ ವಾಹನದಲ್ಲಿ ಕುಟುಂಬದ ಆರು ಜನರನ್ನು ಕೂರಿಸಿಕೊಂಡು ಗೂಂಡಾ ವರ್ತನೆ ನಡೆಸಿರುವುದು ಬೆಳಕಿಗೆ ಬಂದಿದೆ. ದೀನ ದಲಿತರ ಮದುವೆ ವೇಳೆಯಲ್ಲಿ ಎಲ್ಲರಿಗೂ ಮನಸ್ಸಿಚ್ಚೆಯಂತೆ ಬೈದು ದೌರ್ಜನ್ಯತೆಯನ್ನು ಮೆರೆದಿದ್ದಾರೆ. ಹೀಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕಲಾಗುತ್ತದೆ ಎಂದು ಹೋಮ್ಗಾರ್ಡ್ನ ಮಾಜಿ ಸೂಪರಿಡೆಂಟ್ ಅರವಿಂದ್ ಗಟ್ಟಿ ತಿಳಿಸಿದರು.
ಇದನ್ನೂ ಓದಿ:
ಬೆಳಗಾವಿ: ಪುರಸಭೆ ಮುಖ್ಯಾಧಿಕಾರಿ ಅಪೂರ್ವ ಬಿದರಿ ವಿರುದ್ಧ ರೊಚ್ಚಿಗೆದ್ದ ದಲಿತರು; ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಆರೋಪ