Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ ರೈತರ ಭೂಮಿ ವಕ್ಫ್​​​ಗೆ?: ಸಿದ್ದರಾಮಯ್ಯನವರೇ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ; ತೇಜಸ್ವಿ ಸೂರ್ಯ ಕಿಡಿ

ವಿಜಯಪುರ ಜಿಲ್ಲೆಯಲ್ಲಿ ವಕ್ಫ ಬೋರ್ಡ್​ ಕಾಯ್ದೆಯದ್ದೇ ಚರ್ಚೆಯಾಗುತ್ತಿದೆ. ವಕ್ಫ್ ಆಸ್ತಿಗಳ ಖಾತಾ ಆಗದೆ ಇರುವ ಆಸ್ತಿಗಳ ಖಾತೆಗಳನ್ನು ಮುಂದಿನ 30 ದಿನಗಳಲ್ಲಿ ಮಾಡಬೇಕೆಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಸೂಚನೆ ನೀಡಿದ್ದರು. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿದ್ದಾರೆ.

ವಿಜಯಪುರ ರೈತರ ಭೂಮಿ ವಕ್ಫ್​​​ಗೆ?: ಸಿದ್ದರಾಮಯ್ಯನವರೇ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ; ತೇಜಸ್ವಿ ಸೂರ್ಯ ಕಿಡಿ
ಸಂಸದ ತೇಜಸ್ವಿ ಸೂರ್ಯ
Follow us
ಕಿರಣ್​ ಹನಿಯಡ್ಕ
| Updated By: ವಿವೇಕ ಬಿರಾದಾರ

Updated on:Oct 25, 2024 | 2:28 PM

ಬೆಂಗಳೂರು, ಅಕ್ಟೋಬರ್​ 25: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ (Zameer Ahmed) ಖಾನ್ ಹೇಳಿದರು ಅಂತ ವಿಜಯಪುರ (Vijayapura) ಜಿಲ್ಲೆಯ ಅಧಿಕಾರಿಗಳು ರೈತರ ಜಮೀನನ್ನು ವಕ್ಫ್ ಬೋರ್ಡ್​​ಗೆ (Wakf Board) ಸೇರಿಸಲು ಹೊರಟಿದ್ದಾರೆ. ಆದರೆ ಒಂದೇ ಒಂದು ದಾಖಲೆಗಳಲ್ಲಿ ಜಮೀನು ಯಾವ ರೀತಿ ವಕ್ಫ್ ಬೋರ್ಡ್​ಗೆ ಸೇರುತ್ತದೆ ಎಂಬುವುದಕ್ಕೆ ಮಾಹಿತಿ ಇಲ್ಲ. ಸಚಿವ ಜಮೀರ್ ಅಹಮದ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ? ಎಂದು ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ಮಾಡಿದರು.

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ನೋಂದಣಿ ಕುರಿತಾಗಿ ಎದ್ದಿರುವ ಗೊಂದಲಗಳ ಕುರಿತಾಗಿ ಅಲ್ಲಿನ ರೈತರು ಮತ್ತು ನೋಟಿಸ್ ಪಡೆದಿರುವ ಸಾರ್ವಜನಿಕರು ಇಂದು (ಅ.25) ನಿಯೋಗದೊಂದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದರು.

ಬಳಿಕ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಹಳಷ್ಟು ಜನರಿಗೆ ಕೇಂದ್ರ ಸರ್ಕಾರ ಯಾಕೆ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿದೆ ಅಂತ ಗೊತ್ತಿಲ್ಲ. ಸಚಿವ ಜಮೀರ್ ಅಹಮದ್ ಕೆಲವು ದಿನಗಳ ಹಿಂದೆ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ, ವಕ್ಫ್ ಬೋರ್ಡ್ ಯಾವ ಆಸ್ತಿಗಳು ತನ್ನದು ಅಂತ ಹೇಳುತ್ತದೆ ಅದನ್ನು 15 ದಿನಗಳಲ್ಲಿ ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಬಂದಿದ್ದಾರೆ. ಸಚಿವರು ಹೇಳಿದರು ಅಂತ ಜಿಲ್ಲಾಧಿಕಾರಿಗಳಯ ರಾತ್ರೋ ರಾತ್ರಿ ಪಹಣಿಯಲ್ಲಿ ಹೆಸರು ಬದಲಿಸಲು ಹೊರಟಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಎಕರೆಯನ್ನು ವಕ್ಫ್ ಬೋರ್ಡ್ ತನ್ನದು ಅಂತ ಹೇಳುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಅವರ ಅಪ್ಪನಿಗೆ ಯಾರಾದರು ಹುಟ್ಟಿರುವವರು ಸಿಡಿ ಬಿಡುಗಡೆ ಮಾಡಲಿ: ಯತ್ನಾಳ್​ ಸವಾಲ್​

ಹಿಂದೂಗಳಿಗೆ ಅಪಮಾನ ಮಾಡಿ ಮುಸ್ಲಮರಿಗಷ್ಟೇ ಜಮೀನು ಕೊಡಲು ಹೊರಟಿದ್ದೀರಾ? ಪಹಣಿಯಲ್ಲಿ ಯಾಕೆ ವಕ್ಪ್ ಬೋರ್ಡ್ ಕರ್ನಾಟಕ ಸರ್ಕಾರ ಅಂತ ಹಾಕುತ್ತಿದ್ದೀರಿ? ತಹಸೀಲ್ದಾರ್​ಗಳು, ಜಿಲ್ಲಾಧಿಕಾರಿಗಳು ಸರ್ಕಾರ ನಡೆಸಬೇಕಾಗಿರುವುದು ಸಂವಿಧಾನದ ಮೇಲೆ ಹೊರತು ಷರಿಯಾ ಕಾನೂನಿನ ಮೇಲೆ ಅಲ್ಲ. ಜಮೀರ್ ಅಹಮದ್ ಹೇಳಿದರು, ಮಸೀದಿಯ ಮುಲ್ಲಾ ಹೇಳಿದರು ಅಂತ ಕೆಲಸ ಮಾಡುವುದು ಅಲ್ಲ. ಇದು ಮುಂದುವರಿದರೆ ಹೈಕೋರ್ಟ್ ಮತ್ತು ಲೋಕಾಯುಕ್ತಕ್ಕೆ ಹೋಗಿ ನಿಮ್ಮನ್ನು ಅಮನಾತು ಮಾಡಲು ಆದೇಶ ತರುವಲ್ಲಿ ನಾನು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ವಕ್ಫ್ ಕಾನೂನು ಬರುವ ಮುನ್ನ ಎಷ್ಟು ಸಾಧ್ಯವಾಗುತ್ತೋ ಅಷ್ಟು ಜಮೀನು ಕಬಳಿಸಿಕೊಳ್ಳಬೇಕು ಅಂತ ಹುನ್ನಾರ ಮಾಡುತ್ತಿದ್ದಾರೆ. ರಾಜ್ಯದ ಯಾವುದೇ ಭಾಗದಲ್ಲಿ ವಕ್ಫ್ ಸಮಸ್ಯೆ ಇದ್ದರೂ ನನ್ನ ಕಚೇರಿಗೆ ಬನ್ನಿ. ಹೈಕೋರ್ಟ್​ಗೆ ಹೋಗಿ ನಿಮಗೆ ನ್ಯಾಯ ಕೊಡಿಸುತ್ತೇನೆ. ಇದು ಭಾರತ, ಇದು ಪಾಕಿಸ್ತಾನದ ಕಾನೂನಿನಂತೆ ನಡೆಯುವ ರಾಜ್ಯ ಅಲ್ಲ. ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಮುಸಲ್ಮಾನರಿಗೆ ಕೂಡ ಮೋಸ ಮಾಡಿದೆ. ವಕ್ಫ್ ಎಂದರೆ ಅಲ್ಲಾ ಅವರಿಗೆ ಕೊಟ್ಟ ಆಸ್ತಿ. ವಕ್ಫ್ ಬೋರ್ಡ್​ ಜಮೀನು ಅತಿಕ್ರಮಣ ಮಾಡಿಕೊಂಡಿದ್ದರೇ, ತನಿಖೆ ಮಾಡಿ ನೋಟೀಸ್ ಕೊಡಬಹುದು. ಬಳಿ, ನಮ್ಮದು ಜಮೀನು ಅಂತ ಸೆಕ್ಷನ್ 40 ಅಡಿಯಲ್ಲಿ ಕ್ಲೈಮ್ ಮಾಡಿಕೊಳ್ಳಬಹುದು. ಈ ತಿದ್ದುಪಡಿಯನ್ನು ಕಾಂಗ್ರೆಸ್ 1995 ರಲ್ಲಿ ತಂದಿತು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಮುಸ್ಲಿಂ ವೋಟ್ ಬ್ಯಾಂಕ್​ಗೋಸ್ಕರ ವಕ್ಫ್ ಟ್ರಿಬ್ಯೂನಲ್ ತಂದಿತು. ಕಾನೂನು ಮೂಲಕ ಭೂಮಿ ಅತಿಕ್ರಮಣ ಮಾಡಲು ಕಾಂಗ್ರೆಸ್ ವಕ್ಫ್ ಬೋರ್ಡ್​ಗೆ ಅವಕಾಶ ಮಾಡಿಕೊಟ್ಟಿದೆ. ಇದನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಲು ಮುಂದಾಗಿದೆ. ಈ ವರ್ಷದ ಡಿಸೆಂಬರ್ನಲ್ಲಿ ನಡೆಯುವ ಅಧಿವೇಶನದಲ್ಲಿ ವಕ್ಫ್ ಕಾನೂನು ಅಂಗೀಕಾರ ಮೂಲಕ ಈ ಎಲ್ಲ ಆಟಾಟೋಪಕ್ಕೆ ಮೋದಿ ಸರ್ಕಾರ ಬ್ರೇಕ್ ಹಾಕಲಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:44 pm, Fri, 25 October 24

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ