Earthquake: ವಿಜಯಪುರ ಜಿಲ್ಲೆಯ ವಿವಿಧೆಡೆ ಮತ್ತೆ ಭೂಕಂಪನ: 3.2ರಷ್ಟು ಕಂಪನದ ತೀವ್ರತೆ ದಾಖಲು
ಜನರು ಭಯಗೊಳ್ಳಬಾರದು. ಇದು ಕಡಿಮೆ ತೀವ್ರತೆಯ ಭೂಕಂಪನವಾಗಿದೆ ಯಾವುದೇ ಸಮಸ್ಯೆ ಇಲ್ಲಾ. ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡಬಾರದು ಎಂದು ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ಮನವಿ ಮಾಡಿದ್ದಾರೆ.
ವಿಜಯಪುರ: ಜಿಲ್ಲೆಯ ವಿವಿಧೆಡೆ ಮತ್ತೆ ಭೂಮಿ ಕಂಪಿಸಿದ್ದು, (Earthquake) ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.2ರಷ್ಟು ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಮಾಹಿತಿ ನೀಡಲಾಗಿದೆ. ಆಗಸ್ಟ್ 19ರ ರಾತ್ರಿ 8.16ಕ್ಕೆ ಭೂಮಿ ಕಂಪಿಸಿದೆ ಎನ್ನಲಾಗುತ್ತಿದೆ. ಜನರು ಮನೆ ಬಿಟ್ಟು ಹೊರಗೋಡಿ ಬಂದಿದ್ದು, ಕೆಲ ಮನೆಗಳಲ್ಲಿನ ಪಾತ್ರೆ ಪಗಡೆ ಕೆಳಗೆ ಬಿದ್ದಿದ್ದವು. ಜನರು ಭೂಕಂಪನದಿಂದ ಆತಂಕಗೊಂಡಿದ್ದರು.
ಇದನ್ನೂ ಓದಿ: Steamed Food: ಉಗಿಯಲ್ಲಿ ಬೇಯಿಸಿದ ಆಹಾರ ತಿಂದ್ರೆ ಏನೇನೆಲ್ಲಾ ಪ್ರಯೋಜನಗಳಿವೆ ಗೊತ್ತೇ?
ಜನರು ಭಯಗೊಳ್ಳಬಾರದು. ಇದು ಕಡಿಮೆ ತೀವ್ರತೆಯ ಭೂಕಂಪನವಾಗಿದೆ ಯಾವುದೇ ಸಮಸ್ಯೆ ಇಲ್ಲಾ. ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡಬಾರದು ಎಂದು ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ಮನವಿ ಮಾಡಿದ್ದಾರೆ.