ಧಾರವಾಡದಲ್ಲಿ ಹೈಟೆಕ್​​ ಕೈಗಾರಿಕಾ ಘಟಕ ಆರಂಭ: 3 ಸಾವಿರ ಜನರಿಗೆ ಉದ್ಯೋಗವಕಾಶ

ಉತ್ತರ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಧಾರವಾಡದಲ್ಲಿ 600 ಕೋಟಿ ರೂಪಾಯಿ ವೆಚ್ಚದ ಹೈಟೆಕ್​ ಕೈಗಾರಿಕಾ ಘಟಕ ಆರಂಭವಾಗಿದೆ. ಇದು 800 ಜನರಿಗೆ ಉದ್ಯೋಗ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ 3000ಕ್ಕೆ ಏರಿಕೆಯಾಗಲಿದೆ. ಫ್ರೆಂಚ್ ಮತ್ತು ಜಪಾನೀ ತಂತ್ರಜ್ಞಾನವನ್ನು ಬಳಸುವ ಈ ಘಟಕವು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುವ ಗುರಿ ಹೊಂದಿದೆ. ಶಿವಮೊಗ್ಗ ಮತ್ತು ವಿಜಯಪುರದಲ್ಲಿ ವಿಮಾನ ತರಬೇತಿ ಕೇಂದ್ರಗಳ ಸ್ಥಾಪನೆಯೂ ಯೋಜನೆಯಲ್ಲಿದೆ.

ಧಾರವಾಡದಲ್ಲಿ ಹೈಟೆಕ್​​ ಕೈಗಾರಿಕಾ ಘಟಕ ಆರಂಭ: 3 ಸಾವಿರ ಜನರಿಗೆ ಉದ್ಯೋಗವಕಾಶ
ಎಂಬಿ ಪಾಟೀಲ್​
Edited By:

Updated on: Jun 03, 2025 | 3:10 PM

ವಿಜಯಪುರ, ಜೂನ್​ 03: ಉತ್ತರ ಕರ್ನಾಟಕದ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಧಾರವಾಡದಲ್ಲಿ 600 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ನೈಡೆಕ್ (Nidec) ಕೈಗಾರಿಕಾ ಘಟಕ ಆರಂಭಿಸಿದ್ದೇವೆ. ಇದು 800 ಜನರಿಗೆ ಉದ್ಯೋಗ ನೀಡುತ್ತದೆ. ನಂತರ ದಿನಗಳಲ್ಲಿ 3000 ಜನರಿಗೆ ಉದ್ಯೋಗ ಸಿಗಲಿದೆ. ಧಾರವಾಡಲ್ಲಿ ಉದ್ಘಾಟನೆಯಾಗಿರುವ ನೈಡೆಕ್ ಕೈಗಾರಿಕಾ ಘಟಕ ಜಗತ್ತಿನ ಅತ್ಯಾಧುನಿಕ ಘಟಕವಾಗಿದೆ. ಈ ಮೂಲಕ ಉತ್ತರ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಮಹತ್ವದ ಬಲ ನೀಡಿದ್ದು, ರಾಜ್ಯ ಸರ್ಕಾರವು ಕೈಗಾರಿಕಾ ನೀತಿಯಡಿ ವಿವಿಧ ರಿಯಾಯಿತಿಗಳನ್ನು ಒದಗಿಸುತ್ತಿದೆ ಎಂದು ಸಚಿವ ಎಂಬಿ ಪಾಟೀಲ್ (MB Patil)​ ಹೇಳಿದರು.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಘಟಕದಲ್ಲಿ ಫ್ರೆಂಚ್ ಮತ್ತು ಜಪಾನೀ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಡೇಟಾ ಸೆಂಟರ್ ಉದ್ಯಮಗಳ ಅಗತ್ಯಗಳಿಗೆ ತಕ್ಕಂತೆ 2 ಮೆಗಾವಾಟ್, 3 ಮತ್ತು 4 ಮೆಗಾವಾಟ್ ಸಾಮರ್ಥ್ಯದ ಹೆವಿ ಡ್ಯೂಟಿ ಮಶೀನ್​ಗಳ ಉತ್ಪಾದನೆಯಾಗುತ್ತದೆ. ಇವುಗಳನ್ನು ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕ, ಯುರೋಪ್ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ
ವಿಜಯಪುರ ಕೆನರಾ ಬ್ಯಾಂಕ್​ನಲ್ಲಿದ್ದ 58 ಕೆಜಿ ಚಿನ್ನ ಕಳ್ಳತನ!
ಬೆಂಗಳೂರು-ವಿಜಯಪುರ ಪ್ರಯಾಣದ ಅವಧಿ ಕಡಿತ: ಎಂಬಿ ಪಾಟೀಲ್ ಮಹತ್ವದ ಚರ್ಚೆ
ವಿಜಯಪುರ: ವಾಮಾಚಾರ ಮಾಡಿ ರಾಷ್ಟ್ರೀಕೃತ ಕೆನರಾ ಬ್ಯಾಂಕ್​ ಕಳ್ಳತನ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್

ಟ್ವಿಟರ್​ ಪೋಸ್ಟ್​

ಪ್ರಸ್ತುತ ಘಟಕದಲ್ಲಿ ಸುಮಾರು 800 ಉದ್ಯೋಗಿಗಳಿದ್ದು, ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆಗೆ ಬರುತ್ತಿದ್ದಂತೆ ಈ ಸಂಖ್ಯೆಯನ್ನು 3,000ಕ್ಕೆ ವಿಸ್ತರಿಸುವ ಗುರಿಯನ್ನು ನೈಡೆಕ್​ ಹೊಂದಿದೆ. ನೈಡೆಕ್​ನ ಈ ಯೋಜನೆಯು ನವೀನ ತಂತ್ರಜ್ಞಾನ, ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಪರಿಸರ ಸ್ನೇಹಿ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ 2028ರೊಳಗೆ ಕಾರ್ಬನ್ ನ್ಯೂಟ್ರಲ್ ಗುರಿಯನ್ನು ಸಾಧಿಸಲು ಉದ್ದೇಶಿಸಿದೆ ಎಂದರು.

ಇದನ್ನೂ ನೋಡಿ: ಈರುಳ್ಳಿ ದರ ಕುಸಿತ, ವಿಜಯಪುರದಲ್ಲಿ ಹೆದ್ದಾರಿಯಲ್ಲಿ ಈರುಳ್ಳಿ ಸುರಿದು ರೈತರ ಪ್ರತಿಭಟನೆ

ಶಿವಮೊಗ್ಗದಲ್ಲಿ ವಿಮಾನ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಹಾಗೇ ಮುಂದಿನ ದಿನಗಳಲ್ಲಿ ವಿಜಯಪುರದಲ್ಲೂ ಮುಂದೆ ವಿಮಾನ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ