ಅನುದಾನ ನೀಡದ ಸರ್ಕಾರ; ಕಳೆದೆರಡು ತಿಂಗಳಿಂದ ಅಂಗವಾಡಿ ಕಾರ್ಯಕರ್ತೆಯರ ಕೈ ಸೇರದ ಗೌರವಧನ

ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗಿದೆಯಾ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಕಾರಣ ವಿವಿಧ ಇಲಾಖೆಗಳಿಗೆ ಸರ್ಕಾರ ಅನುದಾನ ನೀಡಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯಲ್ಲಿ ಹಣವೇ ಇಲ್ಲವಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕರಿಗೆ ಕಳೆದ ಎರಡು ತಿಂಗಳುಗಳಿಂದ ಸಂಬಳ ನೀಡಿಲ್ಲ. ಇಷ್ಟರ ಮಧ್ಯೆ ಮತ್ತೊಂದು ಆಘಾತ ಎದುರಾಗಿದ್ದು, ಬಾಡಿಗೆ ಕಟ್ಟಡದಲ್ಲಿ ನಡೆಸುವ ಅಂಗನವಾಡಿಗಳನ್ನ ಮಾಲೀಕರು ಖಾಲಿ ಮಾಡಿ ಎನ್ನುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಅನುದಾನ ನೀಡದ ಸರ್ಕಾರ; ಕಳೆದೆರಡು ತಿಂಗಳಿಂದ ಅಂಗವಾಡಿ ಕಾರ್ಯಕರ್ತೆಯರ ಕೈ ಸೇರದ ಗೌರವಧನ
ಕಳೆದೆರಡು ತಿಂಗಳಿಂದ ಅಂಗವಾಡಿ ಕಾರ್ಯಕರ್ತೆಯರ ಕೈ ಸೇರದ ಗೌರವಧನ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 04, 2024 | 8:49 PM

ವಿಜಯಪುರ, ಸೆ.04: ವಿಜಯಪುರ(Vijayapura) ಜಿಲ್ಲೆಯಲ್ಲಿ ಅಂಗವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಕಳೆದ ಎರಡು ತಿಂಗಳುಗಳಿಂದ ಗೌರವಧನ ಇಲ್ಲದೇ ಪರದಾಡುವಂತಾಗಿದೆ. ಇದೇ ಸಂಬಳ ನೆಚ್ಚಿಕೊಂಡು ಸಂಸಾರ ನಡೆಸುತ್ತಿರುವ ಇವರಿಗೆ ಸರ್ಕಾರದಿಂದ ಎರಡು ತಿಂಗಳುಗಳಿಂದ ಸಂಬಳವಾಗಿಲ್ಲ. ಆದರೂ ಹೇಗೋ ಬದುಕಿನ ಬಂಡಿಯನ್ನು ಎಳೆಯುತ್ತಿದ್ದಾರೆ. ಇಷ್ಟರ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಹೊಸ ಸಂಕಷ್ಟ ಎದುರಾಗಿದೆ. ಜಿಲ್ಲೆಯಲ್ಲಿರುವ ಬಾಡಿಗೆ ಕಟ್ಟಡದಲ್ಲಿ ನಡೆಸುವ ಅಂಗನವಾಡಿ ಕೇಂದ್ರಗಳನ್ನು ಖಾಲಿ ಮಾಡುವಂತೆ ಕಟ್ಟಡಗಳ ಮಾಲೀಕರು ಒತ್ತಡ ಹಾಕುತ್ತಿದ್ದಾರೆ. ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳ ಬಾಡಿಗೆ ಭರಿಸಿ, ಇಲ್ಲವೇ ಕಟ್ಟಡ ಖಾಲಿ ಮಾಡಿ ಎಂದು ಹೇಳುತ್ತಿದ್ದಾರೆ.

ಸರ್ಕಾರ ಅದಾಗಲೇ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಬಳ ನೀಡುವುದಕ್ಕೆ ಮೀನಾಮೇಷ ಎಣಿಸುತ್ತಿದೆ. ಎರಡು ಮೂರು ತಿಂಗಳುಗಳಿಂದ ಸಂಬಳ ನೀಡಿಲ್ಲ. ಇದರ ಜೊತೆಗೆ ಜಿಲ್ಲೆಯಲ್ಲಿ ಖಾಸಗಿ ಕಟ್ಟಡಗಳಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ನೀಡದೇ ಇರುವುದು ಮತ್ತೊಂದು ಸಮಸ್ಯೆಗೆ ನಾಂದಿ ಹಾಡಿದಂತಾಗಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಉಪ ನಿರ್ದೇಶಕರು, ‘ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಂಡಿದ್ದೇವೆಂದು ಸಬೂಬು ಹೇಳಿದ್ದಾರೆ.

ಇದನ್ನೂ ಓದಿ:ಗದಗ: ಗಾವಾಯಿಗಳ ಊರಲ್ಲಿ ನಿಂತ ಸಂಗೀತ ಸುಧೆ, ಕಲಾವಿದರಿಗೆ ಹಣ ಕೊಡದಷ್ಟು ಬಡವಾಯ್ತೆ ಸರ್ಕಾರ?

ವಿಜಯಪುರ ಜಿಲ್ಲೆಯಲ್ಲಿ ಒಟ್ಟು 2385 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 2305 ಸಹಾಯಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು 20755 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ ಸರ್ಕಾರ ಕಟ್ಟಡಗಳಲ್ಲಿ 1405 ಅಂಗನವಾಡಿ ಕೇಂದ್ರಗಳು, ಪಂಚಾಯತಿ ಕಟ್ಟಡಗಳಲ್ಲಿ 39, ಸಮುದಾಯ ಭವನದಲ್ಲಿ 150, ಮಹಿಳಾ ಮಂಡಳಿಗಳಲ್ಲಿ 4, ಶಾಲಾ ಕಟ್ಟಡಗಳಲ್ಲಿ 220, ಬಾಡಿಗೆ ರಹಿತವಾದ 91 ಕಟ್ಟಡಗಳಲ್ಲಿ ಹಾಗೂ ಖಾಸಗಿ ಕಟ್ಟಡಗಳಲ್ಲಿ 846 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 846 ಕೇಂದ್ರಗಳಿಗೆ ಕಳೆದ 6 ತಿಂಗಳುಗಳಿಂದ ಬಾಡಿಗೆ ಹಣ ಪಾವತಿ ಮಾಡಿಲ್ಲ.

ಇನ್ನು ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಇಲಾಖೆ ಉಪ ನಿರ್ದೇಶಕ , ‘ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಜುಲೈ ತಿಂಗಳ ಸಂಬಳ ಬಿಡುಗಡೆಯಾಗಿದ್ದು, ಖಜಾನೆಗೆ ಸಲ್ಲಿಸಿದ್ದೇವೆ. ಇನ್ನು ಖಾಸಗಿ ಕಟ್ಟಡಗಳಲ್ಲಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆಯನ್ನು ಕಳೆದ ಏಪ್ರೀಲ್​ನಿಂದ ಇಲ್ಲಿಯವರೆಗೆ ಬಿಡುಗಡೆ ಮಾಡಲಾಗುತ್ತದೆ. ಕಟ್ಟಡ ಮಾಲೀಕರಿಂದ ಒಪ್ಪಿಗೆ ಪತ್ರ ಪಡೆದು ಇದೇ ವಾರದಲ್ಲಿ ಬಾಡಿಗೆ ಹಣ ಸಂದಾಯ ಮಾಡಲಾಗುತ್ತದೆ ಎಂದಿದ್ದಾರೆ. ಬಾಡಿಗೆ ನೀಡಲು ಅನುದಾನ ಸಮಸ್ಯೆಯಾಗಿಲ್ಲ, ಬಾಡಿಗೆ ನೀಡಲು ಕಮೀಟಿ ಒಪ್ಪಿಗೆ ನೀಡಬೇಕು. ಗ್ರಾಮೀಣ ವಲಯದಲ್ಲಿನ ಕಟ್ಟಡಗಳಿಗೆ ಮಾಸಿಕ ಗರಿಷ್ಟ 2 ಸಾವಿರ ರೂಪಾಯಿ, ಪಟ್ಟಣ ಭಾಗದಲ್ಲಿ ಗರಿಷ್ಟ 4 ಸಾವಿರ ಇದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗರಿಷ್ಟ 6 ಸಾವಿರ ಇದೆ. ಬಾಡಿಗೆ ನಿಗದಿಗೆ ಮಾಡಿರುವ ಸಮೀತಿ ಪರವಾನಿಗೆ ಪಡೆದು ಬಾಡಿಗೆ ನಿಗದಿ ಮಾಡುತ್ತೇವೆ. ಬಾಕಿ ಬಾಡಿಗೆಯನ್ನು ವಾರದಲ್ಲೇ ನೀಡುತ್ತೇವೆಂದಿದ್ದಾರೆ.

ರಾಜ್ಯದಲ್ಲಿ ಬಹುತೇಕ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಬಳ ಬಾಕಿ ವಿಚಾರ ಮಾರ್ಧನಿಸುತ್ತಿರೋವಾಗಲೇ ವಿಜಯಪುರ ಜಿಲ್ಲೆಯಲ್ಲಿ ಖಾಸಗಿ ಕಟ್ಟಡಗಳಲ್ಲಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ವಿಚಾರ ಸಮಸ್ಯೆಗೆ ಕಾರಣವಾಗಿದೆ. ಜಿಲ್ಲೆಯ ಅಧಿಕಾರಿಗಳು ಮಾತ್ರ ಬಾಡಿಗೆ ನೀಡಲಾಗುತ್ತದೆ ಎಂಬ ಭರವಸೆ ನೀಡುತ್ತಾ ಕಳೆದ ಆರು ತಿಂಗಳುಗಳಿಂದ ಬಂದಿದ್ದಾರೆ. ಆದರೆ, ಬಾಡಿಗೆ ನೀಡಿಲ್ಲ. ಈಗಲೂ ಸಹ ಒಂದು ವಾರದಲ್ಲಿ ಬಾಡಿಗೆ ನೀಡುತ್ತೇವೆಂದೇ ಹೇಳಿದ್ದಾರೆ. ಆದರೆ, ಬಾಡಿಗೆ ನೀಡದಿದ್ದರೆ ಕಟ್ಟಡ ಮಾಲೀಕರು ಅಂಗನವಾಡಿಗಳನ್ನು ಖಾಲಿ ಮಾಡಿಸಲು ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗೂಳಿ ದಾಳಿಗೆ ವೃದ್ಧನ ಹೊಟ್ಟೆಯಿಂದ ಹೊರಬಂದ ಕರುಳು; ಸಿಸಿಟಿವಿ ದೃಶ್ಯ
ಗೂಳಿ ದಾಳಿಗೆ ವೃದ್ಧನ ಹೊಟ್ಟೆಯಿಂದ ಹೊರಬಂದ ಕರುಳು; ಸಿಸಿಟಿವಿ ದೃಶ್ಯ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
Nithya Bhavishya: ಗಣೇಶ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಗಣೇಶ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಫುಟ್ಬಾಲ್​ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
ಫುಟ್ಬಾಲ್​ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
181 ರನ್ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಮುರಿದ ಮುಶೀರ್ ಖಾನ್
181 ರನ್ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಮುರಿದ ಮುಶೀರ್ ಖಾನ್