ಮೋದಿ, ಯೋಗಿ ಆಡಳಿತಾವಧಿ ಮುಗಿದ ನಂತರ ರಾಮ ಮಂದಿರ ಕೆಡವುತ್ತೇವೆ ಎಂಬ ಮಾತು ಬರಬಾರದು: ಪೇಜಾವರ ಶ್ರೀ

ವಿಜಯಪುರದ ಕೃಷ್ಣ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೇಜಾವರ ಸ್ವಾಮೀಜಿ, ರಾಮ ಮಂದಿರ ಒಡೆಯುತ್ತೇವೆ ಎಂಬ ಮಾತು ಕೆಲವು ಮಕ್ಕಳ ಬಾಯಲ್ಲಿ ಬರುತ್ತಿವೆ. ಆ ಸಮಾಜದ ಮಕ್ಕಳ ಪೋಷಕರು ಇದಕ್ಕೆ ತಡೆ ಹಾಕಬೇಕು ಇದು ಸರಿಯಲ್ಲ. ದೇಶದಲ್ಲಿ ಎಲ್ಲ ಸಮಾಜದವರು ಧರ್ಮದವರು ಏಕತೆಯಿಂದ ಇರಬೇಕು ಎಂದು ಹೇಳಿದ್ದಾರೆ.

ಮೋದಿ, ಯೋಗಿ ಆಡಳಿತಾವಧಿ ಮುಗಿದ ನಂತರ ರಾಮ ಮಂದಿರ ಕೆಡವುತ್ತೇವೆ ಎಂಬ ಮಾತು ಬರಬಾರದು: ಪೇಜಾವರ ಶ್ರೀ
ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
Edited By:

Updated on: Jan 05, 2024 | 10:51 AM

ವಿಜಯಪುರ, ಜನವರಿ 04: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಇರುವವರೆಗೂ ರಾಮ ಮಂದಿರ ಇರಲಿದೆ, ಆಮೇಲೆ ಅದನ್ನು ನಾಶ ಮಾಡುತ್ತೇವೆ’ ಎಂಬ ಮಾತು ಕೆಲವು ಮಕ್ಕಳ ಬಾಯಲ್ಲಿ ಕೇಳಿ ಬಂದಿರುವುದಾಗಿ ಅಲ್ಲಲ್ಲಿ ವರದಿಗಳನ್ನು ನೋಡಿದ್ದೇವೆ. ಅಂಥ ಮಾತು ಯಾರ ಬಾಯಿಯಿಂದಲೂ ಬರಬಾರದು. ಹಾಗೆ ಮಾತನಾಡುವ ಮಕ್ಕಳಿಗೆ ಅಥವಾ ಯುವಕರಿಗೆ ಸಂಬಂಧಪಟ್ಟ ಸಮುದಾಯದ ಹಿರಿಯರು ಬುದ್ಧಿಮಾತು ಹೇಳಬೇಕು. ಅಂಥವರನ್ನು ತಿದ್ದುವ ಕೆಲಸ ಆಗಬೇಕಿದೆ ಎಂದು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Theertha Swamiji) ಹೇಳಿದ್ದಾರೆ. ನಗರದ ಕೃಷ್ಣ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟ್ಯಂತರ ಭಕ್ತರ ನೆರವಿನಿಂದ ನಿರ್ಮಾಣವಾಗಿರುವ ರಾಮ ಮಂದಿರ ಒಡೆಯುತ್ತೇವೆ ಎಂಬ ಮಾತು ಸರಿಯಲ್ಲ ಎಂದು ಹೇಳಿದ್ದಾರೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸನ್ನಿಹಿತವಾಗಿದೆ, ದೇಶ ವಿದೇಶದ ಜನರು ಕೈಜೋಡಿಸಿದ್ದಾರೆ. ಮಂದಿರದ ಉದ್ಘಾಟನೆ ಮಂದಿರದಲ್ಲೇ ಆಗಬೇಕು ಆದ್ದರಿಂದ ಸೀಮಿತ ಜನರಿಗೆ ಮಾತ್ರ ಕರೆಯಲಾಗಿದೆ. ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳಲು ಸಾಧ್ಯವಾಗಲ್ಲ. ಪೂಜೆ, ಅಭಿಷೇಕ, ಯಜ್ಞ-ಯಾಗ ಎಲ್ಲ ದೇವಸ್ಥಾನಗಳಲ್ಲಿ ನಡೆಯಬೇಕು. ಹಾಗಾಗಿ ರಾಮಭಕ್ತರು ತಮ್ಮ ತಮ್ಮ ಊರುಗಳಲ್ಲಿ ಉತ್ಸವ ಆಚರಣೆ ಮಾಡಬೇಕೆಂದು ಹೇಳಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ಎಲ್​ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರಿಗೆ ಆಮಂತ್ರಣವಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ರಾಮಲಲ್ಲಾ ವಿಗ್ರಹ ಆಯ್ಕೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ: ಪೇಜಾವರ ಶ್ರೀ

ಸಿಎಂ ಸಿದ್ದರಾಮಯ್ಯಗೆ ಉದ್ಘಾಟನೆಗೆ ಆಹ್ವಾನವಿಲ್ಲಾ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಾವ ಸಿಎಂಗೆ ಆಹ್ವಾನ ನೀಡಲಾಗಿದೆ, ಯಾವ ಸಿಎಂಗೂ ಕರೆದಿಲ್ಲಾ. ಇಂತಹ ಮಾತುಗಳು ಸಲ್ಲದು ಎಂದಿದ್ದಾರೆ.

ಇದನ್ನೂ ಓದಿ: 1990ರಲ್ಲೇ ಐವರು ಮಕ್ಕಳಿಂದ ಉಡುಪಿಯಲ್ಲಿ ನಿರ್ಮಾಣವಾಯ್ತು ರಾಮ ಮಂದಿರ: ಈಗ ಹೀಗಿದೆ ಗೊತ್ತಾ?

ಮುಸಲ್ಮಾನರಲ್ಲಿ ಅರ್ಕಜ್ ಅಂತಾ ಒಂದು ಅಂತರಾಷ್ಟ್ರೀಯ ಸಂಘಟನೆ ಇದೆ. ಅಲ್ಲಿನ ಹಿರಿಯರು ಮುಸಲ್ಮಾನರಿಗೆ ಪ್ರಪಂಚದಲ್ಲಿರುವ ಆಸ್ತಿ ಏನು ಅಂತಾ ಹೇಳುತ್ತಾ, ಹಿಂದೂಸ್ಥಾನ ಎನ್ನುತ್ತಾರೆ. ಹಿಂದುಸ್ಥಾನ್ ಹಮಾರಾ ಹೈ ಅಂತಾ ಹೇಳಿದ್ದಾರೆ. ಇದು ಹೇಳಿ, ಕೇಳಿ ಹಿಂದೂ ರಾಷ್ಟ್ರ. ಹಿಂದೂಗಳು ಬಹುಸಂಖ್ಯಾತರಿರುವ ದೇಶ ಇದು. ಹಿಂದೂಗಳಾಗಿರುವ ನಾವು ಅಭಿಮಾನದಿಂದ ಹಿಂದೂ ರಾಷ್ಟ್ರ ಅಂತಾ ಹೇಳಿಕೊಂಡರೆ ಯಾವ ತಪ್ಪು. ಇತರರು ಹಿಂದೂಸ್ಥಾನ ಅಂತಾ ಕರೆಯುತ್ತಾರೆ ಎಂದರು.

ಧರ್ಮವನ್ನು ನಂಬಿರುವವರು ಹಾಳಾಗಲ್ಲ

ಹಿಂದೂಸ್ಥಾನ ಮಾಡಿದರೆ ಪಾಕಿಸ್ತಾನದಂತೆ, ಅಫ್ಘಾನಿಸ್ತಾನದಂತೆ ಭಾರತದ ಪರಿಸ್ಥಿತಿಯಾಗುತ್ತದೆ ಎಂದು ಸಿಎಂ ಪುತ್ರ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದೂ ಎಂಬುದು ಧರ್ಮ ಮತವಲ್ಲ, ಮತವನ್ನು ನೆಚ್ಚಿರೋ ದೇಶ ಹಾಳಾಗಬಹುದು. ಧರ್ಮವನ್ನು ನಂಬಿರುವರು ಹಾಳಾಗಲ್ಲ. ಸರ್ವೇ ಜನಾಃ ಸುಖಿಯೋ ಭವಂತು ಎನ್ನಲಾಗಿದೆ, ಹಿಂದೂ ಜನಾಃ ಸುಖಿನೋ‌ಭವಂತು ಎಂದಿಲ್ಲ. ನಾವು ಹಿಂದೂಗಳು ಹಿಂದೂ ರಾಷ್ಟ್ರ ಅಂತಾ ಕರೆಯೋದಕ್ಕೆ ನಮಗೆ ಹೆಮ್ಮೆ ಇದೆ. ಹಿಂದೂಗಳಾದ ನಾವು ಹಿಂದೂ ರಾಷ್ಟ್ರ ಅಂತಾ ಅನ್ನಬಾರದು ಅಂತಾ ಯಾವ ಸಂವಿಧಾನದಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:32 pm, Thu, 4 January 24

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us