
ಬೆಂಗಳೂರು, ಮಾರ್ಚ್ 16: ನಟಿ ರನ್ಯಾ ರಾವ್ (Ranya Rao) ವಿದೇಶಗಳಿಂದ ಚಿನ್ನ ಅಕ್ರಮ ಸಾಗಾಟ (Gold Smuggling) ಮಾಡಿರುವ ವಿಚಸರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಯತ್ನಾಳ್ ವಾಗ್ದಾಳಿ ನಡೆಸಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಇಡೀ ಪ್ರಕರಣ ಕುರಿತು ಸೋಮವಾರ ಸದನದಲ್ಲಿ ಮಾತನಾಡುವೆ. ಆಕೆಯೊಂದಿಗೆ ಸಂಪರ್ಕವಿರುವ ಇಬ್ಬರು ಸಚಿವರ ಹೆಸರನ್ನು ಸದನದಲ್ಲಿ ಹೇಳುವೆ. ಈಗ ಆ ಬಗ್ಗೆ ಮಾಧ್ಯಮಗಳ ಮುಂದೆ ಹೇಳುವುದಿಲ್ಲ. ಇದು ಸದನದ ರಹಸ್ಯ ಎಂದರು. ಆಕೆಗೆ ಪ್ರೊಟೋಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಚಿನ್ನ ಎಲ್ಲಿಂದ ತಂದಿದ್ದಾರೆ? ಎಲ್ಲಿಟ್ಟು ತಂದಿದ್ದಾರೆ ಎಂಬುದು ಗೊತ್ತಿದೆ ಎಂದು ಯತ್ನಾಳ್ ಹೇಳಿದರು.
ರನ್ಯಾ ಪ್ರಕರಣದಲ್ಲಿ ಕೇಂದ್ರದ ಕಸ್ಟಮ್ಸ್ ಆಧಿಕಾರಿಗಳೂ ತಪ್ಪು ಮಾಡಿದ್ದಾರೆಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಯಾರು ತಪ್ಪು ಮಾಡಿದ್ದರೂ ಅದು ತಪ್ಪೇ. ಕಸ್ಟಮ್ಸ್ ಆಧಿಕಾರಿಗಳು ತಪ್ಪು ಮಾಡಿದ್ದರೆ ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳತ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ದರೆ ಅದು ಕೂಡ ತಪ್ಪೇ ಎಂದರು.
ರನ್ಯಾಗೆ ಕೆಐಎಡಿಬಿಯಿಂದ 12 ಎಕರೆ ಜಮೀನು ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿ, ಜಮೀನು ಕೊಟ್ಟಿದ್ದನ್ನು ಸ್ವತಃ ಮುರುಗೇಶ್ ನಿರಾಣಿ ಒಪ್ಪಿಕೊಂಡಿದ್ದಾರೆ. 12 ಏಕರೆ ಜಮೀನು ಕೊಟ್ಟಿದ್ದು, ಹಣ ಪಾವತಿ ಮಾಡದ ಕಾರಣ ಅದು ರದ್ದಾಗಿದೆ. 12 ಏಕರೆಗೆ ಜಮೀನಿಗೆ ಯಾರೋ ಒಬ್ಬರು ಹಣ ಕೊಡುತ್ತೇನೆ ಎಂದಿದ್ದರು. ಅವರು ಕೊಟ್ಟಿಲ್ಲ. ಹಾಗಾಗಿ ಜಮೀನು ಹಂಚಿಕೆ ಹಾಗಾಗಿ ರದ್ದಾಗಿದೆ ಎಂದರು.
ಬಿಡದಿಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಬರೆದಿರುವುದನ್ನು ಖಂಡಿಸಿದ ಯತ್ನಾಳ್, ಅನ್ಯಕೋಮಿನವರಿಗೆ ಸರ್ಕಾರದ ಬಗ್ಗೆ ಹಾಗೂ ದೇಶದ ಬಗ್ಗೆ ಭಯ ಉಳಿದಿಲ್ಲ. ಅವರು ಸ್ವೇಚ್ಛಾಚಾರದಿಂದ ರಾಜ್ಯದಲ್ಲಿ ಜೀವನ ಮಾಡುತ್ತಿದ್ದಾರೆ. ಗೃಹ ಸಚಿವರು ಏನೂ ಮಾಡುತ್ತಿಲ್ಲ, ಅವರು ಜೀರೋ ಆಗಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೂಡ ನೀಡುತ್ತಿಲ್ಲ. ಸಿಎಂಗೆ ಹೇಳಿ ಬೇರೆ ಇಲಾಖೆಯ ಹೊಣೆಯನ್ನಾದರೂ ತೆಗೆದುಕೊಳ್ಳಲಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕರ್ನಾಟಕವು ಪಾಕಿಸ್ತಾನದ ಒಂದು ಭಾಗವಾದಂತಾಗಿದೆ ಎಂದು ಟೀಕಿಸಿದರು.
ಸರ್ಕಾರಿ ಶಾಲಾ ಕಾಲೇಜುಗಳಿಗೆ ಅನುದಾನ ನೀಡಿಲ್ಲ. ಆದರೆ, ಮದರಸಾಗಳಿಗೆ ಹಣ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಉರ್ದು ಶಾಲೆಗಳಿಗೆ 100 ಕೋಟಿ ರೂಪಾಯಿಗಳನ್ನು ನೀಡುತ್ತೇನೆಂದಿದ್ದಾರೆ. ಮದರಸಾದಲ್ಲಿ ದೇಶದ್ರೋಹಿ ವಿಚಾರಗಳನ್ನು ಕಲಿಸುತ್ತಾರೆ. ಇಸ್ಲಾಂ ಎಂದರೆ ಅನ್ಯ ಧರ್ಮವನ್ನು ನಾಶ ಮಾಡಬೇಕು ಎಂಬುದು. ಲವ್ ಜಿಹಾದ್ ಮಾಡಬೇಕೆಂಬುದನ್ನು ಕಲಿಸುವವರಿಗೆ ಸಿದ್ದರಾಮಯ್ಯ ಹಣ ನೀಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರದಿಂದ ಅನ್ಯಕೋಮಿನವರಿಗೆ ಶಕ್ತಿ ಬಂದಾಗಿದೆ. ಈ ಕುರಿತು ಸದನದಲ್ಲಿ ಮಾತನಾಡಿ ಜನಪರ ಹೋರಾಟ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದರು.
ಸಾಮಾನ್ಯ ಶಿಕ್ಷಣ ಕಾಯ್ದೆ ಮದರಸಾಗಳಿಗೆ ಅನ್ವಯವಾಗಬೇಕು. ಅಲ್ಲಿ ರಾಷ್ಟ್ರಗೀತೆ ಹಾಡಿ ಗಣಿತ, ವಿಜ್ಞಾನ. ಸಮಾಜದಂತಹ ವಿಷಯಗಳ ಬೋಧನೆ ಆಗಬೇಕು. ಮದರಸಾಗಳಲ್ಲಿ ಇಂದಿನ ವಿಜ್ಞಾನ ಒಪ್ಪಲ್ಲ, ಖುರಾನ್ ಮಾತ್ರ ಒಪ್ಪುತ್ತಾರೆ. ಸಿದ್ದರಾಮಯ್ಯ ಕಂಪ್ಯೂಟರ್ ಕೊಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಕಂಪ್ಯೂಟರ್ ತಗೊಂಡು ಅವರು ದೇಶ ವಿರೋಧ ಚಟುವಟಿಕೆ ಮಾಡುತ್ತಾರೆ.. ವಿಶ್ವ ವಿರೋಧಿ ಚಟುವಟಿಕೆಗಳ ಉನ್ನತೀಕರಣಕ್ಕೆ ಅವಕಾಶ ನೀಡಿದಂತಾಗಿದೆ. ಸಿದ್ದರಾಮಯ್ಯ ಇರುವವರೆಗೂ ನಮ್ಮನ್ನು ಯಾರಿಂದಲೂ ಏನೂ ಮಾಡಲಾಗದು ಎಂಬ ಧೈರ್ಯ ಮುಸ್ಲಿಮರಿಗೆ ಬಂದಿದೆ. ಇದನ್ನೆಲ್ಲ ವಿರೋಧಿಸಿ ಹೋರಾಟ ಮಾಡುವಲ್ಲಿ ಬಿಜೆಪಿಯೂ ವಿಫಲವಾಗಿದೆ. ಈ ಮೊದಲೇ ಸರಿಯಾಗಿ ಹೋರಾಟ ಮಾಡಿಕೊಂಡು ಬಂದಿದ್ದರೆ ಇದೆಲ್ಲಾ ಹೇಗೆ ಆಗುತ್ತಿತ್ತು ಎಂದು ಯತ್ನಾಳ್ ಪ್ರಶ್ನಿಸಿದರು.
ನಮ್ಮವರು ಕೂಡ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಹಿಂದೆ ಕೆಜೆ ಹಳ್ಳಿ ಡಿಜೆ ಹಳ್ಳಿ, ಹುಬ್ಬಳ್ಳಿ ಗಲಾಟೆಗಳ ಸಂದರ್ಭಗಳಲ್ಲಿ ನಾಲ್ಕಾರು ಎನ್ಕೌಂಟತರ್ ಮಾಡಿದ್ದರೆ ಸರಿಯಾಗಿರುತ್ತಿತ್ತು. ಇಂತಹ ಘಟನೆಗಳಲ್ಲಿ ನಮ್ಮವರು ದೊಡ್ಡದೇನೂ ಮಾಡಿಲ್ಲ. ನಮ್ಮವರು ಮಾಡಿದ ತಪ್ಪಿನಿಂದಲೇ ಹಿಂದೂ ಜನರು ಬೇಜಾರಾದರು. ಹಾಗಾಗಿ ಕೆಟ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. 136 ಸ್ಥಾನಗಳು ಬರಲು ನಮ್ಮ ಮೇಲಿನ ಹಿಂದುಗಳ ಬೇಸರವೇ ಪ್ರಮುಖ ಕಾರಣ. ನನ್ನ ಬಿಟ್ಟು ಬೇರೆ ಯಾರು ಅನ್ನಕೋಮಿನವರ ಬಗ್ಗೆ ಮಾತನಾಡಲ್ಲ. ಪಾಕಿಸ್ತಾನ ಹಿಂದುಗಳ ಬಗ್ಗೆ ಮಾತನಾಡುವುದಿದ್ದರೆ ವಿರೋಧ ಪಕ್ಷದ ನಾಯಕರು ನನಗೆ ಮಾತನಾಡು ಎನ್ನುತ್ತಾರೆ ಎಂದರು.
ಇದನ್ನೂ ಓದಿ: ದುಬೈ ಏರ್ಪೋರ್ಟ್ ಅಧಿಕಾರಿಗಳಿಗೆ ಯಾಮಾರಿಸಿದ್ದ ರನ್ಯಾ, ಸ್ವಿಟ್ಜರ್ಲೆಂಡ್ಗೆ ಹೋಗ್ತೇನೆಂದು ಬೆಂಗಳೂರಿಗೆ ಬಂದಳು
ನಮ್ಮ ರಾಜ್ಯಾಧ್ಯಕ್ಷನಂತೂ ಹೊಂದಾಣಿಕೆ ಗಿರಾಕಿ. ವಿಜಯೇಂದ್ರ ಅಡ್ಜೆಸ್ಟ್ಮೆಂಟ್ ಗಿರಾಕಿ. ವಿಜಯೇಂದ್ರ ಏನೂ ಮಾತನಾಡಡುವುದಿಲ್ಲ. ಅವರಿಂದ ನ್ಯಾಯ ಸಿಗಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಯತ್ನಾಳ್ ಹೇಳಿದರು.
Published On - 3:34 pm, Sun, 16 March 25