AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯರೇ ನಕ್ಸಲರಿಗೆ ಶರಣಾಗಿದ್ದಾರೆ, ಅವರಿಗೆ ವಿಶೇಷ ಪ್ಯಾಕೇಜ್ ಕೊಟ್ಟಿದ್ದು ತಪ್ಪು: ಶಾಸಕ ಯತ್ನಾಳ್​

ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಕ್ಸಲರ ಶರಣಾಗತಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದನ್ನು ಖಂಡಿಸಿದ್ದಾರೆ. ಸಿಟಿ ರವಿ ಅವರಿಗೆ ಬೆದರಿಕೆ ಪತ್ರ ಬಂದಿರುವ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ಆರೋಪಿಸಿದ್ದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯರೇ ನಕ್ಸಲರಿಗೆ ಶರಣಾಗಿದ್ದಾರೆ, ಅವರಿಗೆ ವಿಶೇಷ ಪ್ಯಾಕೇಜ್ ಕೊಟ್ಟಿದ್ದು ತಪ್ಪು: ಶಾಸಕ ಯತ್ನಾಳ್​
ಸಿದ್ದರಾಮಯ್ಯರೇ ನಕ್ಸಲರಿಗೆ ಶರಣಾಗಿದ್ದಾರೆ, ಅವರಿಗೆ ವಿಶೇಷ ಪ್ಯಾಕೇಜ್ ಕೊಟ್ಟಿದ್ದು ತಪ್ಪು: ಶಾಸಕ ಯತ್ನಾಳ್​
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Jan 11, 2025 | 4:30 PM

Share

ವಿಜಯಪುರ, ಜನವರಿ 11: ನಕ್ಸಲರಿಗೆ ವಿಶೇಷ ಪ್ಯಾಕೇಜ್ ಕೊಟ್ಟಿದ್ದು ತಪ್ಪು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರು ಶಸ್ತ್ರಾಸ್ತ್ರಗಳನ್ನು ಮುಂದಿಟ್ಟು ಬಳಿಕ ಶರಣಾಗತಿ ಆಗಬೇಕಿತ್ತು. ಸಿದ್ದರಾಮಯ್ಯ ಅವರೇ ನಕ್ಸಲರಿಗೆ ಶರಣಾಗಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಎಷ್ಟೋ ಪೊಲೀಸ್ ಅಧಿಕಾರಿಗಳು, ರೈತರು ಪ್ರಾಣ ಕಳೆದುಕೊಂಡಿದ್ದಾರೆ. ನಕ್ಸಲರಿಗೆ ಏನು ಕೊಡಬೇಕೆಂದು ಕೋರ್ಟ್​ ತೀರ್ಮಾನ ಮಾಡುತ್ತದೆ. ನಕ್ಸಲರಿಂದ ಹತ್ಯೆಯಾದ ಪೊಲೀಸರು, ನಾಗರಿಕರ ಕುಟುಂಬಕ್ಕೆ ಏನು ಕೊಟ್ರು? ಮುಖ್ಯವಾಹಿನಿಗೆ ಬರಬೇಕು ಅಂದರೆ ಕಾನೂನು ಪ್ರಕಾರ ಆಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಮ್ಮ ರಾಜ್ಯದಲ್ಲಿ ಜನಪ್ರತಿನಿಧಿಗಳು ಸಹ ಸುರಕ್ಷಿತರಾಗಿಲ್ಲ, ಅವರಿಗೂ ಬೆದರಿಕೆ ಪತ್ರಗಳು!: ಬಸನಗೌಡ ಯತ್ನಾಳ್

ಇಂದು ಶರಣರಾಗಿ ನಾಳೆ ವೆಪನ್ಸ್ ತಂದು ಕೊಡಿ ಅಂತಾರೆ. ಮುಂದಿನ ದಿನಗಳಲ್ಲಿ ಇದೊಂದು ಸ್ಟೈಲ್ ಆಗುತ್ತೆ. ಕೆಲ ದಿನ ಬಂದೂಕು ಹಾಕಿಕೊಂಡು ಓಡಾಡುತ್ತಾರೆ. ನಾಲ್ಕಾರು ಕೊಲೆ ಮಾಡುತ್ತಾರೆ. ನಂತರ 6 ತಿಂಗಳು ಮಾಯವಾಗುತ್ತಾರೆ. ನಂತರ ಶರಣಾಗುತ್ತಾರೆ ಅವರಿಗೆ ವಿಶೇಷ ಪ್ಯಾಕೇಜ್ ಕೊಡುತ್ತಿರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿಯ ಮಾಜಿ ಶಾಸಕರ ಸಭೆ ವಿಚಾರವಾಗಿ ಮಾತನಾಡಿದ ಅವರು, ನಿನ್ನೆ 17 ಜನರು ನನಗೆ ಕರೆ ಮಾಡಿದ್ದರು. ನಾವು ಯಾರು ಆತ್ಮ ಸಾಕ್ಷಿಯಾಗಿ ಹೋಗಿಲ್ಲ. ರಾಜ್ಯಾಧ್ಯಕ್ಷ ಹುದ್ದೆಯಲ್ಲಿರುವ ಕಾರಣದಿಂದ ಹೊಗಿದ್ದೇವೆ. ನಾವು ಪಕ್ಷದ ವಿರುದ್ದ ಹೋಗಿಲ್ಲ. ಅವರ ಸಭೆ ಕರೆದಿರುವ ಬಗ್ಗೆ ನಮ್ಮದೇನು ವಿರೋಧವಿಲ್ಲ. ಅವರೆಲ್ಲ ಮಾಜಿಗಳು ಆಗಲು ಕಾರಣರು ಯಾರು. ಅದು ಆತ್ಮಾವಲೋಕನ ಅಲ್ಲಿ ಆಗಬೇಕಿತ್ತು. ಅವರೆಲ್ಲ ಆಯ್ಕೆ ಆಗಿದ್ದರೆ ನಮ್ಮ ಸರ್ಕಾರ ಇರುತಿತ್ತು. ಅವರನ್ನೆಲ್ಲಾ ಸೋಲಿಸಿದ ಕಾಣದ ಕೈಗಳು ಯಾವವು? ಆ ಕೈಗಳು ಎರಡೋ, ನಾಲ್ಕು ಅನ್ನೋದು ಚರ್ಚೆ ಆಗಿದ್ದರೆ, ಈಗ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಕುಮಾರಸ್ವಾಮಿ ಭೇಟಿಯಾದ ರಮೇಶ್ ಜಾರಕಿಹೊಳಿ: ಬಿಜೆಪಿ ಭಿನ್ನಮತ ಚರ್ಚೆಗೆ ಒಲ್ಲೆ ಎಂದ ಹೆಚ್​ಡಿಕೆ

ನೀವು ಸೋತಿದ್ದಿರಿ, ಪಾಪ ನಾವು ಇಲ್ಲ ಹೊಂದಾಣಿಕೆ ಮಾಡಿಕೊಂಡಿದ್ದೇವು. ಎರಡು ವರ್ಷಗಳ ನಂತರ ಇವರಿಗೆ ಈಗ ಬೇಕಾಗಿದೆ ಇದೆಲ್ಲ. ವಕ್ಫ್​ ಹೋರಾಟ ಮಾಡುತ್ತಿದ್ದೇವೆ ಅದಕ್ಕೆ ಬೆದರಿ ಮಾಜಿ ಶಾಸಕರ ವಿಶ್ವಾಸಕ್ಕೆ ತೆಗೆಯುವ ಕೆಲಸ ಆಗುತ್ತಿದೆ. ಈ ಕೆಲಸ ನಿಷ್ಠಾವಂತ ಬಿಜೆಪಿ ಗುಂಪಿನಿಂದ ಆಗಿದೆ. 120 ಮಾಜಿ ಶಾಸಕರಿಂದ ಸಭೆ ಎಂದು ಹೇಳಲಾಗಿದೆ. ಕರ್ನಾಟಕದಲ್ಲೇ 120 ಮಾಜಿ ಶಾಸಕರು ಇಲ್ಲಾ ಎಂದು ಹೇಳಿದ್ದಾರೆ.

ಕುಂಭಮೇಳ ನಡೆಯುತ್ತಿರುವ ಜಾಗವೂ ವಕ್ಫ್​ದು ಎನ್ನಲಾಗಿದೆ 

ವಕ್ಪ್ ಕುರಿತು ನಮ್ಮ ತಂಡ ನೀಡಿದ ವರದಿಗೆ ಜಂಟೀ ಸದನ ಸಮಿತಿ ಮೆಚ್ಚುಗೆ ನೀಡಿದೆ. ಜಗದಂಬಿಕಾ ಪಾಲ್, ಕೇಂದ್ರ ಕಾನೂನು ಸಚಿವರು ಹಾಗೂ ಅಮೀತ್ ಶಾ ಮೆಚ್ಚುಗೆ ನೀಡಿದ್ದಾರೆ. ನಾವು ನೀಡಿರುವ ಮಾಹಿತಿ ಒಳ್ಳೆಯದಿದೆ ಎಂದು ಸಂದೇಶ ಕೊಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳ ಜಾಗವೂ ವಕ್ಪ್ ಎನ್ನಲಾಗಿದೆ. ಒಂದಿಂಚೂ ನೆಲ ಕೊಡಲ್ಲಾ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ನಾವು ಭಾರತ ದೇಶದ ಒಂದಿಂಚೂ ನೆಲ ವಕ್ಫ್​ಗೆ ಕೊಡಲ್ಲಾ. ಇದು ನಮ್ಮದು, ಸನಾತನ ಹಿಂದೂ ಧರ್ಮದ ಭೂಮಿಯಿದು. ಸಿದ್ದರಾಮಯ್ಯ ಜಮೀರ್ ಲಗಾ ಹೊಡೆಯಲಿ ರಾಜ್ಯದಲ್ಲಿ ವಕ್ಫ್​ಗೆ ಭೂಮಿ ನೀಡಲ್ಲ. ಕೇಂದ್ರದಲ್ಲಿ ತಿದ್ದುಪಡಿ ತಂದು ವಕ್ಪ್ ಆಸ್ತಿ ವಶಕ್ಕೆ ಪಡೆದು ಹಿಂದುಳಿದವರಿಗೆ ದಲಿತರಿಗೆ ಮನೆ ಕಟ್ಟಿ ಕೊಡುತ್ತೇವೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!