Siddeshwar Swamiji: ಅಂತ್ಯಕ್ರಿಯೆ ಮುಗಿದು ಮೂರು ದಿನಗಳಾದರೂ ಮುಗಿಯುತ್ತಿಲ್ಲ ಭಕ್ತರ ದರ್ಶನ

Siddeshwar Swamiji: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಹಲೋಕ ತ್ಯಜಿಸಿ ಇಂದಿಗೆ ಐದು ದಿನಗಳಾಗಿದ್ದು, ಮಠದ ಆವರಣದಲ್ಲಿ ಸ್ವಾಮೀಜಿಗಳ ಹಾಗೂ ಭಕ್ತರ ಹಾಜರಾತಿ ಮಾತ್ರ ಇನ್ನು ಕಡಿಮೆಯಾಗಿಲ್ಲ.

Siddeshwar Swamiji: ಅಂತ್ಯಕ್ರಿಯೆ ಮುಗಿದು ಮೂರು ದಿನಗಳಾದರೂ ಮುಗಿಯುತ್ತಿಲ್ಲ ಭಕ್ತರ ದರ್ಶನ
ತುಮಕೂರಿನ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಭೇಟಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 07, 2023 | 9:08 PM

ವಿಜಯಪುರ: ಶ್ರೀಗಳ ಅಂತ್ಯಕ್ರಿಯೆ ಬಳಿಕ ಎರಡು ದಿನವಾದರೂ ಇನ್ನೂ ಭಕ್ತರ ಹಾಗೂ ಮಠಾಧೀಶರ ಭೇಟಿ ಮುಗಿಯುತ್ತಿಲ್ಲ. ನಿರಂತರಾಗಿ ಜ್ಞಾನ ಯೋಗಾಶ್ರಮಕ್ಕೆ ಭಕ್ತರು, ವಿದ್ಯಾರ್ಥಿಗಳು, ಸ್ವಾಮೀಜಿಗಳು ಬರುತ್ತಿದ್ದಾರೆ. ಇಂದೂ ಸಹ ಆಶ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ನಿನ್ನೆ(ಜ.5) ಸುಮಾರು 35,000 ಭಕ್ತರು ಆಶ್ರಮಕ್ಕೆ ಭೇಟಿ ನೀಡಿದ್ದರು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳ ದರ್ಶನ ಮಾಡಿಸುತ್ತಿದ್ದಾರೆ. ವಿಭೂತಿಯನ್ನು ತಂದು ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆ ಮಾಡಿದ ಸ್ಥಳಕ್ಕೆ ಮುಟ್ಟಿಸಿಕೊಂಡು ಮನೆಗೆ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ.

ಇನ್ನು ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಬಳಿಕ ಇತ್ತ ಆಗಮಿಸಲಾಗದ ಕಾರಣ ಇಂದು(ಜ.6) ತುಮಕೂರಿನ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಇತರೆ ಸ್ವಾಮೀಜಿಗಳು ಆಶ್ರಮಕ್ಕೆ ಆಗಮಿಸಿದ್ದರು. ಶ್ರೀ ಸಿದ್ದೇಶ್ವರ ಸ್ವಾಮೀಗಳ ಅಂತ್ಯಕ್ರಿಯೆ ಮಾಡಿದ ಕಟ್ಟೆಗೆ ಪೂಜೆ ಸಲ್ಲಿಸಿ ಕರ್ಪೂರದಾರತಿ ಬೆಳಗಿ ನಮಸ್ಕರಿಸಿದರು. ಬಳಿಕ ಆಶ್ರಮದ ಕಟ್ಟಡದಲ್ಲಿ ಸಿದ್ದೇಶ್ವರ ಸ್ವಾಮೀಜಿ ತಂಗಿರುತ್ತಿದ್ದ ಕೊಠಡಿಯಲ್ಲಿ ಸಂಗ್ರಹಿಸಿಡಲಾಗಿರುವ ಶ್ರೀಗಳ ಚಿತಾಭಸ್ಮ ದರ್ಶನವನ್ನ ಮಾಡಿದರು.

ಬಳಿಕ ಮಾತನಾಡಿದ ಸಿದ್ದಗಂಗಾ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯ ಸಂಸ್ಕಾರದ ಸಮಯದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ನಾನು ಭಾಗಿಯಾಗಿಲ್ಲ ಎಂಬ ನೋವು ತುಂಬಾ ಕಾಡುತ್ತಿದೆ. ಆದ್ದರಿಂದ ಇಂದು ಇಲ್ಲಿಗೆ ಬಂದಿದ್ದೇನೆ. ಶ್ರೀಗಳ ಅಗಲಿಗೆ ರಾಜ್ಯಕ್ಕೆ, ದೇಶಕ್ಕೆ ಅಷ್ಟೇಯಲ್ಲಾ ಇಡೀ ಪ್ರಪಂಚಕ್ಕೆ ಆಗಿರುವ ನಷ್ಟ. ಶ್ರೀಗಳು ಜ್ಞಾನ ಭಾಸ್ಕರರಾಗಿದ್ದರು. ಸ್ವಾಮೀಜಿಗಳನ್ನು ನಾವು ಅನುಕರಣೆ ಮಾಡಿ ಅವರ ಆದರ್ಶಗಳನ್ನು ಪಾಲನೆ ಮಾಡಬೇಕಿದೆ. ಜ್ಞಾನ ಯೋಗಾಶ್ರಮಕ್ಕೆ ಭೇಟಿಯಿಂದ ನಾನು ಧನ್ಯನಾಗಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:Vijayapura Siddeshwara Swamiji: ತಮ್ಮ ಎದುರು ಹಾಡಿದ್ದ ಬಾಲಕನ ಹಾಡಿಗೆ ಮುಗುಳ್ನಕ್ಕಿದ್ದ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ

ಜನವರಿ 2 ರಂದು ಆದ್ಮಾತ್ಮ ಲೋಕದ ಹರಿಕಾರ, ಪ್ರವಚನಕಾರ, ಶ್ವೇತ ವಸ್ತ್ರಧಾರಿ ಶ್ರೀ ಸಿದ್ದೇಶ್ವರ ಸ್ವಾಮೀಜಿ (82) ದೇವರ ಪಾದಗಳಲ್ಲಿ ಲೀನವಾಗಿದ್ದಾರೆ. ಸರಿ ಸುಮಾರು 25 ಲಕ್ಷ ಜನರ ದರ್ಶನದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಸಿದ್ದೇಶ್ವರ ಸ್ವಾಮೀಜಿ ಅವರ ಇಚ್ಚೇಯಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಆದರೂ ಭಕ್ತರು ಭೇಟಿ ನೀಡುವುದು ಬಿಟ್ಟಿಲ್ಲ. ಸ್ವಾಮೀಜಿಗಳಿಲ್ಲದೇ ಆಶ್ರಮ ರಸವಿಲ್ಲದ ಕಬ್ಬಿನಂತಾಗಿದೆ, ಭಾವವಿಲ್ಲದ ಭಕ್ತಿಯಂತಾಗಿದೆ. ಆಶ್ರಮದಲ್ಲಿರುವ ಖಾವಿಧಾರಿಗಳ ಮುಖದಲ್ಲಿ ತೇಜಸ್ಸು ಕಡಿಮೆಯಾಗಿ ಗುರುವಿನ ನೆನಪು ಕಾಡುತ್ತಿದೆ.

ವರದಿ: ಅಶೋಕ ಯಡಳ್ಳಿ ಟಿವಿ9 ವಿಜಯಪುರ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Sat, 7 January 23

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ