ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಇಂದು ಮತ್ತೆ ಐವರು ಬಾಣಂತಿಯರ ಹೋಲಿಗೆ ಬಿಚ್ಚಿ ರಕ್ತಸ್ರಾವ! ಕಣ್ಣೀರು ಹಾಕಿ ಮನವಿ ಮಾಡಿದ ಸಂಬಂಧಿಕರು

| Updated By: sandhya thejappa

Updated on: May 15, 2022 | 3:08 PM

ಏ.30ರಿಂದ ಮೇ 13ರವರೆಗೆ ಸುಮಾರು 18 ಬಾಣಂತಿಯರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಸ್, ಇಂದು ಓರ್ವ ಬಾಣಂತಿಯರಿಗೆ ಮಾತ್ರ ಸಮಸ್ಯೆಯಾಗಿದೆ. ಹೋಲಿಗೆ ಬಿಚ್ಚಿಕೊಂಡ ಬಾಣಂತಿಯರಿಗೆ ಚಿಕಿತ್ಸೆ ಮುಂದುವರೆದಿದೆ.

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಇಂದು ಮತ್ತೆ ಐವರು ಬಾಣಂತಿಯರ ಹೋಲಿಗೆ ಬಿಚ್ಚಿ ರಕ್ತಸ್ರಾವ! ಕಣ್ಣೀರು ಹಾಕಿ ಮನವಿ ಮಾಡಿದ ಸಂಬಂಧಿಕರು
ಆಸ್ಪತ್ರೆಗೆ ದಾಖಲಾಗಿರುವ ಬಾಣಂತಿ
Follow us on

ವಿಜಯಪುರ: ಜಿಲ್ಲಾ ಆಸ್ಪತ್ರೆಯಲ್ಲಿ (District Hospital) ಬಾಣಂತಿಯರು ಪರದಾಡುವ ದೃಶ್ಯ ಕಂಡುಬಂದಿದೆ. ಆಪರೇಷನ್ ಮಾಡಿದ ಬಳಿಕ ಸ್ಟಿಚ್ ಬಿಚ್ಚಿ ರಕ್ತಸ್ರಾವ (Bleeding) ಆಗುತ್ತಿದೆ. ಇದಕ್ಕೆ ಆಸ್ಪತ್ರೆ ವೈದ್ಯರೇ ಕಾರಣ ಎಂಬ ಆರೋಪ ನಿನ್ನೆ ಕೇಳಿಬಂದಿತ್ತು. ಇಂದು ಕೂಡಾ ಈ ಘಟನೆ ಮರುಕಳಿಸಿದೆ. ಇಂದು ಮತ್ತೆ ಐವರು ಬಾಣಂತಿಯರ ಹೊಲಿಗೆ ಬಿಚ್ಚಿ ರಕ್ತಸ್ರಾವವಾಗಿದೆ. ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಈ ಘಟನೆ ಸಂಭವಿಸಿದೆ. ಡಿಸ್ಚಾರ್ಜ್ ಆಗಿದ್ದ ಬಾಣಂತಿಯರು ವಾಪಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಏ.30ರಿಂದ ಮೇ 13ರವರೆಗೆ ಸುಮಾರು 18 ಬಾಣಂತಿಯರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಸ್, ಇಂದು ಓರ್ವ ಬಾಣಂತಿಯರಿಗೆ ಮಾತ್ರ ಸಮಸ್ಯೆಯಾಗಿದೆ. ಹೊಲಿಗೆ ಬಿಚ್ಚಿಕೊಂಡ ಬಾಣಂತಿಯರಿಗೆ ಚಿಕಿತ್ಸೆ ಮುಂದುವರೆದಿದೆ. ಯಾರೂ ಆತಂಕಕ್ಕೆ ಒಳಗಾಗಬೇಡಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಕಣ್ಣೀರು ಹಾಕಿ ಭಯವನ್ನು ವ್ಯಕ್ತಪಡಿಸಿರುವ ಸಂಬಂಧಿಕರು, ನಾವು ಬಡವರು, ಜೀವದ ಜೊತೆಗೆ ಆಟವಾಡಬೇಡಿ. ಸೂಕ್ತ ಚಿಕಿತ್ಸೆ ನೀಡಿ ಎಂದು ಮನವಿ ಮಾಡಿದ್ದಾರೆ.

ಸದ್ಯ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿದ್ದಾರೆ. ಈ ವೇಳೆ ಘಟನೆ ಬಗ್ಗೆ ಮಾಹಿತಿ ಪಡೆದರು. ಬಾಣಂತಿಯರನ್ನು ಹಾಗೂ ಅವರ ಸಂಬಂಧಿಗಳನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದರು. ಸ್ವತಃ ಎಲ್ಲ‌ ಬಾಣಂತಿಯರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದರು

ಇದನ್ನೂ ಓದಿ
ಒಂದು ತಿಂಗಳಲ್ಲಿ ತಮಿಳುನಾಡಿನಿಂದ ‘ಕೆಜಿಎಫ್ 2’ ಮಾಡಿದ ಕಲೆಕ್ಷನ್ ಎಷ್ಟು? ಇಲ್ಲಿದೆ ವಿವರ
IPL 2022: SRH ಸೋತಿದ್ದು RCB ತಂಡಕ್ಕೆ ಪ್ಲಸ್ ಪಾಯಿಂಟ್
ವರ್ಕ್ ಫ್ರಾಮ್ ಹೋಮ್ ನಲ್ಲಿದ್ದಾಗ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು 6 ಮಾರ್ಗಗಳು
ವಿಜಯಪುರ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರ ಪರದಾಟ, ಬಾಣಂತಿಯರ ಆಪರೇಷನ್ ಸ್ಟಿಚಸ್ ಬಿಚ್ಚಿ ರಕ್ತಸ್ರಾವದಿಂದ ನರಳಾಟ

ನಿನ್ನೆ ಮಾತನಾಡಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಎಸ್ ಎಲ್ ಲಕ್ಕಣ್ಣವರ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ‌ ಒಂದೇ ‌ಆಪರೇಷನ್ ಥಿಯೇಟರ್ ಇದೆ. ಸಿಜೇರಿಯನ್ ಹೆರಿಗೆ ಆದವರಿಗೆ ಇನ್ಪೆಕ್ಷನ್ವ್ ಆಗಿದ್ದು‌ ನಿಜಾ. ದಿನಕ್ಕೆ ಸರಾಸರಿ‌ 40 ಕ್ಕೂ ಅಧಿಕ ಹೆರಿಗೆಗಳು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಗುತ್ತವೆ. .ಈ‌ ಪೈಕಿ ನಿತ್ಯ ಕನಿಷ್ಟ 15 ಗರ್ಭಿಣಿಯರಿಗೆ ಸಿಜೇರಿಯನ್ ಹೆರಿಗೆ ಆಗುತ್ತವೆ. ಒಂದೇ ಮಹಾಶಸ್ತ್ರಚಿಕಿತ್ಸಾ ಘಟಕ ಇರೋ ಕಾರಣ ಸಮಸ್ಯೆ ಆಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:04 pm, Sun, 15 May 22