Vijayapura Airport: ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ವನವಾಸ ತಪ್ಪಿಲ್ಲ; ಅಸೆಂಬ್ಲಿ ಚುನಾವಣೆಗೂ ಮುನ್ನ ನಿರ್ಮಾಣ ಮುಗಿಸಲು ಸೂಚನೆ
ಇದೆಲ್ಲದರ ಹೊರತಾಗಿಯೂ 2023 ರ ಏಪ್ರಿಲ್-ಮೇ ನಲ್ಲಿ ವಿಧಾನಸಭಾ ಚುನಾವಣೆ ನಡೆಯುಲಿದ್ದು ಚುನಾವಣಾ ಬಿಸಿ ಮತ್ತಷ್ಟು ವಿಳಂಬಕ್ಕೆ ಕಾರಣವಾಗಬಾರದು. ಅದಕ್ಕಾಗಿ ಇಂದು ಎಂಪಿ ಜಿಗಜಿಣಗಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಕಾರಣಕ್ಕೂ ಮತ್ತಷ್ಟು ವಿಳಂಬವಾಗದಂತೆ ಕೆಲಸ ಮಾಡಲು ಸೂಚಿಸಿದ್ದು ಗಮನಾರ್ಹವಾಗಿದೆ.
ಅದು 14 ವರ್ಷಗಳ ಕನಸು ನನಸಾಗೋ ಸಮಯ, ಇನ್ನೇನು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ವಿಮಾನಗಳ ಹಾರಾಟ ನಡೆಯುತ್ತದೆ ಎಂದು ಗುಮ್ಮಟ ನಗರಿಯ ಜನರು ಕನಸು ಕಂಡಿದ್ದರು. ಆದರೆ ಜನರ ಕನಸುಗಳು ನನಸಾಗೋಕೆ ಇನ್ನೂ ಕೆಲ ಕಾಲ ಕಾಯಬೇಕಾದ ಅನಿವಾರ್ಯತೆ ಉಂಟಾಗಿದೆ. ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ವಿಳಂಬವಾಗಲಿದೆ. ಶತಾಯಗತಾಯವಾದರೂ ಸರಿ ಜನವರಿ ವರೆಗೂ ಎಲ್ಲರೂ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಲೋಹದ ಹಕ್ಕಿಗಳ ಹಾರಾಟ ಇನ್ನೂ ತಡವಾಗಲಿದ್ದು, ಈ ಕುರಿತ ವರದಿ ಇಲ್ಲಿದೆ.
ಬರೋಬ್ಬರಿ 14 ವರ್ಷವಾದರೂ ವನವಾಸ ಕೊನೆಗೊಳ್ಳುವ ಸೂಚನೆ ಸಿಕ್ಕಿಲ್ಲ. ವಿಜಯಪುರ (Vijayapur) ಜಿಲ್ಲೆಯ ವಿಮಾನ ನಿಲ್ದಾಣದ ವನವಾಸದ ಕಥೆಯಿದು. 2008 ರಲ್ಲೇ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ (Vijayapur Airport) ಭೂಮಿ ಪೂಜೆ ನೆರವೇರಿಸಲಾಗಿತ್ತು. 2008 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ವಿಜಯಪುರ ತಾಲೂಕಿನ ಬುರಣಾಪೂರ ಬಳಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಅಲಿಯಾಬಾದ, ಬುರಾಣಪುರ ಹಾಗೂ ಮದಭಾವಿ ಗ್ರಾಮಗಳಿಗೆ ಸೇರಿದ 379.08 ಎಕರೆ ಖಾಸಗಿ ಜಮೀನು ಮತ್ತು 347.33 ಎಕರೆ ಸರ್ಕಾರಿ ಜಮೀನು ಸೇರಿ ಒಟ್ಟು 727.01 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ, ಪ್ರವಾಸೋದ್ಯಮ, ಐಟಿ ಬಿಟಿ ಪಾರ್ಕ್ಗಳು, ರೇಸ್ಟೋರೆಂಟ್ ಮತ್ತು ಕೈಗಾರಿಕೆ ಘಟಕಗಳ ಸ್ಥಾಪಿಸಲು ಉದ್ದೇಶಿಸಲಾಗಿತ್ತು.
Also Read: Zucchini: ಭಾಲ್ಕಿ ತಾಲೂಕಿನ ಈ ರೈತ ವಿದೇಶಿ ಜುಕೀನಿ ತರಕಾರಿ ಬೆಳೆಸಿ ಸ್ಥಳೀಯವಾಗಿ ಮಾದರಿಯಾಗಿದ್ದಾರೆ! ಏನಿವರ ಸಾಧನೆ?
ಆದರೆ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭವಾಗಲೇ ಇಲ್ಲಾ. ಬಳಿಕ ಕಾಕತಾಳಿಯವೆಂಬಂತೆ ಇದೇ ವಿಮಾನ ನಿಲ್ದಾಣ ಕಾಮಗಾರಿಗೆ ಕಳೆದ 2021 ರ ಫೆಬ್ರುವರಿ 15 ರಂದು ನಿಲ್ದಾಣ ಕಾಮಗಾರಿಗೆ ಶಿವಮೊಗ್ಗದಿಂದ ವರ್ಚ್ಯೂವಲ್ ಮೂಲಕ ಅಂದು ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದ್ದರು. ಒಟ್ಟು 727 ಎಕರೆ ಮೊದಲ ಹಾಗೂ ಎರಡನೇ ಹಂತದಲ್ಲಿ 220 ಕೋಟಿ ರೂಪಾಯಿ ಇದಕ್ಕಾಗಿ ನಿಗದಿ ಮಾಡಲಾಗಿದೆ. ಕಾಮಗಾರಿ 2021 ರಿಂದಲೇ ನಡೆದಿದ್ದು 2023 ರ ಜನವರಿ ಅಥವಾ ಫೆಬ್ರವರಿಯಲ್ಲಿ ವಿಮಾನಯಾನ ಆರಂಭವಾಗುತ್ತದೆ ಎಂದು ಸಂಸದ ರಮೇಶ ಜಿಗಜಿಣಗಿ, ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದ್ದರು.
ಆದರೆ ಇದೀಗಾ ಮತ್ತೆ ವಿಮಾನ ಹಾರಾಟ ತಡವಾಗಲಿದೆ. ಹಾಗಾಗಿ ಮತ್ತೆ 125 ಕೋಟಿ ವೆಚ್ಚದಲ್ಲಿ ಇಲ್ಲಿ 320 ಏರ್ ಬಸ್, ಕಾರ್ಗೋ ವಿಮಾನಗಳ ಸೇವೆ ಸಿಗಬೇಕೆಂಬ ಕಾರಣದಿಂದ ಅದರ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಇನ್ನೂ ಕೆಲ ತಿಂಗಳಗಳ ಕಾಲ ವಿಮಾನ ಹಾರಾಟ ತಡವವಾಗಲಿದೆ. ಇದೇ ಕಾರಣಕ್ಕೆ ಇಂದು ಕಾಮಗಾರಿ ನಡೆಯೋ ಸ್ಥಳಕ್ಕೆ ಸಂಸದ ರಮೇಶ ಜಿಗಜಿಣಗಿ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ಶತಾಯಗತಾಯ ಮುಂದಿನ ಏಪ್ರಿಲ್ ವೇಳೆಗೆ ವಿಮಾನ ಹಾರಾಟ ಆಗಬೇಕೆಂದು ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಹಾಗೂ ಆಧಿಕಾರಿಗಳಿಗೆ ಒತ್ತಾಯ ಮಾಡಿದರು.
ಕಳೆದ 2021 ರಲ್ಲಿ ವಿಜಯಪುರ ತಾಲೂಕಿನ ಬುರಣಾಪೂರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿತ್ತು. ಕೇವಲ ಪ್ರಯಾಣಿಕರನ್ನು ಹೊತ್ತೊಯ್ಯುವ ವಿಮಾನಗಳ ಸೇವೆ ಮಾತ್ರ ಸಿಗುತ್ತದೆ ಎಂಬ ಕಾರಣದಿಂದ ಜಿಲ್ಲೆಯ ಜನರು ಇದಕ್ಕೆ ವಿರೋಧ ಮಾಡಿದ್ದರು. ಶಿವಮೊಗ್ಗದ ಮಾದರಿಯಲ್ಲಿ ಏರ್ ಬಸ್ ವಿಮಾನಗಳು, ಕಾರ್ಗೋ ವಿಮಾನಗಳ ಸೇವೆಯೂ ನಮಗೆ ಸಿಗಬೇಕೆಂದು ಒತ್ತಾಯ ಮಾಡಿದ್ದರು. ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯೋ ಪ್ರದೇಶದಲ್ಲಿ ಏರ್ ಬಸ್ ಹಾಗೂ ಕಾರ್ಗೋ ವಿಮಾನಗಳ ಸೇವೆ ಸಿಕ್ಕರೆ ಇಲ್ಲಿನ ತೋಟಗಾರಿಕಾ ಉತ್ಪನ್ನ ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಇತರೆ ರಾಜ್ಯ ಹಾಗೂ ದೇಶಗಳಿಗೆ ಕಳುಹಿಸಲು ಅನಕೂಲವಾಗುತ್ತದೆ ಎಂದು ಜಿಲ್ಲೆಯ ಜನರು ಒತ್ತಾಯ ಮಾಡಿದ್ದರು.
ಜನರ ಒತ್ತಾಯಕ್ಕೆ ಮಣಿದ ಸರ್ಕಾರ ಹೆಚ್ಚುವರಿ 125 ಕೋಟಿ ರೂಪಾಯಿ ನೀಡಿ ಇಲ್ಲಿ ಇತರೆ ವಿಮಾನಗಳ ಸೇವೆಯೂ ದೊರಕುವಂತೆ ಮಾಡಿದೆ. ಸದ್ಯ ಏರ್ ಬಸ್ ಹಾಗೂ ಕಾರ್ಗೋ ವಿಮಾನಗಳಿಗೆ ಅವಶ್ಯಕತೆಯಿರೋ ರನ್ ವೇ ಸೇರಿದಂತೆ ಇತರೆ ಕಾಮಗಾರಿ ನಡೆಯುತ್ತಿರೋ ಕಾಮಗಾರಿಯಿಂದ ಸಣ್ಣ ಪ್ರಮಾನದ ವಿಮಾನಗಳ ಸೇವೆ ಲಭಿಸಲು ವಿಳಂಬವಾಗಿದೆ. ಇಷ್ಟರ ಮಧ್ಯೆ ತ್ವರಿತವಾಗಿ ಕೆಲ ಕಾಮಗಾರಿಗಳನ್ನು ಮುಕ್ತಾಯ ಮಾಡಿ, ಆದಷ್ಟು ಬೇಗಾ ವಿಮಾನಯಾನ ಸೇವೆ ಆರಂಭಿಸಬೇಕೆಂದು ಜಿಲ್ಲೆಯ ಜನರು ಒತ್ತಾಯ ಮಾಡಿದ್ದಾರೆ.
ಇದೆಲ್ಲದರ ಹೊರತಾಗಿಯೂ 2023 ರ ಏಪ್ರಿಲ್-ಮೇ ನಲ್ಲಿ ವಿಧಾನಸಭಾ ಚುನಾವಣೆ ನಡೆಯುಲಿದ್ದು ಚುನಾವಣಾ ಬಿಸಿ ಮತ್ತಷ್ಟು ವಿಳಂಬಕ್ಕೆ ಕಾರಣವಾಗಬಾರದು. ಅದಕ್ಕಾಗಿ ಇಂದು ಎಂಪಿ ಜಿಗಜಿಣಗಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಕಾರಣಕ್ಕೂ ಮತ್ತಷ್ಟು ವಿಳಂಬವಾಗದಂತೆ ಕೆಲಸ ಮಾಡಲು ಸೂಚಿಸಿದ್ದು ಗಮನಾರ್ಹವಾಗಿದೆ. (ವರದಿ: ಅಶೋಕ ಯಡಳ್ಳಿ, ಟಿವಿ 9, ವಿಜಯಪುರ)
Published On - 5:22 pm, Fri, 9 December 22