ಭಾವಿಪತಿಯ ಎದುರೇ ಗೋಲಗುಮ್ಮಟದಿಂದ ಹಾರಿ ಯುವತಿ ಸಾವಿಗೆ ಶರಣು: ಮಾರ್ದನಿಸುತ್ತಿದೆ ‘ಬಲವಂತ ಮಾಡಬೇಡಿ’ ಎಂಬ ಆರ್ತನಾದ
Vijayapur Golgumbaz: ಡಿ. 21 ರಂದು ಸೌಂದರ್ಯಳ ಭೇಟಿಯಾಗಲು ಭಾವಿ ಪತಿ ವಿಜಯಪುರಕ್ಕೆ ಬಂದಿದ್ದ. ಯುವತಿಯ ಪೋಷಕರು... ಇಬ್ಬರೂ ಹೊರಗಡೆ ಸುತ್ತಾಡಿ ಬನ್ನಿ, ಗೋಲಗುಮ್ಮಟಕ್ಕೆ ಹೋಗಿ ಎಂದು ಹೇಳಿಕಳುಹಿಸಿದ್ದರಂತೆ.
ವಿಜಯಪುರ (Vijayapura) ನಗರದಲ್ಲಿರೋ ವಿಶ್ವವಿಖ್ಯಾತ ಗೋಲಗುಮ್ಮಟದ (Gol gumbaz) ಸ್ಮಾರಕದಲ್ಲಿ ಬುಧವಾರ ಇಳಿಸಂಜೆಯಲ್ಲಿ ಯುವತಿಯೋರ್ವಳು (girl) ಎಳನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಳು. ಇದೀಗ ಯುವತಿಯ ಹೆಸರು ವಿಳಾಸ ಹಾಗೂ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಬಯಲಾಗಿದೆ. ಗೋಲಗುಮ್ಮಟದ ಏಳನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ ವಿಜಯಪುರ ನಗರದ ರಾಣಿ ಬಗೀಚ್ ಏರಿಯಾದ 23 ವರ್ಷದ ಸೌಂದರ್ಯ ಕೃಷ್ಣಮೂರ್ತಿ ಬೆಂಗಳೂರು ಎಂದು ಗುರುತಿಸಲಾಗಿದೆ.
ಸೌಂದರ್ಯಳಿಗೆ ಒತ್ತಾಯ ಪೂರ್ವಕವಾಗಿ ಮದುವೆ (marriage) ಮಾಡಲು ಮನೆಯವರು ಮುಂದಾಗಿದ್ದೇ ಯುವತಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂಬ ಆಘಾತಕಾರಿ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಸೌಂದರ್ಯ ಪೋಷಕರು ಕಳೆದ ಮೂರು ತಿಂಗಳ ಹಿಂದೆ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ದಿನೇಶ ಎಂಬ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಇದಕ್ಕೆ ಸೌಂದರ್ಯ ಒಪ್ಪಿರಲಿಲ್ಲವಂತೆ. ಇದರ ಹೊರತಾಗಿಯೂ ದಿನೇಶ ಜೊತೆ ಸೌಂದರ್ಯ ಎಂಗೇಜ್ಮೆಂಟ್ ಸಹ ಮಾಡಿದ್ದರು.
ಇದನ್ನೂ ಓದಿ: ಗಂಗಾವತಿಯಲ್ಲಿ ದರ್ಗಾ ಅಭಿವೃದ್ಧಿಗೆ 6 ಕೋಟಿ ದೇಣಿಗೆ ಕೊಟ್ಟ ಜನಾರ್ದನ ರೆಡ್ಡಿ: ಕಾಂಗ್ರೆಸ್, ಬಿಜೆಪಿ ಪಾಳಯದಲ್ಲಿ ನಡುಕ
ಇಷ್ಟಾಗಿಯೂ ಸೌಂದರ್ಯ ಮದುವೆಗೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲವಂತೆ. ಡಿಸೆಂಬರ್ 21 ರಂದು ಸೌಂದರ್ಯಳ ಭೇಟಿಯಾಗಲು ಭಾವಿ ಪತಿ ದಿನೇಶ ವಿಜಯಪುರಕ್ಕೆ ಬಂದಿದ್ದ. ಯುವತಿಯ ಪೋಷಕರು… ಇಬ್ಬರೂ ಹೊರಗಡೆ ಸುತ್ತಾಡಿಕೊಂಡು ಬನ್ನಿ, ಗೋಲಗುಮ್ಮಟ ನೋಡಿಕೊಂಡು ಬನ್ನಿ ಎಂದು ಹೇಳಿಕಳುಹಿಸಿದ್ದಾರೆ. ಕಾರಣ ದಿನೇಶ ಹಾಗೂ ಸೌಂದರ್ಯ ಗೋಲಗುಮ್ಮಟ ವೀಕ್ಷಣೆಗೆ ಆಗಮಿಸಿದ್ದರು.
ಇದನ್ನೂ ಓದಿ:
ಪ್ರಿಯತಮೆಯ ಮನೆ ಬಳಿ ವಿಡಿಯೋ ಮಾಡುತ್ತಾ, ಮರಕ್ಕೆ ನೇಣು ಬಿಗಿದುಕೊಂಡ ಪ್ರೇಮಿ: ಆತ್ಮಹತ್ಯೆಗೆ ಕಾರಣವೇನು?
ಏಳನೇ ಮಹಡಿಯಲ್ಲಿ ಪ್ರತಿಧ್ವನಿಸುವ ಗ್ಯಾಲರಿಗೆ ಬಂದಾಗ ಸೌಂದರ್ಯ ಒಮ್ಮೆಲೆ ಕೆಳಗಡೆ ಹಾರಿದ್ಧಾಳೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸೌಂದರ್ಯ ಮೃತಪಟ್ಟಿದ್ದಳು. ಆಕೆಯ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಗೋಲಗುಮ್ಮಟ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸೀತಾರಾಮ ಮಠಪತಿ ಹಾಗೂ ಸಿಬ್ಬಂದಿ ನಿನ್ನೆ ಗುರುವಾರ ಘಟನೆ ನಡೆದ ಗೋಲಗುಮ್ಮಟ ಸ್ಮಾರಕದೊಳಕ್ಕೆ ಆಗಮಿಸಿ ಮಹಜರು ಮಾಡಿದ್ಧಾರೆ.
ಪ್ರಾಥಮಿಕ ಹಂತದ ತನಿಖೆಯಲ್ಲಿ ಮೃತ ಸೌಂದರ್ಯಳಿಗೆ ಒತ್ತಾಯದಿಂದ ಮದುವೆ ಮಾಡಿಸಲು ಪೋಷಕರು ಮುಂದಾಗಿದ್ದಾರೆ. ಈ ಕಾರಣದಿಂದ ಸೌಂದರ್ಯ ಭಾವಿಪತಿಯ ಎದುರಲ್ಲೇ ಸಾವಿಗೆ ಶರಣಾಗಿದ್ದಾಳೆ. ಘಟನೆ ಕುರಿತು ತನಿಖೆ ಮುಂದುವರೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಯುವತಿ ಶವವನ್ನು ಕುಟುಂಬಸ್ಥರಿಗೆ ನೀಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಗೋಲಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಅಶೋಕ ಯಡಳ್ಳಿ, ಟಿವಿ 9, ವಿಜಯಪುರ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:20 am, Fri, 23 December 22