ವಿಜಯಪುರದ ತಿಕೋಟಾ ತಾಲೂಕಿನಲ್ಲಿ ಭೂಕಂಪನ; ರಿಕ್ಟರ್ ಮಾಪಕದಲ್ಲಿ 2.5 ರಷ್ಟು ತೀವ್ರತೆ ದಾಖಲು
ನಿನ್ನೆಯಷ್ಟೇ ವಿಜಯಪುರದ ಸಿಂದಗಿ ತಾಲೂಕಿನಲ್ಲಿ ಭೂಕಂಪನದ ಅನುಭವವಾಗಿತ್ತು. ಆನಂತರ ಭೂಕಂಪನ ರಿಕ್ಟರ್ ಮಾಪಕದಲ್ಲಿ 2.5ರಷ್ಟು ತೀವ್ರತೆ ದಾಖಲಿಸಿತ್ತು.
ವಿಜಯಪುರ: ಇಂದು ಶನಿವಾರ (ಅಕ್ಟೋಬರ್ 2) ಬೆಳಗ್ಗೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಿಜ್ಜರಗಿ, ಬಾಬಾನಗರ, ಕಳ್ಳಕವಟಗಿ, ಸೋಮದೇವರಹಟ್ಟಿ, ಘೊಣಸಗಿ, ಮಲಕನದೇವರಹಟ್ಟಿ, ಹುಬನೂರ, ಸಿದ್ದಾಪುರ ಕೆ, ಟಕ್ಕಳಕಿ ಭಾಗದಲ್ಲಿ 8.30 ರಿಂದ 8.31 ನಿಮಿಷಕ್ಕೆ ಭೂಮಿ ಕಂಪನವಾಗಿದೆ. ನಿನ್ನೆಯಷ್ಟೇ ವಿಜಯಪುರದ ಸಿಂದಗಿ ತಾಲೂಕಿನಲ್ಲಿ ಭೂಕಂಪನದ ಅನುಭವವಾಗಿತ್ತು. ಆನಂತರ ಭೂಕಂಪನ ರಿಕ್ಟರ್ ಮಾಪಕದಲ್ಲಿ 2.5ರಷ್ಟು ತೀವ್ರತೆ ದಾಖಲಿಸಿತ್ತು.
ಇಂದು ಬೆಳಗ್ಗೆ 8.31ಕ್ಕೆ ಲಘು ಭೂಕಂಪನವೂ ಸಹ ರಿಕ್ಟರ್ ಮಾಪಕದಲ್ಲಿ 2.0 ತೀವ್ರತೆಯನ್ನು ದಾಖಲಿಸಿದೆ. ಈಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಿಂದ ಖಚಿತ ಮಾಹಿತಿ ನೀಡಿದೆ. 10 ಕಿಮೀ ಭೂಮಿಯಾಳದಲ್ಲಿ ಕಂಪನ ದಾಖಲಾಗಿದೆ. ನಿನ್ನೆ ಬಸವನಬಾಗೇವಾಡಿ ತಾಲೂಕಿನ ಮಸೂತಿಯಲ್ಲಿ ಭೂಕಂಪನ ಕೇಂದ್ರ ಬಿಂದುವಾಗಿತ್ತು.
ಸಿಂದಗಿ ಪಟ್ಟಣದಲ್ಲಿ ಭೂಕಂಪನವಾದದ್ದು ನಿಜ; ರಿಕ್ಟರ್ ಮಾಪಕದಲ್ಲಿ 2.5ರಷ್ಟು ತೀವ್ರತೆ ದಾಖಲು ಸಿಂದಗಿ ಪಟ್ಟಣದಲ್ಲಿ ತಡರಾತ್ರಿಯ ಭೂಕಂಪನದ ಅನುಭವವನ್ನು ಭೂಕಂಪನದವೆಂದು ವಿಜಯಪುರ ಜಿಲ್ಲಾಡಳಿತ ದೃಢಪಡಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 2.5ರಷ್ಟು ದಾಖಲಾಗಿದೆ. ಮಸೂತಿಯಲ್ಲಿ ಭೂಕಂಪನದ ಕೇಂದ್ರ ಬಿಂದುವಿದ್ದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಈಕುರಿತು ಅಧಿಕೃತ ಮಾಹಿತಿ ನೀಡಿದೆ. ಆದರೆ ಅದೃಷ್ಟವಶಾತ್ ಭೂಕಂಪನದಿಂದ ಯಾವುದೇ ಹಾನಿ ಆಗಿಲ್ಲ ಎಂದು ಸಹ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ರಾತ್ರಿ 3-4 ಬಾರಿ ಭೂಮಿಯಿಂದ ಭಾರಿ ಶಬ್ದ ಕೇಳಿಬಂದಿದೆ. ಬಂದಾಳ ರಸ್ತೆ, ಜ್ಯೋತಿ ನಗರ, ಶಾಂತವೀರ ನಗರ ಸೇರಿ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನ ಆತಂಕಗೊಂಡಿದ್ದಾರೆ.ಸಿಂದಗಿ ಪಟ್ಟಣದಲ್ಲಿ ಭೂಮಿ ಕಂಪಿಸಿದ ಅನುಭವ ಆಗುತ್ತಿದ್ದಂತೆ 3 -4 ಬಾರಿ ನೆಲದಿಂದ ಭಾರೀ ಪ್ರಮಾಣದ ಶಬ್ದ ಕೇಳಿ ಬಂದಿದೆ. ಮಧ್ಯರಾತ್ರಿ ಹಾಗೂ ನಸುಕಿನ ಜಾವ 4.30 ಸುಮಾರಿನಲ್ಲಿ ಘಟನೆ ನಡೆದಿದೆ. ಭೂಮಿ ನಡುಗಿದ ಅನುಭವದಿಂದ ಭಯಗೊಂಡ ಜನತೆ, ಹೊರಬಂದಿದ್ದಾರೆ.
ಕಳೆದ ಸೆಪ್ಟೆಂಬರ್ 4 ರಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ 3.9 ತೀವ್ರತೆಯಲ್ಲಿ ಭೂಕಂಪನ ಉಂಟಾಗಿತ್ತು. ಆಗ ಮಹಾರಾಷ್ಟ್ರದ ಕೊಲ್ಲಾಪುರ ಭೂಕಂಪನದ ಕೇಂದ್ರವಾಗಿತ್ತು. ಈಗ ಸಿಂದಗಿ ಪಟ್ಟಣದಲ್ಲಿಯೂ ಭೂಕಂಪನವಾ? ಎಂದು ಜನ ಭಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಲು ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ: Vijayanagara District: ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಉದ್ಘಾಟನೆ
Vijayanagara: ವಿಜಯನಗರ ನೂತನ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭ- ಬಸವರಾಜ ಬೊಮ್ಮಾಯಿ