ಗೃಹಲಕ್ಷ್ಮಿ ಯೋಜನೆ ಹಣದಿಂದ ದೇವಿಗೆ ಬೆಳ್ಳಿ ಕಿರೀಟ ಮಾಡಿಸಿದ ವಿಜಯಪುರದ ಮಹಿಳೆ..!

| Updated By: ರಮೇಶ್ ಬಿ. ಜವಳಗೇರಾ

Updated on: Oct 11, 2024 | 6:02 PM

ಯಾರೇನೇ ಹೇಳಲಿ, ಸಿದ್ದರಾಮಯ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಹಣವನ್ನು ಕೆಲ ಗೃಹಿಣಿಯರು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇಂದು (ಅ,11) ಆಯುಧ ಪೂಜೆ ದಿನದಂದು ಬೆಳಗಾವಿ ಜಿಲ್ಲೆಯ ಮಹಿಳೆಯೊಬ್ಬರು ಕೂಡಿಟ್ಟಿದ್ದ ಗೃಹಲಕ್ಷ್ಮಿ ಹಣದಿಂದಲೇ ತನ್ನ ಮಗನಿಗೆ ಬೈಕ್​ ಕೊಡಿಸಿದ್ದಾರೆ. ಈಗ ವಿಜಯಪುರದಲ್ಲಿ ಯಜಮಾನಿ ನಾಡದೇವಿಗೆ ಕಿರೀಟ ಮಾಡಿಸಿ ನೀಡಿದ್ದಾರೆ.

1 / 7
 ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಬೆಳಗಾವಿ ಜಿಲ್ಲೆಯ ಅಜ್ಜಿಯೊಬ್ಬರು ಮುತ್ತೈದೆಯರಿಗೆ ಉಡಿ ತುಂಬಿ, ಹೋಳಿಗೆ ಊಟ ಹಾಕಿಸಿದರು. ಇಂದು ಅದೇ ಬೆಳಗಾವಿ ಜಿಲ್ಲೆಯ ಮತ್ತೋರ್ವ ಮಹಿಳೆ ಕೂಡಿಟ್ಟಿದ್ದ ಗೃಹಲಕ್ಷ್ಮಿ ಹಣದಿಂದ ಪುತ್ರನಿಗೆ ಹೊಸ ಬೈಕ್​ ಕೊಡಿಸಿದ್ದಾರೆ. ಈಗ ವಿಜಯಪುರ ಜಿಲ್ಲೆಯ ಯಜಮಾನಿಯೊಬ್ಬರು ಕೂಡಿಟ್ಟಿದ್ದ ಇದೇ ಗೃಹಲಕ್ಷ್ಮಿ ಹಣದಿಂದಲೇ ನಾಡದೇವಿಗೆ ಬೆಳ್ಳಿ ಕಿರೀಟ ಮಾಡಿಸಿದ್ದಾರೆ

2 / 7
ಕಳೆದ ಒಂದೂವರೆ ವರ್ಷದಿಂದ ಬಂದ ಭಾಗ್ಯಲಕ್ಷ್ಕೀ ಯೋಜನೆ ಹಣ ಕೂಡಿಟ್ಟಿದ್ದ ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಹೂವಿನಹಳ್ಳಿಯ ಮಹಿಳೆ ಭಾಗಮ್ಮ, ದೇವಿಗೆ 250 ಗ್ರಾಂ ತೂಕದ ಬೆಳ್ಳಿ ಕಿರೀಟ ನೀಡಿದ್ದಾರೆ.

3 / 7
ಕಳೆದ ಒಂದೂವರೆ ವರ್ಷದಿಂದ ಬಂದ ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟ 250 ಗ್ರಾಮ ತೂಕದ ಬೆಳ್ಳಿ ಕಿರೀಟ ಮಾಡಿಸಿದ್ದ ಭಾಗಮ್ಮ ಬಿರಾದಾರ, ಇಂದು(ಅಕ್ಟೋಬರ್ 11) ದಸರಾ ಆಯುಧ ಪೂಜೆ ದಿನದಂದು ನಾಡದೇವಿಗೆ ಬೆಳ್ಳಿ ಕಿರೀಟ ಅರ್ಪಣೆ ಮಾಡಿದರು

4 / 7
ದೇವಿಗೆ ಬೆಳ್ಳಿ ಕಿರೀಟ ಅರ್ಪಣೆ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭಾಗಮ್ಮ, ಸಿಎಂ ಸಿದ್ದರಾಮಯ್ಯ ನೇತೃತ್ಬದ ಕಾಂಗ್ರೆಸ್ ಸರ್ಕಾರದಿಂದ ಸಾಕಷ್ಟು ಅನುಕೂಲವಾಗಿದೆ ಎಂದಿದ್ದಾರೆ.

5 / 7
250 ಗ್ರಾಮ ತೂಕದ ಬೆಳ್ಳಿ ಕಿರೀಟ ಮಾಡಿಸಿದ್ದ ಭಾಗಮ್ಮ ಬಿರಾದಾರ, ಇಂದು(ಅಕ್ಟೋಬರ್ 11) ದಸರಾ ಆಯುಧ ಪೂಜೆ ದಿನದಂದು ನಾಡದೇವಿಗೆ ಬೆಳ್ಳಿ ಕಿರೀಟ ಅರ್ಪಣೆ ಮಾಡಿ ಆಶೀರ್ವಾದ ಪಡೆದರು.

6 / 7
ಇನ್ನು ಭಾಗಮ್ಮ ಬಿರಾದಾರ ಅವರು ಈ ಕಾರ್ಯಕ್ಕೆ ಸ್ಥಳೀಯ‌ ಮುಖಂಡರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಅಲ್ಲದೇ ಸಿಂದಗಿ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಭಾಗಮ್ಮ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.

7 / 7
 ಗೃಹ ಲಕ್ಷ್ಮೀ ಯೊಜನೆಯ ಹಣದಿಂದ ಅದೆಷ್ಟೋ ಕುಟುಂಬ ನಿರ್ವಹಣೆಗೆ ಸಹಾಯಕವಾಗಿದೆ. ಸಿಎಂ ಸಿದ್ದರಾಮಯ್ಯನವರಿಗೆ ನಾಡದೇವಿ ಆಶಿರ್ವಾದ ಇರಲಿ. ಸಿದ್ದರಾಮಯ್ಯ ಸರ್ಕಾರದ ಸೇವೆ ಹಿಗೇ ಮುಂದುವರೆಯಲಿ ಎಂದು ಅಭಿಲಾಷೆ ವ್ಯಕ್ತಪಡಿಸಿದರು.