ವಕ್ಫ್ ಹಿಂಸೆಗೆ ಇನ್ನೆಷ್ಟು ಬಲಿ ಬೇಕು ಸಿದ್ದರಾಮಯ್ಯನವರೇ? ಪ್ರಲ್ಹಾದ್​ ಜೋಶಿ

ಕರ್ನಾಟಕದಲ್ಲಿ ವಕ್ಫ್ ಭೂಮಿ ವಿವಾದ ಸರ್ಕಾರ ಮತ್ತು ರೈತರ ನಡುವೆ ತೀವ್ರ ಘರ್ಷಣೆಕ್ಕೆ ಕಾರಣವಾಗಿದೆ. ವಕ್ಫ್ ಮಂಡಳಿಗೆ ಬೇಸತ್ತ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದಾಗಿ ರಾಜಕೀಯ ಚರ್ಚೆಗಳು ತೀವ್ರಗೊಂಡಿದ್ದು, ಸರ್ಕಾರದ ವಿರುದ್ಧ ಪ್ರಲ್ಹಾದ್​ ಜೋಶಿ ಕಿಡಿಕಾರಿದ್ದಾರೆ.

ವಕ್ಫ್ ಹಿಂಸೆಗೆ ಇನ್ನೆಷ್ಟು ಬಲಿ ಬೇಕು ಸಿದ್ದರಾಮಯ್ಯನವರೇ? ಪ್ರಲ್ಹಾದ್​ ಜೋಶಿ
ವಕ್ಫ್ ಹಿಂಸೆಗೆ ಇನ್ನೆಷ್ಟು ಬಲಿ ಬೇಕು ಸಿದ್ದರಾಮಯ್ಯನವರೇ? ಪ್ರಲ್ಹಾದ್​ ಜೋಶಿ
Edited By:

Updated on: Nov 09, 2024 | 3:41 PM

ಹಾವೇರಿ, ನವೆಂಬರ್​ 09: ಕಳೆದೊಂದು ತಿಂಗಳಿಂದ ಕರ್ನಾಟಕದಲ್ಲಿ ವಕ್ಫ್​ ಆಸ್ತಿ ವಿಚಾರವಾಗಿ ಸರ್ಕಾರ ಮತ್ತು ರೈತರ ಮಧ್ಯೆ ಸಮರವೇ ನಡೆಯುತ್ತಿದೆ. ಸಾಕಷ್ಟು ಜನರು ಇದರಿಂದ ಆತಂಕಗೊಂಡಿದ್ದಾರೆ. ವಕ್ಫ್ ಮಂಡಳಿಯ ಭೂಕಳ್ಳತನದ ಮಾಫಿಯಾಗೆ ಬೇಸತ್ತು ಈ ಹಿಂದೆ ಹಾನಗಲ್ ತಾಲೂಕಿನ ಹರನಗಿರಿಯಲ್ಲಿ ಓರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ವಕ್ಫ್ ಹಿಂಸೆಗೆ ಇನ್ನೆಷ್ಟು ಬಲಿ ಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 1964 ರಿಂದ ತಮ್ಮದೇ ಹೆಸರಿನಲ್ಲಿದ್ದ ಜಮೀನನ್ನು 2015 ರಲ್ಲಿ ಕೆಲ ಸಮಾಜಘಾತುಕರು ವಕ್ಫ್​ ನಿಯಮದ ಪ್ರಕಾರ ಸಂಪೂರ್ಣ ಜಮೀನು ತಮ್ಮದಾಗಿಸಿಕೊಂಡು ಬೆಳೆದು ನಿಂತಿದ್ದ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡಿ ಬಡ ರೈತನ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸುಳ್ಳು ಮಾಹಿತಿ ಹರಡಿದ ಆರೋಪ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯಲ್ಲಿ ಎಫ್​ಐಆರ್

ಇದನ್ನು ಬಹಿರಂಗಪಡಿಸಿದ ಮಾಧ್ಯಮದ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರ ಕೇಸ್ ದಾಖಲಿಸುತ್ತದೆ ಮತ್ತು ಇದರ ಕುರಿತು ಟ್ವೀಟ್ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಅವರ ಮೇಲೂ ಎಫ್​ಐಆರ್​ ದಾಖಲಾಗಿದೆ. ಈ ಘಟನೆಯ ಸಂಪೂರ್ಣ ಮಾಹಿತಿ ಪಡೆಯಲು ಇಂದು ಸಂಸದರಾದ ಗೋವಿಂದ ಕಾರಜೋಳ ಅವರೊಂದಿಗೆ ಬಡರೈತನ ಮನೆಗೆ ಭೇಟಿ ನೀಡಿ ಅವರಿಂದಲೇ ಮಾಹಿತಿ ಪಡೆದಿದ್ದಾರೆ.

ಪ್ರಲ್ಹಾದ್​ ಜೋಶಿ ಟ್ವೀಟ್ 

ಮೃತ ಯುವಕನ ತಂದೆ ತಾಯಿ ಮತ್ತು ಮನೆಯವರಿಗೆ ಸಾಂತ್ವಾನ ಹೇಳಿ, ಈ ಘಟನೆಗೆ ನ್ಯಾಯಾಲಯದಲ್ಲಿ ಇರುವ ಅವಕಾಶವನ್ನು ಪರಿಶೀಲಿಸಿ ಆ ಮೂಲಕ ನ್ಯಾಯ ಒದಗಿಸಲು ಭಾರತೀಯ ಜನತಾ ಪಕ್ಷದ ವತಿಯಿಂದ ಜವಾಬ್ದಾರಿ ಹೊತ್ತಿದ್ದೇನೆ. ಇಲ್ಲಿ ಮತ್ತೋರ್ವ ಅಲ್ಪಸಂಖ್ಯಾತ ಬಡ ರೈತನ ಜಮೀನನ್ನು ಕೂಡ ವಕ್ಫ್ ಕಬಳಿಸಿದೆ ಎಂಬುದು ಗೊತ್ತಾಗಿದೆ.

ನಾವು ರೈತರ ಪರವಾಗಿ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ. ವಕ್ಫ್ ಹೆಸರಿನಲ್ಲಿ ಬಡವರ ಜಮೀನು ಕಸಿದುಕೊಳ್ಳುವ ಯಾವುದೇ ಕ್ರಮವನ್ನು ನಾವು ಒಪ್ಪುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ವಕ್ಫ್ ಹೆಸರಿನಲ್ಲಿ ಬಡವರಿಗೆ ಮತ್ತು ಹಿಂದೂಗಳಿಗೆ ನೋಟೀಸ್ ನೀಡದಂತೆ ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತ ಆದೇಶ ಹೊರಡಿಸುವಂತೆ ಆಗ್ರಹಿಸಿದ್ದಾರೆ.

ತನಿಖೆ ಮಾಡಲಿ ನಾವು ಎದುರಿಸುತ್ತೇವೆ ಎಂದ ಜೋಶಿ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರನಗಿರಿ ಗ್ರಾಮದಲ್ಲಿ ಮಾಜಿ ಸಿಎಂ ಬಿಎಸ್​ವೈ ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸು ವಿಚಾರವಾಗಿ ಮಾತನಾಡಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿದೆ. ನ್ಯಾಯಾಧೀಶರನ್ನು ಹೇಗೆ ಸೆಲೆಕ್ಟ್ ಮಾಡಿದ್ದಾರೋ ಏನೋ ಗೊತ್ತಿಲ್ಲ. ಹಾಗಾದರೆ ಒಂದೂವರೆ ವರ್ಷ ಯಾಕೆ ಸಮಯ ತೆಗೆದುಕೊಂಡಿದ್ದಾರೆ. ತನಿಖೆ ಮಾಡಲಿ ನಾವು ಎದುರಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಡಿಜೆ ಹಳ್ಳಿ, ಕೆಜೆ ಹಳ್ಳಿ ಕೇಸ್ ಹಿಂಪಡೆಯಲು ಸರ್ಕಾರ ಸಿದ್ಧತೆ ನಡೆಸಿದೆ: ಪ್ರಲ್ಹಾದ್​ ಜೋಶಿ ಆರೋಪ

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಕಷ್ಟು ಹಗರಣ ನಡೆದಿವೆ. ಕಾರ್ಮಿಕ ಇಲಾಖೆ, ಅಬಕಾರಿ ಇಲಾಖೆಯಲ್ಲಿ ಹಗರಣಗಳು ನಡೆದಿವೆ. ತಮ್ಮ ಮೇಲೆ ಆರೋಪ ಬಂದ ಬಳಿಕ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರು ದ್ವೇಷದ ರಾಜಕಾರಣ ಶುರು ಮಾಡಿದ್ದಾರೆ. ದ್ವೇಷದ ರಾಜಕಾರಣಕ್ಕೆ ನಾವು ಬಗ್ಗುವುದಿಲ್ಲ, ನಾವು ತನಿಖೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.