ಗೌರವ ಇಲ್ಲದ ಕಡೆ ನಾವು ಏಕೆ ಇರಬೇಕು: ಪರೋಕ್ಷವಾಗಿ ರಾಜೀನಾಮೆ ಎಂದ್ರಾ ವಿನಯ್ ಕುಲಕರ್ಣಿ?
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ, ನಾವೆಲ್ಲರೂ ಸೇರಿದರೆ ಅವರು ಸಚಿವರು. ಅವರೇನು ಮೇಲಿಂದ ಬಂದಿಲ್ಲ. ಸಚಿವರು ಮೊದಲು ಶಾಸಕರೇ ಅಲ್ವಾ? ಅದನ್ನು ಅರ್ಥ ಮಾಡಿಕೊಳ್ಳಿ. ಗೌರವ ಇಲ್ಲದ ಕಡೆ ನಾವು ಯಾಕೆ ಇರಬೇಕು ಎಂದು ಭೈರತಿ ಸುರೇಶ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜುಲೈ 01: ಸಚಿವರಾದ ಬಳಿಕ ಎಲ್ಲದರಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಚಿವ ಭೈರತಿ ಸುರೇಶ್ (Byrathi Suresh) ವಿರುದ್ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ (Vinay Kulkarni) ಆರೋಪ ಮಾಡಿದ್ದಾರೆ. ಈ ಹಿಂದೆ ದೆಹಲಿ ಹೋಗಿ ನಾಯಕರ ಭೇಟಿ ಮಾಡಿ ಭೈರತಿ ಸುರೇಶ್ ವಿರುದ್ದ ದೂರು ಸಲ್ಲಿಸಿದ್ದರು. ಇದೀಗ ಮತ್ತೊಮ್ಮೆ ಅವರ ವಿರುದ್ಧ ಬಹಿರಂಗವಾಗಿ ವಿನಯ್ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೌರವ ಇಲ್ಲದ ಕಡೆ ನಾವು ಏಕೆ ಇರಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜೀನಾಮೆ ಸುಳಿವು ನೀಡಿದ್ರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಗೌರವ ಇಲ್ಲದ ಕಡೆ ನಾವು ಯಾಕೆ ಇರಬೇಕು ಎಂದ ವಿನಯ್ ಕುಲಕರ್ಣಿ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಸೇರಿದರೆ ಅವರು ಸಚಿವರು. ಅವರೇನು ಮೇಲಿಂದ ಬಂದಿಲ್ಲ. ಸಚಿವರು ಮೊದಲು ಶಾಸಕರೇ ಅಲ್ವಾ? ಅದನ್ನು ಅರ್ಥ ಮಾಡಿಕೊಳ್ಳಿ ಅವರಿಗೂ ನೋಟಿಸ್ ಕೊಡಲೇಬೇಕಾಗುತ್ತದೆ. ಪ್ರಸಂಗ ಬಂದರೆ ದಾಖಲೆ ಕೊಡುತ್ತೇನೆ. ನಾನು ಭಯಪಡುವುದಿಲ್ಲ ಬಹಿರಂಗವಾಗಿಯೇ ಹೇಳುತ್ತೇನೆ. ಗೌರವ ಇಲ್ಲದ ಕಡೆ ನಾವು ಯಾಕೆ ಇರಬೇಕು ಎಂದು ಭೈರತಿ ಸುರೇಶ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: 4 ವರ್ಷದ ಬಳಿಕ ಧಾರವಾಡಕ್ಕೆ ವಿನಯ್ ಕುಲಕರ್ಣಿ; ಏನಂದ್ರು ಗೊತ್ತಾ?
ನಾನು ದೆಹಲಿಗೆ ಹೋಗಿದ್ದು ನಿಜ. ಪಕ್ಷದ ಮುಖಂಡರಿಗೆ ಏನು ಹೇಳಬೇಕು ಅದನ್ನು ಹೇಳಿದ್ದೇನೆ. ಎಲ್ಲಾ ಕಂಪನಿಗಳ ಬಗ್ಗೆ ತನಿಖೆ ಆಗಬೇಕು. ಯಾವ ಕಂಪನಿಗಳು ಗೋಲ್ ಮಾಲ್ ಮಾಡಿವೆ ಅಂತಹ ಕಂಪನಿಗಳನ್ನು ಬ್ಲಾಕ್ ಲಿಸ್ಟ್ಗೆ ಹಾಕಲಿ. ತನಿಖೆಗೆ ಎಂದು ನಾನು ಪತ್ರ ಕೊಟ್ಟು ಎರಡುವರೆ ತಿಂಗಳು ಆಗಿದೆ. 10-15 ಕಂಪನಿಗಳು ಇದ್ದಾವೆ ಎಂದಿದ್ದಾರೆ.
ಮಂತ್ರಿಗಳಿಗೆ ಬೇಡವಾದ ಕಂಪನಿಗಳನ್ನ ಬ್ಲಾಕ್ ಲಿಸ್ಟ್ ಹಾಕುವುದು, ಮಂತ್ರಿಗಳ ಆಪ್ತರ ಕಂಪನಿಗಳು ಹೋಗುವುದು (ಟೆಂಡರ್ ಆಗುವುದು ಬೇಡ) ಅದು ಸೂಕ್ತವಲ್ಲ, ಸಮಯ ಬಂದಾಗ ಮಾತಾಡುತ್ತೇನೆ. ಸಿಎಂ ಅವರ ಗಮನಕ್ಕೆ ಹಲವಾರು ಭಾರಿ ತಂದಿದ್ದೇನೆ. ಇಂತಹದನ್ನು ನಾವು ಸಹಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ; ಸಂತ್ರಸ್ತೆಯರ ಬಗ್ಗೆ ಯಾರೂ ಮಾತಾಡುತ್ತಿಲ್ಲ, ಅವರ ಭವಿಷ್ಯವೇನು? ವಿನಯ್ ಕುಲಕರ್ಣಿ
ಸಿಎಂ, ಡಿಸಿಎಂ ಬದಲಾವಣೆ ವಿಚಾರ ಶಾಸಕರಿಗೆ ನೋಟಿಸ್ ನೀಡುವ ವಿಚಾರವಾಗಿ ಮಾತನಾಡಿದ ಅವರು, ಪದಾಧಿಕಾರಿಗಳು, ಶಾಸಕರಾಗಲಿ ಪಕ್ಷದ ವಿರುದ್ಧ ಕೆಲಸ ಮಾಡಿದವರಿಗೆ ನೋಟಿಸ್ ಕೊಡಬೇಕು. ಶಿಸ್ತು ಕ್ರಮ ಜರುಗಿಸಲು ಇಂದಿನ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:30 pm, Mon, 1 July 24