ಹೆದ್ದಾರಿಯಲ್ಲಿ ಕಾರು ಚಲಾಯಿಸುತ್ತಿದ್ದ ಮಹಿಳೆ ಸಜೀವ ದಹನ

|

Updated on: Dec 05, 2019 | 5:07 PM

ಬೀದರ್: ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಕಾರಿನಲ್ಲಿದ್ದ ಮಹಿಳೆ ಸಜೀವ ದಹನವಾಗಿರುವ ಘಟನೆ ಚಿಟಗುಪ್ಪಾ ತಾಲೂಕಿನ ನಿರ್ಣಾ ಕ್ರಾಸ್ ಬಳಿ ನಡೆದಿದೆ. ಮಹಾರಾಷ್ಟ್ರದಿಂದ ಹೈದರಾಬಾದ್​ಗೆ ಹೋಗುವಾಗ NH9 ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದರು. ಉದಯ ಕುಮಾರ್(47), ಕಲ್ಯಾಣಿ (39), ಜೀವನ್ ಕುಮಾರ್(10), ಗಗನ್ ಕುಮಾರ್(7) ಪ್ರಯಾಣ ಮಾಡುತ್ತಿದ್ದರು. ಆಕಸ್ಮಿಕ ಬೆಂಕಿಯಿಂದ ಕಾರು ಚಲಾಯಿಸುತ್ತಿದ್ದ ಕಲ್ಯಾಣಿ ಸಜೀವ ದಹನವಾಗಿದ್ದಾರೆ. ಈ ಕುರಿತು ಮನ್ನಾಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆದ್ದಾರಿಯಲ್ಲಿ ಕಾರು ಚಲಾಯಿಸುತ್ತಿದ್ದ ಮಹಿಳೆ ಸಜೀವ ದಹನ
Follow us on

ಬೀದರ್: ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಕಾರಿನಲ್ಲಿದ್ದ ಮಹಿಳೆ ಸಜೀವ ದಹನವಾಗಿರುವ ಘಟನೆ ಚಿಟಗುಪ್ಪಾ ತಾಲೂಕಿನ ನಿರ್ಣಾ ಕ್ರಾಸ್ ಬಳಿ ನಡೆದಿದೆ. ಮಹಾರಾಷ್ಟ್ರದಿಂದ ಹೈದರಾಬಾದ್​ಗೆ ಹೋಗುವಾಗ NH9 ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದರು. ಉದಯ ಕುಮಾರ್(47), ಕಲ್ಯಾಣಿ (39), ಜೀವನ್ ಕುಮಾರ್(10), ಗಗನ್ ಕುಮಾರ್(7) ಪ್ರಯಾಣ ಮಾಡುತ್ತಿದ್ದರು. ಆಕಸ್ಮಿಕ ಬೆಂಕಿಯಿಂದ ಕಾರು ಚಲಾಯಿಸುತ್ತಿದ್ದ ಕಲ್ಯಾಣಿ ಸಜೀವ ದಹನವಾಗಿದ್ದಾರೆ. ಈ ಕುರಿತು ಮನ್ನಾಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 9:50 am, Thu, 5 December 19