ನಾಮಪತ್ರ ವಾಪಸ್ ಪಡೆಯೋಲ್ಲ, ಯಾಕೆ ಗೊತ್ತಾ? ಶರತ್ ಬಚ್ಚೇಗೌಡ ಹೇಳಿದ್ದೇನು?
ಹೊಸಕೋಟೆ: ನಾಮಪತ್ರ ವಾಪಸ್ ಪಡೆಯದಿದ್ರೆ ಶರತ್ ಬಚ್ಚೇಗೌಡರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿರುವುದಕ್ಕೆ ಹೊಸಕೋಟೆ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಪ್ರತಿಕ್ರಿಯಿಸಿದ್ದು ತಾನು ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ ಎಂದು ಘೋಷಿಸಿದ್ದಾರೆ. ಯಡಿಯೂರಪ್ಪ ಬ್ಲೂ ಐಯ್ಡ್ ಬಾಯ್ ನಾನು!: ಯಡಿಯೂರಪ್ಪ ಅವರ ಮೇಲೆ ನಮಗೆ ಅಪಾರವಾದ ಗೌರವವಿದೆ. ಅವರು ನಮ್ಮ ಮೆಲೆ ಅಪಾರವಾದ ನಂಬಿಕೆಯಿಟ್ಟುಕೊಂಡು ಮನೆಗೆ ಹೋದಾಗ ಟೀ ಕಾಫಿ ಸ್ವೀಟ್ ಕೋಡದೆ ಕಳಿಸುತ್ತಿರಲಿಲ್ಲ. ನಾವು ಅವರ ಮನಸಲ್ಲಿ ಬ್ಲೂ ಐ […]
ಹೊಸಕೋಟೆ: ನಾಮಪತ್ರ ವಾಪಸ್ ಪಡೆಯದಿದ್ರೆ ಶರತ್ ಬಚ್ಚೇಗೌಡರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿರುವುದಕ್ಕೆ ಹೊಸಕೋಟೆ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಪ್ರತಿಕ್ರಿಯಿಸಿದ್ದು ತಾನು ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ ಎಂದು ಘೋಷಿಸಿದ್ದಾರೆ.
ಯಡಿಯೂರಪ್ಪ ಬ್ಲೂ ಐಯ್ಡ್ ಬಾಯ್ ನಾನು!: ಯಡಿಯೂರಪ್ಪ ಅವರ ಮೇಲೆ ನಮಗೆ ಅಪಾರವಾದ ಗೌರವವಿದೆ. ಅವರು ನಮ್ಮ ಮೆಲೆ ಅಪಾರವಾದ ನಂಬಿಕೆಯಿಟ್ಟುಕೊಂಡು ಮನೆಗೆ ಹೋದಾಗ ಟೀ ಕಾಫಿ ಸ್ವೀಟ್ ಕೋಡದೆ ಕಳಿಸುತ್ತಿರಲಿಲ್ಲ. ನಾವು ಅವರ ಮನಸಲ್ಲಿ ಬ್ಲೂ ಐ ಬಾಯ್ (ಪ್ರೀತಿಯ ಹುಡುಗ) ಅಂದು ಕೊಂಡಿದ್ದೆ. ಆದ್ರೆ ಕೆಲವರ ಕುತಂತ್ರ ಪಿತೂರಿಯಿಂದ ವಿಷ ಕಾರಿದ್ದು, ನನ್ನ ಮೇಲೆ ಅವರು ಕಿಡಿ ಕಾಡಿದ್ದಾರೆ. ಅವರು ದೊಡ್ಡವರು. ಅವರು ಹೇಳಿದನ್ನ ನಾನು ಸ್ವೀಕಾರ ಮಾಡ್ತೀನಿ ಎಂದು ಶರತ್ ಹೇಳಿದ್ದಾರೆ.
ಕಲ್ಲು ಹೊಡೆದು ಕಿರುಕುಳ ನೀಡಿದವರಿಗೆ ನಮ್ಮ ಮನೆ ಬಿಟ್ಟು ಕೊಡಬೇಕು: ಇನ್ನು, ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಮ್ಮ ಕಾರ್ಯಕರ್ತರು ಮತ್ತು ಮತದಾರರ ಪರ ನಾವು ನಿಂತಿದ್ದೀವಿ. ಇಂದು ಅವರು ಉಚ್ಚಾಟನೆ ಮಾಡಿದ್ರೆ ಅದು ವರಿಷ್ಠರು ಮಾಡಿದ ತೀರ್ಮಾನ ಅಂದುಕೊಳ್ತೀನಿ. ಕಷ್ಟಪಟ್ಟು ಕಟ್ಟಿದ ಮನೆ ರೀತಿಯಲ್ಲಿ ನಾವು ಪಕ್ಷ ಕಟ್ಟಿದ್ವಿ. ಇಂದು ಆ ಮನೆ ಬಿಟ್ಟು ಹೋಗಿ ಅಂದ್ರೆ ನೋವಾಗುತ್ತೆ. ಅದ್ರಲ್ಲೂ ನಮ್ಮ ಮನೆಗೆ ಕಲ್ಲು ಹೊಡೆದು ಕಿರುಕುಳ ನೀಡಿದವರಿಗೆ ಬಿಟ್ಟು ಕೊಡಬೇಕು ಅನ್ನೂದು ತುಂಬಾ ನೋವಾಗುತ್ತೆ ಎಂದು ಹೊಸಕೋಟೆ ನಗರದಲ್ಲಿ ಟಿವಿ9ಗೆ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
Published On - 11:55 am, Mon, 18 November 19