ಮೆಣಸಿನಕಾಯಿ ಬೆಳೆ ಚೆನ್ನಾಗಿಯೇ ಬಂದಿದೆ, ಆದ್ರೆ KBJNL ಅಧಿಕಾರಿಗಳು ಈಗ ಕಾಲುವೆ ನೀರು ಬಂದ್ ಮಾಡಿದ್ದಾರೆ
ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ.. ಒಣಗುವ ಸ್ಥಿತಿಯಲ್ಲಿರುವ ಮೆಣಸಿನಕಾಯಿ ಬೆಳೆ ಉಳಿಸಿಕೊಡಿ ಎಂದ ರೈತರು.. ಕಚೇರಿಗೆ ಬೀಗ ಹಾಕಿ ಆಕ್ರೋಶ.. ಈ ವಿದ್ಯಮಾನಗಳು ಕಂಡುಬಂದಿದ್ದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿ ಬಳಿಯ KBJNL ಕಚೇರಿ ಬಳಿ
ಆ ಜಿಲ್ಲೆಯ ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಮೆಣಸಿನಕಾಯಿ ಬೆಳೆಯನ್ನ ಬೆಳೆದಿದ್ದಾರೆ.. ಕಾಲುವೆ ನೀರು ನಂಬಿಕೊಂಡು ಮೆಣಸಿನಕಾಯಿ ಕಾಯಿ ಸಸಿ ಹಾಕಿದ್ದಾರೆ. ಐದು ತಿಂಗಳ ಕಾಲ ಕಾಲುವೆ ನೀರು ಬಂದಿದ್ದಕ್ಕೆ ಬೆಳೆ ಚೆನ್ನಾಗಿ ಬಂದಿದೆ. ಆದ್ರೆ ಈಗ ಕಾಲುವೆ ನೀರು ಬಂದ್ ಮಾಡಲಾಗಿದೆ. ಕಾಲುವೆ ನೀರು ಬಂದ್ ಮಾಡಿದ್ದಕ್ಕೆ ಬೆಳೆ ಒಣಗುವ ಸ್ಥಿತಿಗೆ ಬಂದಿದೆ. ಇದೆ ಕಾರಣಕ್ಕೆ ಇನ್ನೆರಡು ತಿಂಗಳು ನೀರು ಬಿಡುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾಲ್ಕು ದಿನಗಳಿಂದ ಎತ್ತಿನ ಬಂಡಿಗಳ ಸಮೇತವಾಗಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (Krishna Bhagya Jala Nigam Ltd – KBJNL) ಕಚೇರಿಗೆ ಬೀಗ ಹಾಕಿ ಹೋರಾಟ ನಡೆಸುತ್ತಿದ್ದಾರೆ.
ಹೌದು ಅನ್ನದಾತರ ಈ ರೀತಿ ಆಕ್ರೋಶಭರಿತವಾಗಿ ಪ್ರತಿಭಟನೆ ನಡೆಸೋಕೆ ಕಾರಣ ಅಂದ್ರೆ ಕಾಲುವೆಗಳಿಗೆ ನೀರು ಹರಿಸೋದನ್ನ ಬಂದ್ ಮಾಡಿದ್ದಕ್ಕೆ.. ಕಾಲುವೆಗಳಿಗೆ ನೀರು ಹರಿಸೋದನ್ನ ಬಂದ್ ಮಾಡಿದ್ದಕ್ಕೆ ಮೆಣಸಿನಕಾಯಿ ಬೆಳೆ ಒಣಗುವ ಆತಂಕ ರೈತರಿಗೆ ಎದುರಾಗಿದೆ. ಇದೆ ಕಾರಣಕ್ಕೆ ಕಾಲುವೆಗೆ ಇನ್ನೆರಡು ತಿಂಗಳುಗಳ ಕಾಲ ನೀರು ಹರಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಅಧಿಕಾರಿಗಳು ಸ್ಪಂದಿಸದ ಕಾರಣಕ್ಕೆ ನಿನ್ನೆ ಗುರುವಾರ KBJNL ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ. ಬಸವಸಾಗರ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಹರಿಸುಸಿ ಎಂಬುದು ರೈತರ ಆಗ್ರಹವಾಗಿದೆ.
ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಡಿಸೆಂಬರ್ 16 ರ ವರೆಗೆ ನೀರು ಹರಿಸುವುದಾಗಿ ನಿರ್ಧಾರ ಕೈಗೊಳ್ಳಲಾಗಿತ್ತು. ಇದೆ ಕಾರಣಕ್ಕೆ ಡಿಸೆಂಬರ್ 16 ರ ವರೆಗೆ ನೀರು ಹರಿಸಿ ಈಗ ಬಂದ್ ಮಾಡಲಾಗಿದೆ. ಆದ್ರೆ ಮೆಣಸಿನಕಾಯಿ ಬೆಳೆಗೆ ಇನ್ನೂ ನೀರು ಬೇಕಾಗಿದೆ. ಇದೇ ಕಾರಣಕ್ಕೆ ಇನ್ನೆರಡು ತಿಂಗಳು 15 ದಿನಕ್ಕೆ ಒಂದು ಬಾರಿ ನಿರಂತರ 5 ದಿನಗಳ ಕಾಲ ನೀರು ಹರಿಸಬೇಕೆಂಬುದು ರೈತರ ಒತ್ತಾಯವಾಗಿದೆ. ಆದ್ರೆ ರೈತರ ಮನವಿಗೆ ಸ್ಪಂದಿಸದ ಕಾರಣಕ್ಕೆ ರೈತರು ಎತ್ತುಗಳು ಹಾಗೂ ಬಂಡಿಗಳ ಸಮೇತರಾಗಿ ಬಂದು ಪ್ರತಿಭಟನೆ ನಡೆಸಿ KBJNL ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಹಾಗೂ ಹುಣಸಗಿ ತಾಲೂಕಿನಾದ್ಯಂತ ಸುಮಾರು 20 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಮೆಣಸಿನಕಾಯಿ ಬೆಳೆಯನ್ನ ಹಾಕಿದ್ದಾರೆ. ಸುಮಾರು ಎಕರೆಗೆ 1 ರಿಂದ 1.5 ಲಕ್ಷ ಹಣವನ್ನ ಖರ್ಚು ಮಾಡಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯನ್ನ ಬೆಳೆದಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಮೆಣಸಿನಕಾಯಿ ಸಸಿಗಳನ್ನ ನಾಟಿ ಮಾಡಿದ್ರು. ಐದು ತಿಂಗಳ ಕಾಲ ಬಸವಸಾಗರ ಜಲಾಶಯದಿಂದ ನೀರು ಹರಿಸಲಾಗಿತ್ತು.. ಹೀಗಾಗಿ ರೈತರ ಮೆಣಸಿನಕಾಯಿ ಬೆಳೆ ಚೆನ್ನಾಗಿ ಬಂದಿದೆ. ಆದ್ರೆ ನೀರಾವರಿ ಸಲಹ ಸಮಿತಿ ನಿರ್ಧಾರದಂತೆ ಈಗ ನೀರು ಬಂದ್ ಮಾಡಲಾಗಿದೆ.
ಆದ್ರೆ ಮೆಣಸಿನಕಾಯಿ ರಾಶಿ ಆಗುವುದ್ದಕ್ಕೆ ಇನ್ನೂ ಎರಡು ತಿಂಗಳು ಬೇಕು, ಬೆಳೆ ಬೆಳೆಯಬೇಕು ಅಂದ್ರೆ ಕಾಲುವೆ ನೀರು ಬೇಕು. ಆದ್ರೆ ನೀರು ಹರಿಯದ ಕಾರಣಕ್ಕೆ ಮೆಣಸಿನಕಾಯಿ ಬೆಳೆ ಒಣಗುವ ಆತಂಕ ರೈತರಿಗೆ ಎದುರಾಗಿದೆ. ಇದೆ ಕಾರಣಕ್ಕೆ ಕಳೆದ ನಾಲ್ಕು ದಿನಗಳಿಂದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ಸಾವಿರಾರು ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ರೈತರಿಗೆ ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ರೈತರು ಯಾರ ಮಾತಿಗೂ ಕ್ಯಾರೆ ಎನ್ನದೆ ಪ್ರತಿಭಟನೆ ಮುಂದುವರೆಸಿದ್ದಾರೆ. ಕೊನೆಗೆ ಜಿಲ್ಲಾಧಿಕಾರಿ ಸುಶೀಲಾ. ಬಿ ಇದು ನನ್ನ ಕೈಯಲ್ಲಿ ಇಲ್ಲ, ಸರ್ಕಾರದ ಜೊತೆ ಮಾತಾಡಿ ನಿರ್ಧಾರ ಕೈಕೊಳ್ಳಲಾಗುತ್ತೆ ಅಂತ ಹೇಳಿದ್ದಾರೆ.
ಒಟ್ನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ರೈತರು ಮೆಣಸಿನಕಾಯಿ ಬೆಳೆಯನ್ನ ಬೆಳೆದಿದ್ದಾರೆ. ಆದರೆ ಕಾಲುವೆಗೆ ನೀರು ಹರಿಸುವುದನ್ನ ಬಂದ್ ಮಾಡಿದ್ದಕ್ಕೆ ರೈತರಿಗೆ ಬೆಳೆ ಒಣಗುವ ಆತಂಕ ಎದುರಾಗಿದೆ. ಹೀಗಾಗಿ ಸರ್ಕಾರ ರೈತರ ಬೆಳೆ ಒಣಗದಂತೆ ಕ್ರಮಕ್ಕೆ ಮುಂದಾಗಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ