ಯಾದಗಿರಿ ಸಮುದಾಯ ಭವನದಲ್ಲಿ ನಡೆಯುತ್ತಿದೆ ಶಾಲೆ, ಅಲ್ಲಿ ಕಾರ್ಯಕ್ರಮ ಇದ್ರೆ ಶಾಲೆಗೆ ರಜೆ! ಯಾಕೀ ದುರವಸ್ಥೆ?
ಯಾದಗಿರಿ ಸಮುದಾಯ ಭವನದಲ್ಲಿ ಕಾರ್ಯಕ್ರಮಗಳು ಇದ್ರೆ ಶಾಲೆಗೆ ರಜೆ ನೀಡಲಾಗುತ್ತೆ. ಶಾಲೆ ನಡೆದರೂ 1ನೇ ತರಗತಿ ಮಕ್ಕಳಿಗೆ ಪಾಠ ಹೇಳಿದ್ರು 5ನೇ ತರಗತಿ ಮಕ್ಕಳು ಪಾಠ ಕೇಳಬೇಕು. 3ನೇ ತರಗತಿ ಮಕ್ಕಳಿಗೆ ಪಾಠ ಮಾಡಿದ್ರೆ 2ನೇ ತರಗತಿ ಮಕ್ಕಳು ಪಾಠ ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಒಬ್ಬರ ಮೇಲೆ ಒಬ್ಬರಂತೆ ಕುಳಿತುಕೊಂಡು ಸಂಬಂಧವಿಲ್ಲ ಪಾಠ ಕೇಳಬೇಕಾಗಿದೆ.
ಆ ಸರ್ಕಾರಿ ಶಾಲೆ ಆರಂಭವಾಗಿ 17 ವರ್ಷಗಳೇ ಕಳೆದಿವೆ. ಇಲ್ಲಿವರೆಗೆ ಆ ಶಾಲೆಯಲ್ಲಿ ಸಾವಿರಾರು ಮಕ್ಕಳು ವಿದ್ಯೆಯನ್ನ ಕಲಿತ್ತಿದ್ದಾರೆ.. ದುರಂತ ಅಂದ್ರೆ ಶಾಲೆ ಆರಂಭವಾಗಿ ವರ್ಷಗಳೇ ಕಳೆದ್ರು ಸ್ವಂತ ಕಟ್ಟಡವಿಲ್ಲ.. 17 ವರ್ಷಗಳಿಂದ ಶಾಲೆಯನ್ನ ಸಮುದಾಯ ಭವನದಲ್ಲಿ ನಡೆಸಲಾಗುತ್ತಿದೆ. ಸಮುದಾಯ ಭವನದ ಒಂದೆ ಕೋಣೆಯಲ್ಲಿ 70 ಕ್ಕೂ ಅಧಿಕ ಮಕ್ಕಳು ಕುಳಿತುಕೊಂಡು ಪಾಠ ಕೇಳ್ತಾಯಿದ್ದಾರೆ. ನೂರಾರು ಬಾರಿ ಮನವಿ ಮಾಡಿದ್ರು ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಅರ್ಧ ದಶಕಕ್ಕೂ ಹೆಚ್ಚು ಕಾಲದಿಂದ ಸಮುದಾಯ ಭವನದಲ್ಲಿ ನಡೆಯುತ್ತಿದೆ ಸರ್ಕಾರಿ ಶಾಲೆ. ಸರ್ಕಾರಿ ಶಾಲೆಗಿಲ್ಲ ಸ್ವಂತ ಕಟ್ಟಡ. ಒಂದೆ ಕೋಣೆಯಲ್ಲಿ ಕುಳಿತು ಪಾಠ ಕೇಳುತ್ತಿರುವ ಮಕ್ಕಳು. ಸಮುದಾಯ ಭವನದಲ್ಲಿ ಕಾರ್ಯಕ್ರಮ ಇದ್ರೆ ಶಾಲೆಗೆ ರಜೆ. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ (Yadgiri Community Hall) ನಗರದ ವಾಲ್ಮೀಕಿ ಬಡಾವಣೆಯಲ್ಲಿ (Government School Reality Check ).
ಹೌದು ಈ ಬಡಾವಣೆಯಲ್ಲಿ ಸರ್ಕಾರಿ ಶಾಲೆಯಿದೆ. ಆದ್ರೆ ಹುಡುಕಿದರೂ ಯಾರಿಗೂ ಸಿಗೋದಿಲ್ಲ. ಯಾಕೆಂದ್ರೆ ಈ ಬಡಾವಣೆಯಲ್ಲಿ ಶಾಲೆಯ ಸಮುದಾಯ ಭವನದಲ್ಲಿ ನಡೆಯುತ್ತಿದೆ.. ಸ್ವಂತ ಕಟ್ಟಡ ಇಲ್ಲದ ಕಾರಣಕ್ಕೆ ಶಾಲೆಯನ್ನ ಸಮುದಾಯ ಭವನದಲ್ಲಿ ನಡೆಸಲಾಗುತ್ತಿದೆ. ಒಂದಲ್ಲ ಎರಡಲ್ಲ ಬರೋಬರಿ 17 ವರ್ಷಗಳಿಂದ ಈ ಬಡಾವಣೆಯಲ್ಲಿರುವ ಸರ್ಕಾರಿ ಶಾಲೆಯ ಸಮುದಾಯ ಭವನದಲ್ಲಿ ನಡೆಯುತ್ತಿದೆ.
ಬಡಾವಣೆಯಲ್ಲಿರುವ ಮಶಮ್ಮ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಇದೆ ಸಮುದಾಯ ಭವನದಲ್ಲಿ ಶಾಲೆಯನ್ನ ನಡೆಸಲಾಗುತ್ತಿದೆ. ಒಂದರಿಂದ ಐದನೇ ತರಗತಿ ವರೆಗೆ ನಡೆಯುತ್ತಿದೆ. ಈ ವರ್ಷ ಶಾಲೆಯಲ್ಲಿ ಸುಮಾರು 70 ಕ್ಕೂ ಅಧಿಕ ಮಕ್ಕಳು ದಾಖಲಾತಿಯನ್ನ ಪಡೆದಿದ್ದಾರೆ. ಜೊತೆಗೆ ಶಾಲೆಯಲ್ಲಿ ಮಕ್ಕಳಿಗೆ ತಕ್ಕ ಹಾಗೆ ಶಿಕ್ಷಕರು ಕೂಡ ಇದ್ದಾರೆ.
ಆದ್ರೆ ಸ್ವಂತ ಕಟ್ಟಡ ಇಲ್ಲದ ಕಾರಣಕ್ಕೆ ಸಮುದಾಯ ಭವನದಲ್ಲಿ ಶಾಲೆಯಲ್ಲಿ ನಡೆಸಲಾಗುತ್ತಿದೆ.. ಸಮುದಾಯ ಭವನವನ್ನ ವಾಲ್ಮೀಕಿ ಸಮುದಾಯದ ಜನರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾಗಿದೆ. ಯಾವುದೆ ಕಾರ್ಯಕ್ರಮ ದೇವಸ್ಥಾನದ ಕಾರ್ಯಕ್ರಮಗಳನ್ನ ಮಾಡುವುದ್ದಕ್ಕೆ ಈ ಭವನವನ್ನ ಬಳಕೆ ಮಾಡಿಕೊಳ್ಳಲಾಗುತ್ತೆ. ಆದ್ರೆ ಇದೆ ಭವನದಲ್ಲಿ ಶಾಲೆಯನ್ನ ನಡೆಸಲಾಗುತ್ತಿದೆ. ಇನ್ನು ಯಾವುದಾದ್ರು ಕಾರ್ಯಕ್ರಮಗಳು ಇದ್ರೆ ಶಾಲೆಗೆ ರಜೆ ನೀಡಲಾಗುತ್ತೆ. ಅನಿವಾರ್ಯವಾಗಿ ಕಾರ್ಯಕ್ರಮಗಳಿಗಾಗಿ ಸಮುದಾಯವನ್ನ ಖಾಲಿ ಮಾಡಿಕೊಡಬೇಕಾಗಿದೆ.
ಇನ್ನು ಸಮುದಾಯ ಭವನದ ಕಟ್ಟಡ ಕೇವಲ ಶಾಲೆಗೆ ಮಾತ್ರ ಬಳಕೆ ಆಗ್ತಾಯಿಲ್ಲ. ಬದಲಿಗೆ ದೇವಸ್ಥಾನಕ್ಕೆ ಸಂಬಂಧಿಸಿದ ಜೊತೆಗೆ ಕಾರ್ಯಕ್ರಮಕ್ಕೆ ಬೇಕಾಗುವ ವಸ್ತುಗಳನ್ನ ಇಲ್ಲೇ ಇಡಲಾಗಿದೆ. ಶಾಮಿಯಾನಾ, ಅಡುಗೆ ಮಾಡಲು ಬೇಕಾಗುವ ದೊಡ್ಡ ದೊಡ್ಡ ಪಾತ್ರೆಗಳನ್ನ ಇಲ್ಲೇ ಇಡಲಾಗಿದೆ.. ಸಾಕಷ್ಟು ವಸ್ತುಗಳನ್ನ ಇಟ್ಟಿರುವ ಕಾರಣಕ್ಕೆ ಭವನದ ಅರ್ಧದಷ್ಟು ಜಾಗವೇ ಹಿಡಿದೆ. ಇನ್ನುಳಿದ ಅರ್ಧ ಜಾಗದಲ್ಲಿ ಶಿಕ್ಷಕರು ಶಾಲೆಯನ್ನ ನಡೆಸುತ್ತಿದ್ದಾರೆ.
Also Read: ತಾವು ವ್ಯಾಸಂಗ ಮಾಡಿದ ಬಡ ಶಾಲೆಯನ್ನು ಫಳ ಫಳ ಹೊಳೆಯುವಂತೆ ಮಾಡಿರುವ ಹೃದಯ ಶ್ರೀಮಂತ ಹಳೆಯ ವಿದ್ಯಾರ್ಥಿಗಳು
ಒಂದರಿಂದ ಐದನೇ ತರಗತಿ ವರೆಗಿನ ಮಕ್ಕಳಿಗೆ ಒಂದೆ ಕಡೆ ಕೂರಿಸಿ ಶಿಕ್ಷಕರು ಒಂದೆ ಕುಳಿತುಕೊಂಡು ಮಕ್ಕಳಿಗೆ ಪಾಠ ಮಾಡ್ತಾರೆ.. ಇನ್ನು ಒಂದನೇ ತರಗತಿ ಮಕ್ಕಳಿಗೆ ಪಾಠ ಹೇಳಿದ್ರು ಐದನೇ ತರಗತಿ ಮಕ್ಕಳು ಪಾಠ ಕೇಳಬೇಕು. ಇನ್ನು ಮೂರನೇ ತರಗತಿ ಮಕ್ಕಳಿಗೆ ಪಾಠ ಮಾಡಿದ್ರೆ ಎರಡನೇ ತರಗತಿ ಮಕ್ಕಳು ಪಾಠ ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಒಬ್ಬರ ಮೇಲೆ ಒಬ್ಬರಂತೆ ಕುಳಿತುಕೊಂಡು ಸಂಬಂಧವಿಲ್ಲ ಪಾಠ ಕೇಳಬೇಕಾಗಿದೆ. ಇನ್ನು ಇಷ್ಟು ವರ್ಷ ಶಾಲೆಗೆ ಕಟ್ಟಡ ನಿರ್ಮಾಣ ಮಾಡದ್ದಕ್ಕೆ ಜಾಗದ ಕೊರತೆಯಿದೆ.
ಕೆಕೆಆರ್‌ಡಿಬಿಯಲ್ಲಿ ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನವಿದ್ರು ಜಾಗದ ಕೊರತೆಯಿಂದ ಶಾಲೆಗೆ ಕಟ್ಟಡ ನಿರ್ಮಾಣವಾಗಿಲ್ಲ.. ನಗರಸಭೆಯಿಂದ ಜಾಗ ಮಂಜೂರು ಮಾಡಿ ಕಟ್ಟಡ ಕಟ್ಟಬಹುದು ಆದ್ರೆ ಈ ಕೆಲಸಕ್ಕೆ ಇಷ್ಟು ವರ್ಷವಾದ್ರು ಯಾರು ಮುಂದಾಗಿಲ್ಲ.. ಈಗ ನಗರಸಭೆಯಿಂದ ಜಾಗ ಗುರುತಿಸಲಾಗಿದೆಯಂತೆ ಆದ್ರೆ ಇದಕ್ಕೆ ಅನುಮೋದನೆ ಸಿಗೋದು ಯಾವಾಗ ಏನೋ.. ಇದೆ ಕಾರಣಕ್ಕೆ ಸ್ಥಳೀಯರು ನಮ್ಮ ಮಕ್ಕಳಿಗೆ ಶಾಲೆಯ ಕಟ್ಟಡ ನಿರ್ಮಾಣ ಮಾಡಿಕೊಡಿ ಎಂದು ಆಗ್ರಹಿಸುತ್ತಿದ್ದಾರೆ.
ಒಟ್ನಲ್ಲಿ ಅರ್ಧ ದಶಕಕ್ಕೂ ಹಚ್ಚು ಕಾಲದ ಹಿಂದೆ ಶಾಲೆ ಆರಂಭವಾದ್ರು ಸ್ವಂತ ಕಟ್ಟಡ ಇರದೆ ಇರೋದು ದೊಡ್ಡ ದುರಂತ. ಹೀಗಾಗಿ ಕೂಡ್ಲೆ ಅಧಿಕಾರಿಗಳು ಜಾಗವನ್ನ ಮಂಜೂರು ಮಾಡಿ ಶಾಲೆಗೆ ಕಟ್ಟಡ ಕಟ್ಟಿಕೊಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:20 pm, Sat, 23 December 23