AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ: ಜನಪ್ರತಿನಿಧಿಗಳನ್ನು ಪ್ರಶ್ನಿಸಿದ ರೈತನ ವಿರುದ್ಧ ಎಫ್​ಐಆರ್ ದಾಖಲು

ಪರಿಹಾರದ ಬಗ್ಗೆ ಪ್ರಶ್ನಿಸುವ ವೇಳೆ ರೈತ ಬಸಣ್ಣ ಆಕ್ರೋಶ ಹೊರಹಾಕಿದ್ದಾರೆ. ಜನಪ್ರತಿನಿಧಿಗಳು, ಡಿಸಿಎಂ ವಿರುದ್ಧ ರೈತ ಬಸಣ್ಣ ಕಿಡಿಕಾರಿದ್ದಾರೆ. ಹೀಗಾಗಿ ರೈತ ಬಸಣ್ಣ ಭಂಗಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಯಾದಗಿರಿ: ಜನಪ್ರತಿನಿಧಿಗಳನ್ನು ಪ್ರಶ್ನಿಸಿದ ರೈತನ ವಿರುದ್ಧ ಎಫ್​ಐಆರ್ ದಾಖಲು
ರೈತನ ವಿರುದ್ಧ ಎಫ್​ಐಆರ್
TV9 Web
| Updated By: ganapathi bhat|

Updated on:Aug 01, 2021 | 6:03 PM

Share

ಯಾದಗಿರಿ: ಜನಪ್ರತಿನಿಧಿಗಳನ್ನು ಪ್ರಶ್ನಿಸಿದ್ದಕ್ಕೆ ರೈತನ ವಿರುದ್ಧ ಎಫ್​ಐಆರ್ ದಾಖಲಿಸಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದಲ್ಲಿ ನಡೆದಿದೆ. ಕೊಳ್ಳುರು ರೈತ ಬಸಣ್ಣ ಭಂಗಿ ಎಂಬವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಸಚಿವರಾಗಿದ್ದಾಗ ಆರ್. ಶಂಕರ್ ನೆರೆ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆರ್. ಶಂಕರ್‌ಗೆ ರೈತ ಬಸಣ್ಣ ಭಂಗಿ ತರಾಟೆ ತೆಗೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ರೈತನ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ.

ಪರಿಹಾರದ ಬಗ್ಗೆ ಪ್ರಶ್ನಿಸುವ ವೇಳೆ ರೈತ ಬಸಣ್ಣ ಆಕ್ರೋಶ ಹೊರಹಾಕಿದ್ದಾರೆ. ಜನಪ್ರತಿನಿಧಿಗಳು, ಡಿಸಿಎಂ ವಿರುದ್ಧ ರೈತ ಬಸಣ್ಣ ಕಿಡಿಕಾರಿದ್ದಾರೆ. ಹೀಗಾಗಿ ರೈತ ಬಸಣ್ಣ ಭಂಗಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜುಲೈ 25 ರಂದು ನಡೆದ ಘಟನೆಗೆ ಸಂಬಂಧಿಸಿ ಎಫ್​ಐಆರ್ ದಾಖಲಾಗಿದೆ.

ಅವಾಚ್ಯ ಶಬ್ದಗಳಿಂದ ಮಾಜಿ ಸಚಿವ ಆರ್. ಶಂಕರ್​ಗೆ ನಿಂದನೆ ಮಾಡಲಾಗಿದೆ ಎಂದು ದೂರು ದಾಖಲಿಸಲಾಗಿದೆ. ಸರಿಯಾಗಿ ಕೃಷಿ ಅಧಿಕಾರಿಗಳು ಮಾಹಿತಿ ನೀಡೋದಿಲ್ಲಾ ಬೆಳೆ ವಿಮೆ ಬಗ್ಗೆ ಮಾಹಿತಿ ಕೊಡೊದಿಲ್ಲಾ ಎಂದು ರೈತ ಬಸಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾಜಿ ಸಚಿವ ಆರ್.ಶಂಕರ್, ಶಾಸಕ ವೆಂಕಟರೆಡ್ಡಿ ಮುದ್ನಾಳ ಹಾಗೂ ಜಿಲ್ಲಾಧಿಕಾರಿಗಳನ್ನ ಪ್ರಶ್ನೆ ಮಾಡಿದ್ದಕ್ಕೆ ದೂರು ದಾಖಲು ಮಾಡಲಾಗಿದೆ.

ಮಾಜಿ ಸಚಿವ ಆರ್ ಶಂಕರ್ ಪ್ರತಿಕ್ರಿಯೆ ನಾನು ಯಾದಗಿರಿ ಜಿಲ್ಲೆಗೆ ತೆರಳಿದ್ದೆ. ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಕೊರೊನ ವಾರಿಯರ್ಸ್‌ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಮಾಧ್ಯಮ ದಿನಚರಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ಕೋಳೋರು ಬ್ರಿಡ್ಜ್ ಭೇಟಿ ನೀಡಿ ವೀಕ್ಷಣೆ ಮಾಡಿದೆ. ಬಸವರಾಜ್ ಅನ್ನೋ ರೈತ ಏರುಧ್ವನಿಯಲ್ಲಿ ಮಾತನಾಡಿದ. ಬಾ ಬಂದು ಸಮಸ್ಯೆ ಹೇಳಿಕೊ ಎಂದು ಹೇಳಿದೆ. ಸ್ಥಳೀಯ ಶಾಸಕರು ಸಹ ಅಲ್ಲಿ ಇದ್ರು ಎಂದು ಆರ್. ಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ.

ರೈತರಿಗೆ ವಿಮೆ ಸಿಗದಿದ್ರೆ ಮುಂದೆ ಸಭೆ ಮಾಡೋಣ ಎಂದು ಹೇಳಿ ಬಂದಿದ್ದೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸಹ ಪರಿಹಾರ ಕೊಡಿಸಿದೆ. ಆದರೆ, ಏರುದನಿಯಲ್ಲಿ ಮಾತನಾಡಿದ ಆತನ ಮೇಲೆ ನಿನ್ನೆ ಎಫ್ಐಆರ್ ದಾಖಲು ಆಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ದೂರು ದಾಖಲು ಮಾಡಿದ್ದೇವೆಂದು ಎಸ್​ಪಿ ಹೇಳಿದ್ದಾರೆ. ಅವರಿಗೆ ಸಮಸ್ಯೆ ಆಗಿದ್ರೆ ಕ್ಷಮೆ ಕೋರುತ್ತೇನೆ ಅಂತಾ ಆರ್ ಶಂಕರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಹಿರಣ್ಯಕೇಶಿ ನದಿ ಪ್ರವಾಹದಲ್ಲಿ ಪುಸ್ತಕ, ಆಟ ಸಾಮಾಗ್ರಿಗಳು ಕೊಚ್ಚಿ ಹೋಗಿವೆ; ಟಿವಿ9 ಕ್ಯಾಮೆರಾ ಮುಂದೆ ಬಿಕ್ಕಿ ಬಿಕ್ಕಿ ಅತ್ತ 8 ವರ್ಷದ ಬಾಲಕಿ

ಕರ್ನಾಟಕದ 13 ಜಿಲ್ಲೆಗಳಲ್ಲಿ ಪ್ರವಾಹ; ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ: ಬಸವರಾಜ ಬೊಮ್ಮಾಯಿ ಘೋಷಣೆ

(FIR Registered against Farmer in Yadagiri Kolluru Village for issue during R Shankar visit)

Published On - 4:54 pm, Sun, 1 August 21