Surapura Assembly By Election Result 2024: ಸುರುಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಜಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 04, 2024 | 7:37 PM

Shorapur Assembly constituency: ಸುರುಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದೆ. ಬಿಜೆಪಿಯ ನರಸಿಂಹ ನಾಯಕ (ರಾಜುಗೌಡ) ಅವರನ್ನ ಕಾಂಗ್ರೆಸ್​ನ ದಿವಂಗತ ರಾಜಾ ವೆಂಕಟಪ್ಪ ನಾಯಕ್​ ಪುತ್ರ ರಾಜಾ ವೇಣುಗೋಪಾಲ ನಾಯಕ್​ ಅವರು ಸೋಲಿಸಿದ್ದಾರೆ. ಇಬ್ಬರ ಮಧ್ಯೆ ಪ್ರಭಲ ಪೈಪೋಟಿ ಏರ್ಪಟ್ಟಿತ್ತು. ಇದೀಗ ಮತದಾರ ಪ್ರಭುಗಳು ಕೈ ಹಿಡಿದಿದ್ದಾರೆ.

Surapura Assembly By Election Result 2024: ಸುರುಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಜಯ
ರಾಜಾ ವೇಣುಗೋಪಾಲ ನಾಯಕ್​, ರಾಜುಗೌಡ
Follow us on

ಯಾದಗಿರಿ, ಜೂನ್​ 4: ಕಾಂಗ್ರೆಸ್​ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನದಿಂದ ತೆರವಾಗಿದ್ದ ಸುರಪುರ ಕ್ಷೇತ್ರ ವಿಧಾನಸಭೆ ಉಪಚುನಾವಣೆ (Surapura Assembly By Election) ಮತದಾನ ಮೇ7 ರಂದು ನಡೆದಿದೆ. ಇಂದು (ಜೂ 04) ಫಲಿತಾಂಶ  ಪ್ರಕಟವಾಗಿದ್ದು, ಕಾಂಗ್ರೆಸ್​ನ ರಾಜಾ ವೇಣುಗೋಪಾಲ ನಾಯಕ್​ ಅವರು ಗೆಲುವು ಸಾಧಿಸಿದ್ದಾರೆ. ರಾಜಾ ವೇಣುಗೋಪಾಲ ನಾಯಕ್ ಅವರಿಗೆ ಇದು ಮೊದಲನೇ ಚುನಾವಣೆಯಾಗಿದ್ದು ಬಿಜೆಪಿಯ ನರಸಿಂಹ ನಾಯಕ್ (ರಾಜುಗೌಡ) ಅವರನ್ನು ಸೋಲಿಸಿದ್ದಾರೆ. ಚುನಾವಣಾ ಆಯೋಗದ ಮಾಹಿತಿಯಂತೆ ಕಾಂಗ್ರೆಸ್‌ನ ರಾಜಾ ವೇಣುಗೋಪಾಲ ನಾಯಕ್‌ ಅವರು 1,14,886 ಮತಗಳನ್ನು ಪಡೆದರೆ, ಬಿಜೆಪಿಯ ರಾಜುಗೌಡ  ಅವರು 96,566 ಮತಗಳನ್ನು ಪಡೆದು ಸೋಲುಂಡರು.

2023ರಲ್ಲಿ ನಡೆದ ವಿಧಾಸಭೆ ಚುನಾವಣೆಯಲ್ಲಿ ರಾಜಾ ವೇಣುಗೋಪಾಲ ನಾಯಕ್​ ತಂದೆ, ದಿ. ರಾಜಾ ವೆಂಕಟಪ್ಪ ನಾಯಕ್​ ಅವರು 1,13,559 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಬಿಜೆಪಿಯ ರಾಜುಗೌಡ 88,336 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ರಾಜಾ ವೆಂಕಟಪ್ಪ ನಾಯಕ್​ ಅವರು ರಾಜುಗೌಡ ಅವರನ್ನು 25 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನರಸಿಂಹ ನಾಯಕ್​ (ರಾಜುಗೌಡ) ಅವರು 1,104,426 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್​ನ ದಿ. ರಾಜಾ ವೆಂಕಟಪ್ಪ ನಾಯಕ್​ ಅವರು 81,858 ಮತಗಳನ್ನು ಪಡೆದಿದ್ದರು. ರಾಜುಗೌಡ ಅವರು ರಾಜಾ ವೆಂಕಟಪ್ಪ ನಾಯಕ್​ ಅವರನ್ನು 22 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:29 am, Tue, 4 June 24