ಅಯ್ಯೋ ವಿಧಿಯೇ! ಒಂದೇ ದಿನ ಹೃದಯಾಘಾತದಿಂದ ಅಣ್ಣ- ತಮ್ಮ ಸಾವು!
ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಚಿಕ್ಕವರಿಂದ ಹಿಡಿದು ಹಿರಿಯರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇಂದು ಕರ್ನಾಟಕದಲ್ಲಿ ಇದೇ ಹೃದಯಾಘಾತಕ್ಕೆ ಒಂದೇ ಕುಟುಂಬದ ಅಣ್ಣ-ತಮ್ಮ ಬಲಿಯಾಗಿದ್ದು, ಇಬ್ಬರು ಸಹೋದರರು ಸಾವಿನಲ್ಲೂ ಒಂದಾಗಿದ್ದಾರೆ. ಸದ್ಯ ಇಬ್ಬರನ್ನು ಕಳೆದುಕೊಂಡಿರುವ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಯಾದಗಿರಿ, (ಸೆಪ್ಟೆಂಬರ್ 02): ಒಂದೇ ಕುಟುಂಬದ ಇಬ್ಬರು ಸಹೋದರರು (Br0thers) ಹೃದಯಾಘಾತಕ್ಕೆ (heart attack) ಬಲಿಯಾಗಿದ್ದು, ಅಣ್ಣ ತಮ್ಮಸಾವಿನಲ್ಲೂ ಒಂದಾಗಿದ್ದಾರೆ. ಈ ಘಟನೆ ಯಾದಗಿರಿ (Yadgir) ಜಿಲ್ಲೆಯ ಸುರಪುರ ತಾಲೂಕಿಮ ಕೆಂಭಾವಿಯಲ್ಲಿ (kembhavi) ನಡೆದಿದೆ. ಮೃತರನ್ನು ಶಂಶೋದ್ದೀನ್ (42) ಮತ್ತು ಇರ್ಫಾನ್ (38) ಮೃತ ದುರ್ವೈವಿಗಳು. ಮೊದಲಿಗೆ ಅಣ್ಣ ಸಂಶುದ್ದೀನ್ ಹೃದಯಾಘಾತದಿಂದ ಮೃತಪಟ್ಟಿರುವ ಸುದ್ದಿ ಕೇಳಿ ತಮ್ಮ ಇರ್ಫಾನ್ ಗೂ ಸಹ ಹೃದಯಾಘಾತವಾಗಿದೆ. ಒಂದೇ ದಿನ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಎದೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಇಬ್ಬರು ಸಹೋದರರು ಸಾವನ್ನಪ್ಪಿದ್ದು, ಇಷ್ಟು ದಿನ ಜೊತೆಯಾಗಿ ಬೆಳೆದಿದ್ದ ಸಹೋದರರು ಇದೀಗ ಸಾವಿನಲ್ಲೂ ಒಂದಾಗಿದ್ದಾರೆ. ಸದ್ಯ ಇಬ್ಬರನ್ನು ಕಳೆದುಕೊಂಡಿರುವ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರಲ್ಲಿ ಹಿಟ್ ಆ್ಯಂಡ್ ರನ್
ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಗೆ ಓರ್ವ ಬಲಿಯಾಗಿದ್ದು, ಮತ್ತೋರ್ವ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಯಲಹಂಕದ ಕೋಗಿಲು ಕ್ರಾಸ್ ಬಳಿ ಘಟನೆ ನಡೆದಿದೆ. ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
Published On - 4:10 pm, Tue, 2 September 25



