ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನ; ಯಾದಗಿರಿ ಗ್ರಾಮಸ್ಥರು ಶಾಕ್
ಯಾದಗಿರಿಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ರೈತ ಪರಶುರಾಮ ಅವರ ಕಪ್ಪು ಎಮ್ಮೆ ಬಿಳಿ ಹೋರಿ ಕರು ಒಂದಕ್ಕೆ ಜನ್ಮ ನೀಡಿದೆ. ಸಾಮಾನ್ಯವಾಗಿ ಎಮ್ಮೆ ಕಪ್ಪು ಕರುಗಳನ್ನೇ ಹೆರುತ್ತಿದ್ದರೂ, ಈ ಘಟನೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಎಮ್ಮೆಯನ್ನು ಹೋರಿ ಜೊತೆ ಕಟ್ಟಿದ್ದರಿಂದ ಈ ವಿಚಿತ್ರ ಕರು ಜನಿಸಿರಬಹುದೆಂದು ಊಹಿಸಲಾಗಿದೆ. ಈ ಅಪರೂಪದ ಕರುವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಬರುತ್ತಿದ್ದಾರೆ.
ಯಾದಗಿರಿ, ಅ.21: ಸಾಮಾನ್ಯವಾಗಿ ಎಮ್ಮೆ ಕಬ್ಬಿನ ಹಾಲಿನಂತೆ ಕಪ್ಪಗಿರುವ ‘ಎಮ್ಮೆ ಕರು’ಗೇ ಜನ್ಮ ನೀಡುವುದು ಪ್ರಕೃತಿಯ ನಿಯಮ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಈ ನಿಯಮಕ್ಕೆ ಅಚ್ಚರಿಯ ಎಂಬಂತೆ ಘಟನೆಯೊಂದು ನಡೆದಿದೆ. ಕಪ್ಪು ಬಣ್ಣದ ಎಮ್ಮೆಯೊಂದರ ಹೊಟ್ಟೆಯಲ್ಲಿ ಬಿಳಿ ಬಣ್ಣದ ‘ಹೋರಿ ಕರು’ ಜನ್ಮ ತಳೆದಿದ್ದು, ಈ ವಿಚಿತ್ರ ಹಾಗೂ ಅಪರೂಪದ ಘಟನೆ ಕಂಡು ಇಡೀ ಗ್ರಾಮಸ್ಥರೇ ಆಶ್ಚರ್ಯಚಕಿತರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ರೈತ ಪರಶುರಾಮ ಎಂಬುವವರಿಗೆ ಸೇರಿದ ಎಮ್ಮೆ ಈ ಅಪರೂಪದ ಕರುಗೆ ಜನ್ಮ ನೀಡಿದೆ. ಸುಮಾರು 10 ತಿಂಗಳುಗಳ ಕಾಲ ಗರ್ಭಿಣಿಯಾಗಿದ್ದ ಕಪ್ಪು ಎಮ್ಮೆಯು ಈ ಕರುಗೆ ಜನ್ಮ ನೀಡಿದ್ದು, ಕರುವಿನ ಬಣ್ಣ ಸಂಪೂರ್ಣ ಬಿಳಿಯಾಗಿದ್ದು ಹೋರಿ ಕರುವಿನಂತಿದೆ. ರೈತ ಪರಶುರಾಮ ಅವರು ತಮ್ಮ ಹೊಲದಲ್ಲಿ ಎಮ್ಮೆ ಹಾಗೂ ಹೋರಿಯನ್ನು ಒಂದೇ ಕಡೆ ಕಟ್ಟುತ್ತಿದ್ದರು. ಹೀಗಾಗಿ, ಹೋರಿಯ ಸಂಪರ್ಕದಿಂದಲೇ ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನಿಸಿರಬಹುದು ಎಂದು ಊಹಿಸಲಾಗಿದ್ದು, ಈ ವಿಚಿತ್ರ ಕರುವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಪರಶುರಾಮ ಅವರ ಮನೆಗೆ ಬರುತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Oct 21, 2026 10:56 AM
ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಗೆ ವಿಶೇಷ ಮಜ್ಜನ
ವಿಜಯದಶಮಿಯ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ: ಡಾ. ಶೆಲ್ವಪಿಳ್ಳೈ ಅಯ್ಯಂಗಾರ್
ವಜ್ರ ಕದ್ದು ಕಾವಲುಗಾರರ ನೆಮ್ಮದಿ ಕೆಡಿಸಿದ ಆಸಿಯಾ: ವಿಡಿಯೋ
ಮೈಸೂರು ದಸರಾ: ಆಟೋದಲ್ಲಿ ಸಂಚರಿಸಿ ಗಮನಸೆಳೆದ ಸಚಿವ ಕೃಷ್ಣಭೈರೇಗೌಡ

