AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವಾಹನ ಖರೀದಿ ಮಾಡುವವರಿಗೆ ಏಪ್ರಿಲ್ ನಿಂದ ಡಬಲ್ ಶಾಕ್! ಕಡಿಮೆ ದರದ ವಾಹನಕ್ಕೂ ತೆರಿಗೆ, ಬೆಲೆಯೂ ಏರಿಕೆ

ಏಪ್ರಿಲ್ 1 ರಿಂದ ಕರ್ನಾಟಕ ಸರ್ಕಾರದ ಹೊಸ ವಾಹನ ತೆರಿಗೆ ನೀತಿ ಜಾರಿಯಾಗಲಿದೆ. 10 ಲಕ್ಷ ರೂ.ಗಳಿಗಿಂತ ಕಡಿಮೆ ಬೆಲೆಯ ಹಳದಿ ಬೋರ್ಡ್ ವಾಹನಗಳಿಗೆ ಶೇ 5 ರಿಂದ 7 ರಷ್ಟು ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಇದರಿಂದ ವಾಹನ ಖರೀದಿ ವೇಳೆ ಗಣನೀಯವಾಗಿ ಹೆಚ್ಚು ಬೆಲೆ ತೆರಬೇಕಾಗಿ ಬರಲಿದೆ. ಉಕ್ಕಿನ ಬೆಲೆ ಏರಿಕೆಯಿಂದಾಗಿ ವಾಹನ ತಯಾರಕರು ಕೂಡ ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ. ಇದು ವಾಹನ ಖರೀದಿದಾರರಿಗೆ ಒಟ್ಟೊಟ್ಟಿಗೆ ಎರಡೆರಡು ಆಘಾತ ನೀಡಲಿದೆ.

ಹೊಸ ವಾಹನ ಖರೀದಿ ಮಾಡುವವರಿಗೆ ಏಪ್ರಿಲ್ ನಿಂದ ಡಬಲ್ ಶಾಕ್! ಕಡಿಮೆ ದರದ ವಾಹನಕ್ಕೂ ತೆರಿಗೆ, ಬೆಲೆಯೂ ಏರಿಕೆ
ಸಾಂದರ್ಭಿಕ ಚಿತ್ರ
Follow us
Kiran Surya
| Updated By: Ganapathi Sharma

Updated on: Mar 27, 2025 | 11:04 AM

ಬೆಂಗಳೂರು, ಮಾರ್ಚ್ 27: ಏಪ್ರಿಲ್ 1ರಿಂದ ಹೊಸ ವಾಹನ ಖರೀದಿಗೆ ಸರ್ಕಾರದ ಹೊಸ ತೆರಿಗೆ ನೀತಿ (New Tax Rules) ಅನ್ವಯವಾಗಲಿದ್ದು, ಪರಿಣಾಮವಾಗಿ ವಾಹನ ಮಾಲೀಕರಿಗೆ ಎರಡೆರಡು ಆಘಾತ ಎದುರಾಗಲಿದೆ. ರಾಜ್ಯ ಸರ್ಕಾರವು (Karnataka Govt) 10 ಲಕ್ಷ ರೂ. ಒಳಗಿನ ಯೆಲ್ಲೋ ಬೋರ್ಡ್ (Yellow Board Vehicle) ವಾಹನ ಖರೀದಿಗೆ ಕೂಡ ಲೈಫ್ ಟೈಮ್ ಟ್ಯಾಕ್ಸ್ ವಿಧಿಸುವುದಾಗಿ ಬಜೆಟ್​​​ನಲ್ಲಿ ಘೋಷಿಸಿದೆ. ಇದರಿಂದಾಗಿ ಹೊಸ ವಾಹನ ಖರೀದಿಗೆ ಹೆಚ್ಚಿನ ವೆಚ್ಚ ತಗುಲಲಿದೆ.

ಎಷ್ಟು ಹೆಚ್ಚಾಗಲಿದೆ ವಾಹನ ದರ?

ಹತ್ತು ಲಕ್ಷ ರೂಪಾಯಿ ಮೊತ್ತದ ಒಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಶೇ 5 ರ ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿದ್ದು, ಸೆಸ್ ಸೇರಿ ಈ ಮೊತ್ತ ಶೇ 7 ಆಗುವ ಸಾಧ್ಯತೆಯಿದೆ. 10 ಲಕ್ಷ ರೂ. ಬೆಲೆಯ ಕಾರು ಖರೀದಿಸಿದರೆ, ವಾಹನ ಮಾಲೀಕರು ಸುಮಾರು 50 ಸಾವಿರದಿಂದ 70 ಸಾವಿರ ರೂ. ತೆರಿಗೆ ಪಾವತಿಸಬೇಕಾಗುತ್ತದೆ. ಈ ಹೊಸ ನಿಯಮವು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗಿದೆ.

ಕಳೆದ ವರ್ಷ ಹತ್ತು ಲಕ್ಷ ರೂಪಾಯಿ ಮೇಲಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಶೇ 11 ರ ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿತ್ತು. ಜೊತೆಗೆ ಶೇ 2 ರ ಸೆಸ್ ಸೇರಿ ಒಟ್ಟು ಶೇ 13 ರಷ್ಟು ತೆರಿಗೆ ವಿಧಿಸಲಾಗಿತ್ತು. ಈ ಬಾರಿ, ಹತ್ತು ಲಕ್ಷ ರೂಪಾಯಿ ವಾಹನಗಳಿಗೂ ಹೊಸ ನಿಯಮ ಅನ್ವಯಿಸಲಿದ್ದು, ಹೆಚ್ಚಿನ ವಾಹನ ಖರೀದಿದಾರರು ಆರ್ಥಿಕ ಹೊರೆ ಅನುಭವಿಸಬೇಕಾಗಲಿದೆ.

ಇದನ್ನೂ ಓದಿ
Image
ಬೆಂಗಳೂರು ಬುಕಿಂಗ್ ಮಾಫಿಯಾ: ಟಿಪ್ಸ್ ಹೆಸರಲ್ಲಿ ದುಪ್ಪಟ್ಟು ಹಣ ವಸೂಲಿ
Image
ಮೈಸೂರು ಕುಶಾಲನಗರ ಹೆದ್ದಾರಿ ನಿರ್ಮಾಣ: ಕೇಂದ್ರದಿಂದ ಗುಡ್ ನ್ಯೂಸ್
Image
ಕೋವಿಡ್ ಹಗರಣದ ವಿಸ್ತೃತ ಮಾಹಿತಿಗೆ ಮತ್ತೊಂದು‌ ಸಮಿತಿ: ಅಧಿಕಾರಿಗಳಿಗೂ ಢವಢವ
Image
ದೇವೇಗೌಡ, ಹೆಚ್​ಡಿಕೆ ಆಯ್ತು, ಇನ್ನಿಬ್ಬರು ನಾಯಕರ ಭೇಟಿಗೆ ಮುಂದಾದ ಸತೀಶ್‌

ಇದೇ ವೇಳೆ, 25 ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ಎಲೆಕ್ಟ್ರಿಕ್ ಕಾರುಗಳಿಗೆ ಶೇ 10 ರ ತೆರಿಗೆ ವಿಧಿಸಲಾಗಿದೆ. ಮಿನಿ ಲಾರಿಗಳಿಗೆ ಈ ಹಿಂದೆ ವಿಧಿಸಲಾಗುತ್ತಿದ್ದ ಶೇ 6 ರ ತೆರಿಗೆಯನ್ನು ಏಪ್ರಿಲ್‌ನಿಂದ ಶೇ 8 ಕ್ಕೆಹೆಚ್ಚಿಸಲಾಗಿದೆ.

ವಾಹನ ಬೆಲೆಯೂ ಹೆಚ್ಚಳ

ಇನ್ನು, ಉಕ್ಕಿನ ಬೆಲೆ ಏರಿಕೆಯ ಹೆಸರಲ್ಲಿ ವಾಹನ ತಯಾರಿಕಾ ಕಂಪನಿಗಳು ಏಪ್ರಿಲ್ 1ರಿಂದ ಶೇ 3 ರಿಂದ 4 ರಷ್ಟು ದರ ಹೆಚ್ಚಳ ಮಾಡಲು ತಯಾರಿ ನಡೆಸುತ್ತಿದ್ದು, ಇದು ಹೊಸ ವಾಹನ ಖರೀದಿದಾರರಿಗೆ ಮತ್ತೊಂದು ಆಘಾತವಾಗಲಿದೆ.

ಇದನ್ನೂ ಓದಿ: ಬೆಂಗಳೂರು ಬುಕಿಂಗ್ ಮಾಫಿಯಾ: ಟಿಪ್ಸ್ ಹೆಸರಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಕ್ಯಾಬ್​ಗಳು

ನೂತನ ತೆರಿಗೆ ನಿಯಮಗಳು ಮತ್ತು ವಾಹನ ದರ ಏರಿಕೆಯಿಂದ, ಹೊಸ ವಾಹನ ಖರೀದಿಗೆ ಮುಂದಾಗುತ್ತಿರುವ ಜನತೆ ಹೆಚ್ಚಿನ ಹಣ ವಿನಿಯೋಗಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್