ಸ್ನೇಹಿತನ ಕೈ ಅಳತೆಯಲ್ಲೇ ಕ್ವಾರಿ ನೀರಲ್ಲಿ ಮುಳುಗಿ ಯುವಕನ ಸಾವು

|

Updated on: Nov 16, 2019 | 11:23 AM

ಕಲಬುರಗಿ: ನಗರದ ರಾಣೇಶಪೀರ್ ದರ್ಗಾ ಬಳಿಯ ಕಲ್ಲು ಕ್ವಾರಿಯಲ್ಲಿ ಈಜುವ ವೇಳೆ ಸ್ನೇಹಿತನ ಕೈಯಳತೆಯಲ್ಲೇ ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ. ಮಿಜಗುರಿ ಬಡಾವಣೆ ನಿವಾಸಿ ಜಾಫರ್(22) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ನಿನ್ನೆ ಸ್ನೇಹಿತರ ಜೊತೆ ಕ್ವಾರಿಯಲ್ಲಿ ಈಜಲು ಜಾಫರ್ ತೆರಳಿದ್ದ. ಎಲ್ಲರೂ ಸುಮಾರು ಹೊತ್ತು ಕಲ್ಲು ಕ್ವಾರಿಯ ನೀರಿನಲ್ಲಿ ಈಜಾಡಿದ್ದರು. ಈಜಾಡುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗುತ್ತಿತ್ತು. ಕೊನೆಯಲ್ಲಿ ಮತ್ತೊಮ್ಮೆ ಕ್ವಾರಿ ನೀರಿಗೆ ಜಿಗಿದಿದ್ದ ಜಾಫರ್ ಹೊರಗೆ ಬರ್ತಾನೆಂದು ಸ್ನೇಹಿತರು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಆದ್ರೆ, […]

ಸ್ನೇಹಿತನ ಕೈ ಅಳತೆಯಲ್ಲೇ ಕ್ವಾರಿ ನೀರಲ್ಲಿ ಮುಳುಗಿ ಯುವಕನ ಸಾವು
Follow us on

ಕಲಬುರಗಿ: ನಗರದ ರಾಣೇಶಪೀರ್ ದರ್ಗಾ ಬಳಿಯ ಕಲ್ಲು ಕ್ವಾರಿಯಲ್ಲಿ ಈಜುವ ವೇಳೆ ಸ್ನೇಹಿತನ ಕೈಯಳತೆಯಲ್ಲೇ ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.

ಮಿಜಗುರಿ ಬಡಾವಣೆ ನಿವಾಸಿ ಜಾಫರ್(22) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ನಿನ್ನೆ ಸ್ನೇಹಿತರ ಜೊತೆ ಕ್ವಾರಿಯಲ್ಲಿ ಈಜಲು ಜಾಫರ್ ತೆರಳಿದ್ದ. ಎಲ್ಲರೂ ಸುಮಾರು ಹೊತ್ತು ಕಲ್ಲು ಕ್ವಾರಿಯ ನೀರಿನಲ್ಲಿ ಈಜಾಡಿದ್ದರು. ಈಜಾಡುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗುತ್ತಿತ್ತು.

ಕೊನೆಯಲ್ಲಿ ಮತ್ತೊಮ್ಮೆ ಕ್ವಾರಿ ನೀರಿಗೆ ಜಿಗಿದಿದ್ದ ಜಾಫರ್ ಹೊರಗೆ ಬರ್ತಾನೆಂದು ಸ್ನೇಹಿತರು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಆದ್ರೆ, ಸುಸ್ತಾಗಿ ನೀರಲ್ಲಿ ಮುಳುಗಿ ಜಾಫರ್ ಮೃತಪಟ್ಟಿದ್ದಾನೆ. ಕಲಬುರಗಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 10:24 am, Sat, 16 November 19