ರಾಜ್ಯೋತ್ಸವ ಮಾಸಾಚರಣೆ ಸಮಯದಲ್ಲಿ ಈ ಶಿಕ್ಷಕಿಗೆ ಒಂದು ಅಭಿನಂದನೆ ಸಲ್ಲಿಸೋಣ..!

ತುಮಕೂರು: ಇದು ಕನ್ನಡ ರಾಜ್ಯೋತ್ಸವ ಮಾಸಾಚರಣೆ ಸಂದರ್ಭ. ಹಾಗಾಗಿ ಕನ್ನಡಾಂಬೆಯ ಸೇವೆ ನಾನಾ ಸ್ವರೂಪಗಳಲ್ಲಿ ನಡೆಯುತ್ತದೆ. ಅದರಲ್ಲೂ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರ ತನುಮನದ ಈ ಸೇವೆ ನೋಡಿದರೆ ಕೇಳಿದರೆ ಖಂಡಿತಾ ಆ ಮಕ್ಕಳಲ್ಲಷ್ಟೇ ಅಲ್ಲ ಎಲ್ಲರಲ್ಲೂ ಧನ್ಯತಾಭಾವ ಮೂಡುತ್ತದೆ. ಇಂತಹ ಶಿಕ್ಷಕಿಯನ್ನು ಪಡೆದ ಕನ್ನಡಿಗರು ನಿಜಕ್ಕೂ ಧನ್ಯರೇ ಸರಿ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಿಂದ ನೃತ್ಯದ ಮೂಲಕ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಕನ್ನಡದ ವರ್ಣಮಾಲೆ ಬೋಧಿಸಲು ಹಳೆಯ ಸುಮಧುರ ಕನ್ನಡ ಚಿತ್ರಗೀತೆಗೆ ಹೆಜ್ಜೆ ಹಾಕುತ್ತಾ, ತಾಳ ಹಾಕುತ್ತಾ.. […]

ರಾಜ್ಯೋತ್ಸವ ಮಾಸಾಚರಣೆ ಸಮಯದಲ್ಲಿ ಈ ಶಿಕ್ಷಕಿಗೆ ಒಂದು ಅಭಿನಂದನೆ ಸಲ್ಲಿಸೋಣ..!
Follow us
ಸಾಧು ಶ್ರೀನಾಥ್​
|

Updated on:Nov 16, 2019 | 12:41 PM

ತುಮಕೂರು: ಇದು ಕನ್ನಡ ರಾಜ್ಯೋತ್ಸವ ಮಾಸಾಚರಣೆ ಸಂದರ್ಭ. ಹಾಗಾಗಿ ಕನ್ನಡಾಂಬೆಯ ಸೇವೆ ನಾನಾ ಸ್ವರೂಪಗಳಲ್ಲಿ ನಡೆಯುತ್ತದೆ. ಅದರಲ್ಲೂ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರ ತನುಮನದ ಈ ಸೇವೆ ನೋಡಿದರೆ ಕೇಳಿದರೆ ಖಂಡಿತಾ ಆ ಮಕ್ಕಳಲ್ಲಷ್ಟೇ ಅಲ್ಲ ಎಲ್ಲರಲ್ಲೂ ಧನ್ಯತಾಭಾವ ಮೂಡುತ್ತದೆ. ಇಂತಹ ಶಿಕ್ಷಕಿಯನ್ನು ಪಡೆದ ಕನ್ನಡಿಗರು ನಿಜಕ್ಕೂ ಧನ್ಯರೇ ಸರಿ.

ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಿಂದ ನೃತ್ಯದ ಮೂಲಕ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಕನ್ನಡದ ವರ್ಣಮಾಲೆ ಬೋಧಿಸಲು ಹಳೆಯ ಸುಮಧುರ ಕನ್ನಡ ಚಿತ್ರಗೀತೆಗೆ ಹೆಜ್ಜೆ ಹಾಕುತ್ತಾ, ತಾಳ ಹಾಕುತ್ತಾ.. ಮಕ್ಕಳನ್ನೂ ಭಾಗಿಯಾಗಿಸುತ್ತಾ ತನ್ಮಯರಾಗಿ ಪಾಠ ಹೇಳಿಕೊಟ್ಟಿದ್ದಾರೆ.

ಗಮನಾರ್ಹವೆಂದ್ರೆ ಶಿಕ್ಷಕಿ ಹಾಗೂ ಮಕ್ಕಳ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೃತ್ಯ ಮಾಡುತ್ತಾ ಹೀಗೆ ಪಾಠ ಹೇಳಿಕೊಟ್ಟ ಈ ಶಿಕ್ಷಕಿಯ ಬಗ್ಗೆ ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.‌

ಆದರೆ, ಅ ಆ ಇ ಈ ಕನ್ನಡದ ಅಕ್ಷರಮಾಲೆ ಹಾಡಿಗೆ ನೃತ್ಯ ಮಾಡುತ್ತಾ ಪಾಠ ಹೇಳಿದ ಶಿಕ್ಷಕಿಯ ಹೆಸರು ಮತ್ತು ಶಾಲೆ ಯಾವುದು ಎಂಬುದನ್ನು ಪ್ರಸ್ತಾಪಿಸದೆ ವಿಡಿಯೋ ವೈರಲ್ ಆಗಿದೆ. ನೀವೂ ಒಮ್ಮೆ ಕೇಳಿ ನೋಡಿ ಧನ್ಯರಾಗಿ!

https://www.instagram.com/tv/B46orX3n_7d/?utm_source=ig_web_copy_link

ಅ ಆ..ಅ ಆ.. ಇ ಈ..ಇ ಈ.. ಅ ಆ ಇ ಈ ಕನ್ನಡದ ಅಕ್ಷರಮಾಲೆ ಅ ಅ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ ||ಅ ಆ|| ಆ ಆ (ಆಟ ಊಟ ಓಟ ಕನ್ನಡ ಒಂದನೆ ಪಾಠ) ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ 2||ಅ ಆ|| ಇ ಇ (ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು) ಈ ಈ (ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು) 2||ಅ ಆ|| ಉ ಉ (ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ) ಊ ಊ (ಊರಿಗೆ ದ್ರೋಹ ಮಾಡಿ ಬದುಕಲೆನಿಸಬೇಡ) 2||ಅ ಆ|| ಋ ೠ ಎ ಏ ಐ.. ಭಾರತ ಮಾತೆಗೆ ಜೈ ! ಒ ಒ (ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು) ಓ ಓ (ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು) 2||ಅ ಆ|| ಔ ಅಂ ಅಃ..ಔ ಅಂ ಅಃ.. ಅಃ.. ಆಹಾ.. ಆಹ ಹ ಹ ಹ

Published On - 12:23 pm, Sat, 16 November 19

ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ