ಹಿಂಬಾಲಿಸಿ ಮಹಿಳೆಯ ಸರ ಕದ್ರು, ಪೊಲೀಸ್ರು ಹಿಡಿಯಲು ಬಂದಾಗ ಬೈಕ್ ಬಿಟ್ಟು ಓಡಿದ್ರು
ಮೈಸೂರು: ಸ್ನೇಹಿತೆ ಮನೆಗೆ ಹೋಗಿ ವಾಪಸ್ಸು ಮನೆಗೆ ಬರುವ ವೇಳೆ ಹಿಂಬಾಲಿಸಿ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ. ವಿದ್ಯಾರಣ್ಯಪುರಂ ನಿವಾಸಿ ಗೌರಮ್ಮ ಎಂಬುವವರ 30 ಗ್ರಾಂ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ. ಗೌರಮ್ಮ ತನ್ನ ಸ್ನೇಹಿತೆ ಮನೆಗೆ ಹೋಗಿ ವಾಪಸ್ಸು ಮನೆಗೆ ಬರುವ ವೇಳೆ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಈ ವೇಳೆ ವಿಷಯ ತಿಳಿಯುತ್ತಿದ್ದಂತೆ ಕಳ್ಳರನ್ನು ಹಿಡಿಯಲು ಪೊಲೀಸರು ಪ್ರಯತ್ನಿಸಿದ್ದಾರೆ. ಆಗ ಬೈಕ್ ಬಿಟ್ಟು ಸರಗಳ್ಳರು ಪರಾರಿಯಾಗಿದ್ದಾರೆ. […]

ಮೈಸೂರು: ಸ್ನೇಹಿತೆ ಮನೆಗೆ ಹೋಗಿ ವಾಪಸ್ಸು ಮನೆಗೆ ಬರುವ ವೇಳೆ ಹಿಂಬಾಲಿಸಿ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.
ವಿದ್ಯಾರಣ್ಯಪುರಂ ನಿವಾಸಿ ಗೌರಮ್ಮ ಎಂಬುವವರ 30 ಗ್ರಾಂ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ. ಗೌರಮ್ಮ ತನ್ನ ಸ್ನೇಹಿತೆ ಮನೆಗೆ ಹೋಗಿ ವಾಪಸ್ಸು ಮನೆಗೆ ಬರುವ ವೇಳೆ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.
ಈ ವೇಳೆ ವಿಷಯ ತಿಳಿಯುತ್ತಿದ್ದಂತೆ ಕಳ್ಳರನ್ನು ಹಿಡಿಯಲು ಪೊಲೀಸರು ಪ್ರಯತ್ನಿಸಿದ್ದಾರೆ. ಆಗ ಬೈಕ್ ಬಿಟ್ಟು ಸರಗಳ್ಳರು ಪರಾರಿಯಾಗಿದ್ದಾರೆ. ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




