ಡ್ರಗ್ಸ್​ ದಂಧೆ: BJP ರಾಜ್ಯ ಉಪಾಧ್ಯಕ್ಷ BY ವಿಜಯೇಂದ್ರ ಹೇಳಿದ್ದೇನು?

ಡ್ರಗ್ಸ್​ ದಂಧೆ: BJP ರಾಜ್ಯ ಉಪಾಧ್ಯಕ್ಷ BY ವಿಜಯೇಂದ್ರ ಹೇಳಿದ್ದೇನು?

ಮಂಡ್ಯ: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿರುವ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳ ಬಗ್ಗೆ ಹೊಗಳಿದ್ದಾರೆ.

ಬಿಜೆಪಿ ಪಕ್ಷದ ಯಾವುದೇ ಮುಖಂಡ ಡ್ರಗ್ಸ್ ಮಾಫಿಯಾದಲ್ಲಿದ್ದರೆ, ಅವರಿಗೆ ನಮ್ಮ ಸರಕಾರ ಬೆಂಬಲ ನೀಡುವುದಿಲ್ಲ. ಡ್ರಗ್ಸ್​ ದಂಧೆಯನ್ನ ಬುಡಸಮೇತ ಕೀಳುವವರೆಗೆ ನಮ್ಮ ಹೋರಾಟ ನಡೆಯುತ್ತೆ ಎಂದು ಮಂಡ್ಯದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ರು.

ಡ್ರಗ್ಸ್‌ನಿಂದ ಯುವಪೀಳಿಗೆ ಅಡ್ಡದಾರಿ ಹಿಡಿಯುತ್ತಿದೆ. ಡ್ರಗ್ ದಂಧೆ ಮಟ್ಟಹಾಕಲು ಬಿಜೆಪಿ ಸರ್ಕಾರ ಕಟಿಬದ್ಧ. ಕಳೆದ ಉಪ ಚುನಾವಣೆಯಲ್ಲಿ ನಟಿ ರಾಗಿಣಿ, ಬಿಜೆಪಿ ಪರ ಕ್ಯಾಂಪೇನ್ ಮಾಡಿದ್ದು ನಿಜ. ಆದ್ರೆ ಚಿತ್ರನಟ-ನಟಿಯರು ಒಂದೇ ಪಕ್ಷದ ಪರ ಪ್ರಚಾರ ಮಾಡಿದ ಉದಾಹರಣೆ ಇಲ್ಲ. ಒಂದೇ ಚುನಾವಣೆಯಲ್ಲಿ ಬೇರೆ ಬೇರೆ ಪಕ್ಷದ ಪರ ಪ್ರಚಾರ ಮಾಡಿದ್ದಾರೆ. ರಾಗಿಣಿ ಬಿಜೆಪಿ ಸೇರಿಲ್ಲ, ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ ಅಷ್ಟೇ. ಡ್ರಗ್ಸ್ ದಂಧೆ ನಿನ್ನೆ ಮೊನ್ನೆಯದ್ದಲ್ಲ, ಬಿಜೆಪಿ ಸರ್ಕಾರದಿಂದ ದಂಧೆ ತಡೆಯಲು ದಿಟ್ಟ ಕ್ರಮ ಕೈಗೊಳ್ಳಲಾಗುತ್ತೆ. ಡ್ರಗ್ಸ್ ಮಾಫಿಯಾ ಸಣ್ಣ ವಿಚಾರ ಅಲ್ಲ ಎಂದರು.

ನೆರೆ ರಾಷ್ಟ್ರಗಳಲ್ಲಿ ಗಾಂಜಾ ಬೆಳೆದು ದೇಶದ ನಾನಾ ಭಾಗಗಳಿಗೆ ಸಪ್ಲೆ ಮಾಡುವ ಮೂಲಕ ಯವಶಕ್ತಿ ಕುಂದಿಸುವ ಕೆಲಸ ಮಾಡಲಾಗ್ತಿದೆ. ಡ್ರಗ್ ಮುಕ್ತ ಕರ್ನಾಟಕ ನಿರ್ಮಾಣದ ಸವಾಲನ್ನು ಬಿಜೆಪಿ ಸ್ವೀಕರಿಸಿದೆ. ಈ ಕೆಲಸಕ್ಕೆ ಸಾರ್ವಜನಿಕರ ಸಹಕಾರವು ಅತ್ಯಗತ್ಯ. ರಾಗಿಣಿಗೆ ರಾಜಕೀಯ ಬೆಂಬಲ ಇದ್ದಿದ್ದರೆ ಅವರು ಅರೆಸ್ಟ್ ಆಗ್ತಿರಲಿಲ್ಲ. ನಮ್ಮ ಯಾವುದೇ ಒಬ್ಬ ಮುಖಂಡ ಡ್ರಗ್ ಮಾಫಿಯಾದಲ್ಲಿದ್ದರೆ ಅವ್ರಿಗೆ ನಮ್ಮ ಸಹಕಾರ ಇಲ್ಲ. ಈ ವಿಚಾರದಲ್ಲಿ ಸರ್ಕಾರ ಹಿಟ್ ಅಂಡ್ ರನ್ ಮಾಡಲ್ಲ ಎಂದು ಖಡಕ್ ಆಗಿ ಸರ್ಕಾರದ ಪರ ಬ್ಯಾಟಿಂಗ್ ಮಾಡಿದ್ದಾರೆ.

Click on your DTH Provider to Add TV9 Kannada