ಕುಟುಂಬದ ನಾಲ್ವರಿಗೆ ಪಾಸಿಟಿವ್, 7 ಜನರ ಆರೋಗ್ಯ ಏರುಪೇರು: BBMP ಡೊಂಟ್ ಕೇರ್

  • TV9 Web Team
  • Published On - 11:42 AM, 20 Jul 2020
ಕುಟುಂಬದ ನಾಲ್ವರಿಗೆ ಪಾಸಿಟಿವ್, 7 ಜನರ ಆರೋಗ್ಯ ಏರುಪೇರು: BBMP ಡೊಂಟ್ ಕೇರ್

[lazy-load-videos-and-sticky-control id=”OtmWQYOUIvU”]

ಬೆಂಗಳೂರು: ಬಿಬಿಎಂಪಿ ಹಾಗೂ ಆರೊಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಈಗಾಗಲೇ ಬೇಸತ್ತು ಹೋಗಿರುವ ಬೆಂಗಳೂರಿಗರು, ಆಡಳಿತ ವರ್ಗಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಇದು ಸಾಲಾದೆಂಬಂತೆ ಅಧಿಕಾರಿಗಳ ಎಡವಟ್ಟಿನ ಪುರಾಣ ನಗರದ ಜನರ ನಿದ್ದೆಗೆಡಿಸಿದೆ.

ಇದಕ್ಕೆ ತಕ್ಕೆ ಉದಾಹರಣೆ ಎಂಬಂತೆ ಬೆಂಗಳೂರಿನ ಕತ್ರಿಗುಪ್ಪೆಯ ಭುವನೇಶ್ವರ ನಗರದ ಒಂದೇ ಮನೆಯಲ್ಲಿ ನಾಲ್ಕು ಜನಕ್ಕೆ ಕೊರೊನಾ ಪಾಸಿಟಿವ್ ಬಂದು ನರಳುತ್ತಿದ್ದು, ಆರೊಗ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಜೊತೆಗೆ ಮನೆಯನ್ನು ಸ್ಯಾನಿಟೈಸ್ ಮಾಡಿಲ್ಲ.

ಮೊದಲು ಇದೇ ಕುಟುಂದ ವೃದ್ಧರೊಬ್ಬರಿಗೆ ಕೊರೊನಾ ತಗುಲ್ಲಿತ್ತು, ಮನೆಯವರು ವೃದ್ಧನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಈಗ ಕುಟುಂಬದ 4 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ನಿನ್ನೆ ಬೆಳಿಗ್ಗೆಯಿಂದಲೂ ಆರೊಗ್ಯ ಇಲಾಖೆಯ ಅಧಿಕಾರಿಗಳಿಗಾಗಿ ಕಾದು ಕುಳಿತರು ಏನು ಪ್ರಯೋಜನವಾಗಿಲ್ಲ. ಸದ್ಯ ಕುಟುಂಬದಲ್ಲಿ ಏಳು ಜನ ಇದ್ದು ಎಲ್ಲರಿಗೂ ಆರೋಗ್ಯದಲ್ಲಿ ಏರು ಪೇರಾಗಿದೆ. ಇದರಿಂದ ಹೆದರಿರುವ ಕುಟುಂಬಸ್ಥರು ಬೇಗ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಅಂತ ತಮ್ಮ ಅಳಲು ತೋಡಿಕೊಂಡಿದ್ದಾರೆ.