ರಾಜಸ್ಥಾನ: ಹೆಂಡತಿ ಆಸೆಗಳನ್ನು ಪೂರೈಸಲು ಒಳ್ಳೆಯ ಉದ್ಯೋಗ ಬಿಟ್ಟು ಕಳ್ಳನಾದ ಗಂಡ
ಪತ್ನಿಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಗಂಡ ಕಳ್ಳನಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆರೋಪಿ ತರುಣ್ ಪರೀಕ್‌ನನ್ನು ಮದುವೆಯಾದ ಒಂದು ತಿಂಗಳ ನಂತರ ಪೊಲೀಸರು ಬಂಧಿಸಿದ್ದಾರೆ.ಪೊಲೀಸರ ಪ್ರಕಾರ,ತನ್ನ ಹೆಂಡತಿಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಅವನು ಅಪರಾಧದ ಮಾರ್ಗವನ್ನು ಆರಿಸಿಕೊಂಡಿದ್ದಾನೆ. ಜಾಮ್‌ವರಮ್‌ಗಢ ಗ್ರಾಮದ ನಿವಾಸಿ ತರುಣ್ ಕಳ್ಳತನ ಮಾಡಲು ಜೈಪುರಕ್ಕೆ ಪ್ರಯಾಣಿಸುತ್ತಿದ್ದ.

ರಾಜಸ್ಥಾನ, ಜುಲೈ 27: ಮದುವೆ(Marriage)ಯಾದ ಬಳಿಕ ಹೆಣ್ಣುಮಕ್ಕಳು ಗಂಡನಿಂದ ಕೆಲವು ಅಪೇಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ. ಆದರೆ ಅವುಗಳನ್ನು ಈಡೇರಿಸಲು ಸಾಧ್ಯವಾಗದಿದ್ದಾಗ ಆಕೆಗೆ ಬುದ್ಧಿ ಹೇಳುವ ಬದಲು ಪತಿ ಕಳ್ಳತನಕ್ಕಿಳಿದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮದುವೆಯಾಗಿ ಕೆಲವೇ ದಿನಗಳು ಕಳೆದಿತ್ತು, ಹೆಂಡತಿಯ ಆಸೆಗಳನ್ನು ಪೂರೈಸಲು ಗಂಡ ಕಳ್ಳತನಕ್ಕಿಳಿದಿದ್ದಾನೆ. ಮದುವೆಯಾಗಿ ಸ್ವಲ್ಪ ದಿನದಲ್ಲೇ ಆತ ಕೆಲಸ ಬಿಟ್ಟು ಕಳ್ಳತನದ ಕಸುಬನ್ನು ಆರಿಸಿಕೊಂಡಿದ್ದ.
ಆರೋಪಿ ತರುಣ್ ಪರೀಕ್‌ನನ್ನು ಮದುವೆಯಾದ ಒಂದು ತಿಂಗಳ ನಂತರ ಪೊಲೀಸರು ಬಂಧಿಸಿದ್ದಾರೆ.ಪೊಲೀಸರ ಪ್ರಕಾರ,ತನ್ನ ಹೆಂಡತಿಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಅವನು ಅಪರಾಧದ ಮಾರ್ಗವನ್ನು ಆರಿಸಿಕೊಂಡಿದ್ದಾನೆ. ಜಾಮ್‌ವರಮ್‌ಗಢ ಗ್ರಾಮದ ನಿವಾಸಿ ತರುಣ್ ಕಳ್ಳತನ ಮಾಡಲು ಜೈಪುರಕ್ಕೆ ಪ್ರಯಾಣಿಸುತ್ತಿದ್ದ. ಅಧಿಕಾರಿಗಳ ಪ್ರಕಾರ, ಅನುಮಾನ ಬರದಂತೆ ತನ್ನ ಅಪರಾಧಗಳನ್ನು ಸೂಕ್ಷ್ಮವಾಗಿ ಯೋಜಿಸುತ್ತಿದ್ದ.
ಪ್ರಾಥಮಿಕ ತನಿಖೆಯಲ್ಲಿ ಪತ್ನಿ ಹಣ ಮತ್ತು ಐಷಾರಾಮಿ ಜೀವನ ಶೈಲಿ ನಮ್ಮದಾಗಬೇಕು ಎಂದು ಒತ್ತಡ ಹೇರುತ್ತಿದ್ದಳು. ಈ ಒತ್ತಡಕ್ಕೆ ಮಣಿದ ತರುಣ್ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಾಹಕ ಹುದ್ದೆಯನ್ನು ತ್ಯಜಿಸಿ, ಹೆಂಡತಿಯ ಬೇಡಿಕೆಗಳನ್ನು ಈಡೇರಿಸಲು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಓದಿ: ಇಂದೋರ್: ಕಳ್ಳತನ ಆರೋಪ, ಗುಂಪಿನಿಂದ ಹಲ್ಲೆ, 40 ಮೂಳೆಗಳು ಮುರಿತ, ವ್ಯಕ್ತಿ ಸಾವು
ಜೈಪುರದ ಟ್ರಾನ್ಸ್‌ಪೋರ್ಟ್ ನಗರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಸರಣಿ ಕಳ್ಳತನ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ. ಹಾಡಹಗಲಲ್ಲಿ ವೃದ್ಧೆಯ ಚಿನ್ನದ ಸರವನ್ನು ಕದ್ದಿದ್ದ, ಈ ಘಟನೆ ಸ್ಥಳೀಯರಲ್ಲಿ ಭೀತಿ ಮೂಡಿಸಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಪೊಲೀಸರು ತರುಣ್ ಅವರ ಗ್ರಾಮ ಮತ್ತು ನಗರದ ನಡುವಿನ ಚಲನವಲನಗಳನ್ನು ಪತ್ತೆಹಚ್ಚಿ ಶುಕ್ರವಾರ ಆತನನ್ನು ಬಂಧಿಸಿದ್ದಾರೆ.
ತರುಣ್ ಎಷ್ಟು ಅಪರಾಧಗಳನ್ನು ಮಾಡಿದ್ದಾನೆ ಮತ್ತು ಅವನಿಗೆ ಯಾರಾದರೂ ಸಹಚರರು ಇದ್ದಾರೆಯೇ ಎಂದು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತನ ಪತ್ನಿಗೆ ಆತನ ಅಪರಾಧ ಚಟುವಟಿಕೆಗಳ ಬಗ್ಗೆ ತಿಳಿದಿತ್ತೇ ಎಂಬ ಬಗ್ಗೆಯೂ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




