AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರದ ತವರು ಕೋಲಾರದಲ್ಲಿ ನೀರಾ‘ವರಿ’ ಇಲ್ಲದೆ ಬಂಗಾರದಂಥ ಬೆಳೆ ತೆಗೆಯುತ್ತಿರುವ ಕೃಷಿಕ!

ಅದು ಬರಗಾಲಕ್ಕೆ ತವರೂರು, ಅಲ್ಲಿ ಸರಿಯಾಗಿ ಮಳೆಯೂ ಬರಲ್ಲ, ನದಿ ನಾಲೆಗಳೂ ಇಲ್ಲಾ, ಹೀಗಿದ್ರು ಆ ಊರಿನ ರೈತನೊಬ್ಬ ಗ್ರಾಮದಲ್ಲಿ ಮಾಡಿಕೊಂಡಿರುವ ಒಂದು ಮಹತ್ತರ ಯೋಜನೆ, ಇವತ್ತು ಇಡೀ ಗ್ರಾಮಕ್ಕೆ ಗ್ರಾಮವೇ ಬೆರಗಾಗಿ ನೋಡುವಂತೆ ಮಾಡಿದೆ ಅಷ್ಟೇ ಅಲ್ಲಾ ಅವನೊಬ್ಬ ಕೃಷಿ ಸಾಧಕ ಎನ್ನುವಂತಾಗಿದೆ.. ಅಷ್ಟಕ್ಕೂ ಆ ರೈತ ಮಾಡಿದ ಸಾಧನೆ ಏನು ಹೇಳ್ತಿವಿ ನೋಡಿ.. ಊರಿನ ಕೊಳಚೆ ನೀರಲ್ಲಿ ಸೊಂಪಾದ ಫಸಲು..! ಫಲವತ್ತಾಧ ಭೂಮಿಯಲ್ಲಿ ಸೊಂಪಾಗಿ ಬೆಳೆದು ನಿಂತಿರುವ ಸೀಬೆ ಹಾಗೂ ಕುಂಬಳಕಾಯಿ ತೋಟ, ಮತ್ತೊಂದೆಡೆ […]

ಬರದ ತವರು ಕೋಲಾರದಲ್ಲಿ ನೀರಾ‘ವರಿ’ ಇಲ್ಲದೆ ಬಂಗಾರದಂಥ ಬೆಳೆ ತೆಗೆಯುತ್ತಿರುವ ಕೃಷಿಕ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Sep 01, 2020 | 11:28 AM

Share

ಅದು ಬರಗಾಲಕ್ಕೆ ತವರೂರು, ಅಲ್ಲಿ ಸರಿಯಾಗಿ ಮಳೆಯೂ ಬರಲ್ಲ, ನದಿ ನಾಲೆಗಳೂ ಇಲ್ಲಾ, ಹೀಗಿದ್ರು ಆ ಊರಿನ ರೈತನೊಬ್ಬ ಗ್ರಾಮದಲ್ಲಿ ಮಾಡಿಕೊಂಡಿರುವ ಒಂದು ಮಹತ್ತರ ಯೋಜನೆ, ಇವತ್ತು ಇಡೀ ಗ್ರಾಮಕ್ಕೆ ಗ್ರಾಮವೇ ಬೆರಗಾಗಿ ನೋಡುವಂತೆ ಮಾಡಿದೆ ಅಷ್ಟೇ ಅಲ್ಲಾ ಅವನೊಬ್ಬ ಕೃಷಿ ಸಾಧಕ ಎನ್ನುವಂತಾಗಿದೆ.. ಅಷ್ಟಕ್ಕೂ ಆ ರೈತ ಮಾಡಿದ ಸಾಧನೆ ಏನು ಹೇಳ್ತಿವಿ ನೋಡಿ..

ಊರಿನ ಕೊಳಚೆ ನೀರಲ್ಲಿ ಸೊಂಪಾದ ಫಸಲು..! ಫಲವತ್ತಾಧ ಭೂಮಿಯಲ್ಲಿ ಸೊಂಪಾಗಿ ಬೆಳೆದು ನಿಂತಿರುವ ಸೀಬೆ ಹಾಗೂ ಕುಂಬಳಕಾಯಿ ತೋಟ, ಮತ್ತೊಂದೆಡೆ ಸಣ್ಣ ಕಾಲುವೆ ಮೂಲಕ ಹರಿಯುತ್ತಿರುವ ಗ್ರಾಮದ ತ್ಯಾಜ್ಯ ನೀರು, ಅದನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿರುವ ರೈತ! ಈ ಎಲ್ಲಾ ದೃಶ್ಯಗಳು ಕಂಡು ಬಂರುವುದು ಕೋಲಾರ ತಾಲ್ಲೂಕು ಜಂಗಮಗುರ್ಜೇನಹಳ್ಳಿ ಗ್ರಾಮದಲ್ಲಿ.

ಹೌದು ಈ ಭಾಗದಲ್ಲಿ ಸರಿಯಾಗಿ ಮಳೆ ಬೀಳೋದಿಲ್ಲ, ಅಂತರ್ಜಲವಂತೂ ಪಾತಾಳ ಸೇರಿದೆ. ಇಂಥ ದುರ್ಭರ ಪರಿಸ್ಥಿತಿಯಲ್ಲಿ ವ್ಯವಸಾಯ ಅನ್ನೋದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಆದರೆ ಗ್ರಾಮದ ಶಿವಮೂರ್ತಿ ಎಂಬ ರೈತ ತನ್ನ ಎರಡು ಎಕರೆ ಭೂಮಿಯಲ್ಲಿ ಸವಾಲಿನ ಕೃಷಿ ಮಾಡಲು ನಿಂತರು. ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಅಲಹಾಬಾದ್​ ಸೀಬೆ ತಳಿಯನ್ನು ತಂದು ನಾಟಿ ಮಾಡಿ, ನೀರಿಲ್ಲದ ಪರಿಸ್ಥಿತಿಯಲ್ಲಿ ತಮ್ಮ ಭೂಮಿಯಲ್ಲಿ ಎಳೆಯತೊಡಗಿದರು.

ಇದಕ್ಕೆ ‘ನೀರೆರೆದಿದ್ದು’ ಮಾತ್ರ ಇಡೀ ಗ್ರಾಮದ ಕೊಳಚೆ ನೀರನ್ನು. ಒಂದು ಕೃಷಿ ಹೊಂಡ ಮಾಡಿ ಕೊಂಡು ಅದರಲ್ಲಿ ಕೊಳಚೆ ನೀರನ್ನು ಶೇಖರಿಸಿಕೊಂಡು ಹನಿ ನೀರಾವರಿ ಮೂಲಕ ತಮ್ಮ ಸೀಬೆ ಗಿಡಗಳಿಗೆ ಹಾಯಿಸಿದ್ರು. ಆರಂಭದಲ್ಲಿ ಇದು ಗ್ರಾಮದಲ್ಲಿ ನಗೆಪಾಟಲಿಗೆ ಎಡೆಮಾಡಿ ಕೊಟ್ಟಿತ್ತಾದ್ರು ದಿನ ಕಳೆದಂತೆ ಶಿವಮೂರ್ತಿ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗುತ್ತಾ ಬಂದ್ರು. ಪರಿಣಾಮ ಸೀಬೆ ಬೆಳೆಯು ಭರ್ಜರಿಯಾಗಿ ಬೆಳೆದು ನಿಂತಿದ್ದು ಅದರಲ್ಲೇ ಪರ್ಯಾಯ ಬೆಳೆಯಾಗಿ ಕುಂಬಳಕಾಯಿ ಕೂಡಾ ಭರ್ಜರಿ ಫಸಲು ಕೊಟ್ಟಿದೆ.

ಆರಂಭದಲ್ಲಿ ಆಡಿಕೊಂಡವರಿಂದಲೇ ಶಹಬ್ಬಾಶ್​ಗಿರಿ.. ಜಂಗಮಗುರ್ಜೇನಹಳ್ಳಿ ಗ್ರಾಮದಲ್ಲಿ ಸುಮಾರು 250 ಮನೆಗಳಿವೆ. ಗ್ರಾಮದ ಎಲ್ಲಾ ಮನೆಗಳಲ್ಲಿ ಪ್ರತಿನಿತ್ಯ ಬಳಸುವ ನೀರನ್ನು ಊರ ಹೊರಗಿನ ಸರ್ಕಾರಿ ಹೊಂಡದಲ್ಲಿ ಶೇಖರಿಸಲಾಗುತ್ತದೆ. ಅಲ್ಲಿಂದ ಸಣ್ಣ ಕಾಲುವೆ ಮೂಲಕ ನೀರನ್ನು ತಮ್ಮ ಜಮೀನಿನ ವರೆಗೂ ಹರಿಸುವ ಶಿವಮೂರ್ತಿ ತ್ಯಾಜ್ಯ ನೀರೆಲ್ಲಾವೂ ನೈಸರ್ಗಿಕ ವಿಧಾನದ ಮೂಲಕವೇ ಶುದ್ಧೀಕರಣವಾಗಿ ಬರುವಂತೆ ಮಾಡಿದ್ದಾರೆ.

ನಂತರ ಆ ನೀರೆಲ್ಲವೂ ತಮ್ಮ ಜಮೀನಲ್ಲಿರುವ ಕೃಷಿ ಹೊಂಡದಲ್ಲಿ ಶೇಖರಿಸಿಕೊಂಡು ನಂತರ ಅದನ್ನು ಹನಿ ನೀರಾವರಿ ಮೂಲಕ ತಮ್ಮ ಬೆಳೆಗಳಿಗೆ ಹರಿಸುತ್ತಾರೆ. ಇದರಿಂದ ಶಿವಮೂರ್ತಿಯವರಿಗೆ ಮಳೆ ಇಲ್ಲಾ, ಬೋರ್​ ವೆಲ್​ ಇಲ್ಲಾ, ಅನ್ನೋ ಆತಂಕ ಇಲ್ಲದೆ ಅತ್ಯಂತ ಸರಳ ಹಾಗೂ ಯಶಸ್ವಿ ಕೃಷಿ ಮಾಡುತ್ತಿದ್ದಾರೆ. ಇದು ಸುತ್ತಮುತ್ತಲ ಗ್ರಾಮಸ್ಥರ ಹಾಗೂ ರೈತರ ಪ್ರಶಂಸೆಗೆ ಪಾತ್ರವಾಗಿದೆ.

ಒಟ್ಟಾರೆ ಕೃಷಿಯನ್ನು ಖುಷಿಯಾಗಿ ಶ್ರದ್ದೆಯಿಂದ ಮಾಡಿದ್ರೆ ಅದು ನಿಜಕ್ಕೂ ನಂಬಿದವರ ಕೈಬಿಡೋದಿಲ್ಲ ಅನ್ನೋದಕ್ಕೆ ಶಿವಮೂರ್ತಿಯೇ ಸಾಕ್ಷಿ. ಅಲ್ಲದೇ ಅವರ ನಿಷ್ಠೆ ಹಾಗೂ ಸವಾಲು ನಿಜ್ಕಕೂ ಎಲ್ಲಾ ರೈತರಿಗೂ ಸ್ಪೂರ್ತಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.. -ರಾಜೇಂದ್ರ ಸಿಂಹ

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್