ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಜಿಯೋ (Jio) ಓಟವನ್ನು ತಡೆಯಲು ಏರ್ಟೆಲ್ (Airtel) ಹರಸಾಹಸ ಪಡುತ್ತಿದೆ. ಜಿಯೋಕ್ಕೆ ಪೈಪೋಟಿ ನೀಡಲು ಆಕರ್ಷಕ ಆಫರ್ಗಳಿರುವ ಹೊಸ ಹೊಸ ಪ್ಲಾನ್ಗಳನ್ನು ಬಿಡುಗಡೆ ಮಾಡುತ್ತಿವೆ. ಈ ಪೈಕಿ ಇತ್ತೀಚೆಗಷ್ಟೆ ಪರಿಚಯಿಸಿದ ಒಂದು ವರ್ಷದ ಹೊಸ ಪ್ರಿಪೇಯ್ಡ್ ಪ್ಲಾನ್ (Prepaid Plan) ಸಾಕಷ್ಟು ಮಂದಿ ನೆಚ್ಚಿಕೊಂಡಿದ್ದಾರೆ. ಆ ಪ್ಲಾನ್ ಯಾವುದು? ಏನೆಲ್ಲಾ ಆಫರ್ ಎಂಬ ಕುರಿತ ಮಾಹಿತಿ ಇಲ್ಲಿದೆ.
ನಂಬರ್ ಒನ್ ಪಟ್ಟಕ್ಕೇರಲು ಏರ್ಟೆಲ್ ನಾನಾ ಕಸರತ್ತು ನಡೆಸುತ್ತಿದೆ. ಇದರ ನಡುವೆ ಬಳಕೆದಾರರನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಏರ್ಟೆಲ್ ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಆ ಪೈಕಿ ಏರ್ಟೆಲ್ನ 2498 ರೂ. ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಹೆಚ್ಚಿನವರು ಉಪಯೋಗಿಸುತ್ತಿದ್ದಾರೆ.
ಈ ಪ್ಲಾನ್ ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಉಚಿತ ಡೇಟಾ ಪ್ರಯೋಜನ ದೊರೆಯುತ್ತದೆ. ಅಲ್ಲದೆ ಯಾವುದೇ ನೆಟವರ್ಕ್ಗೆ ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಉಚಿತವಾಗಿ ಲಭ್ಯವಿದೆ. ಹಾಗೆಯೇ ಹೆಚ್ಚುವರಿಯಾಗಿ ಹೆಲೋ ಟ್ಯೂನ್, ಏರ್ಟೆಲ್ ಎಕ್ಸ್ಟ್ರೀಮ್ ಸೇವೆಗಳು ದೊರೆಯುತ್ತವೆ.
ಇದರ ಜೊತೆಎಗೆ ಮತ್ತೊಂದು 2698 ರೂ. ವಿನ ಪ್ರಿಪೇಯ್ಡ್ ಪ್ಲಾನ್ ಕೂಡ ಒಂದು ವರ್ಷ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಯಾವುದೇ ನೆಟವರ್ಕ್ ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಪ್ರತಿದಿನ 100ಎಸ್ಎಮ್ಎಸ್ ಲಭ್ಯ. ವಿಶೇಷ ಎಂದರೆ ಇದರಲ್ಲಿ ಹೆಚ್ಚುವರಿಯಾಗಿ ಡಿಸ್ನಿ ಹಾಟ್ ಸ್ಟಾರ್ ವಿಐಪಿಯ ಉಚಿತ ಚಂದಾದಾರಿಕೆ ಪಡೆಯಬಹುದು. ಜೊತೆಗೆ ಹೆಲೋ ಟ್ಯೂನ್, ಏರ್ಟೆಲ್ ಎಕ್ಸ್ಟ್ರೀಮ್ ಸೇವೆಗಳು ದೊರೆಯುತ್ತವೆ.
ಇನ್ನೂ ಜಿಯೋದಲ್ಲಿ ಕೂಡ ಎರಡು ವಾರ್ಷಿಕ್ ಪ್ಲಾನ್ ನೀಡಲಾಗಿದೆ. 2,599 ರೂ. ನ ಪ್ರಿಪೇಯ್ಡ್ ಪ್ಲಾನ್ನಲ್ಲಿ ಗ್ರಾಹಕರು ಪ್ರತಿದಿನ 2GB ಡೇಟಾ ಪ್ರಯೋಜನ ಪಡೆಯುತ್ತಾರೆ. ಇದರ ಜೊತೆಗೆ ಹೆಚ್ಚುವರಿಯಾಗಿ 10GB ಉಚಿತ ಡೇಟಾ ನೀಡುತ್ತಿದೆ. ಇನ್ನೂ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಉಚಿತ ಎಸ್ಎಮ್ಎಸ್ ಸೇರಿದಂತೆ ಡಿಸ್ನಿ ಹಾಟ್ ಸ್ಟಾರ್ ವಿಐಪಿಯ ಉಚಿತ ಚಂದಾದಾರಿಕೆ ಕೂಡ ಪಡೆಯಬಹುದು. ಜಿಯೋ ಟಿವಿ ಉಚಿತವಾಗಿದೆ.
ಮತ್ತೊಂದು ಪ್ಲಾನ್ 2,399 ರೂ. ಆಗದ್ದು ಇದುಕೂಡ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ನೀಡುತ್ತಿದೆ. ಹೆಚ್ಚುವರಿಯಾಗಿ ಯಾವುದೇ ಡೇಟಾ ಆಯ್ಕೆ ಇಲ್ಲ. ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್ಎಮ್ಎಸ್ ಉಚಿತವಿದೆ. ಜಿಯೋ ಟಿವಿ ಕೂಡ ಫ್ರೀ ನೀಡಲಾಗಿದೆ.
65W ಫಾಸ್ಟ್ ಚಾರ್ಜಿಂಗ್ ಜೊತೆಗೆ ಆಕರ್ಷಕ ಫೀಚರ್: ಒಪ್ಪೋದಿಂದ ಎರಡು 5G ಸ್ಮಾರ್ಟ್ಫೋನ್ ರಿಲೀಸ್: ಬೆಲೆ?
iPhone ಕೊಂಡುಕೊಳ್ಳಲು ಇದೇ ಬೆಸ್ಟ್ ಟೈಮ್: Amazonನಲ್ಲಿ ಬಂಪರ್ ಡಿಸ್ಕೌಂಟ್ಗೆ iPhone 12
(Airtel Recharge Plans Airtel rs 2498 one year prepaid plan offers daily data with bumper benifits)