ಡಿಜೆ ಹಳ್ಳಿ ಗಲಭೆ: ಮತ್ತೋರ್ವ ಪ್ರಮುಖ ಆರೋಪಿ ವಾಜಿದ್ ಪಾಷಾ ಅಂದರ್

  • TV9 Web Team
  • Published On - 7:38 AM, 17 Aug 2020
ಡಿಜೆ ಹಳ್ಳಿ ಗಲಭೆ: ಮತ್ತೋರ್ವ ಪ್ರಮುಖ ಆರೋಪಿ ವಾಜಿದ್ ಪಾಷಾ ಅಂದರ್

ಬೆಂಗಳೂರು: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಪ್ರಮುಖ ಆರೋಪಿ ಕೆ.ವಾಜಿದ್ ಪಾಷನನ್ನು ಬಂಧಿಸಲಾಗಿದೆ.

ವಾಜಿದ್, ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್‌ ಅಧ್ಯಕ್ಷನಾಗಿದ್ದ. ಜೆಡಿಎಸ್ ಪಕ್ಷದಲ್ಲೂ ಗುರುತಿಸಿಕೊಂಡಿದ್ದ. ಕೆಲವು ದಿನಗಳ ಹಿಂದೆ ಶಾಸಕ ಅಖಂಡ ಶ್ರೀನಿವಾಸ ಕಾಣೆಯಾಗಿದ್ದಾನೆಂದು ಪೋಸ್ಟ್‌ ಹಾಕಿದ್ದ. ಈ ಬಗ್ಗೆ ಅಖಂಡ ಶ್ರೀನಿವಾಸ ಬೆಂಬಲಿಗರು ದೂರು ನೀಡಿದ್ರು. ದೂರಿನ ಬಳಿಕ ಠಾಣೆಗೆ ಕರೆಸಿ ರಾಜಿ ಮಾಡಿಸಿ ಕಳಿಸಲಾಗಿತ್ತು. ವಾಜಿದ್ ಗಲಭೆ ದಿನ ನವೀನ್ ವಿರುದ್ಧ ದೂರು ನೀಡಿದ್ದ ತಂಡದಲ್ಲಿದ್ದ. ನವೀನ್ ವಿರುದ್ಧ ದೂರಿನ ಬಳಿಕ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದ.

ನವೀನ್‌ನನ್ನು ಬಂಧಿಸಲು 2 ಗಂಟೆ ಸಮಯ ಕೇಳ್ತಿದ್ದಾರೆ ಪೊಲೀಸರು. ಅದ್ರೆ 2 ಗಂಟೆ ಸಮಯ ಯಾಕೆ ಬೇಕು. ನಮ್ಮವನಾಗಿದ್ರೆ 5 ಸೆಕೆಂಡ್‌ನಲ್ಲಿ ಬಂಧಿಸ್ತಾರೆಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ. ಅಸಲಿಗೆ ದೂರು ನೀಡಿದ ನಂತ್ರ ದೂರುನ್ನು ಪರಿಶೀಲನೆ ಮಾಡಿ ಎಫ್​ಐಆರ್ ದಾಖಲಿಸಲು ಎರಡು ಗಂಟೆಗಳ ಕಾಲ ಬೇಕು.

ಎಫ್​ಐಆರ್ ಇಲ್ಲದೆ ಆರೋಪಿಯನ್ನು ಅರೆಸ್ಟ್ ಮಾಡುವುದು ಕಾನೂನು ಬಾಹಿರ. ಈ ಎಲ್ಲಾ ಅಂಶ ಗಮನದಲ್ಲಿಟ್ಟುಕೊಂಡು ಪೊಲೀಸರು ಎರಡು ಗಂಟೆಗಳ ಕಾಲ ಸಮಯ ಕೇಳಿದ್ದರು. ಆದರೆ ವಾಜಿದ್ ಅವರ ವಿರುದ್ಧ ಕೂಗಾಡಿದ್ದ. ವಾಜಿದ್ ಜತೆ ಡಿ.ಜೆ.ಹಳ್ಳಿ ಠಾಣೆಗೆ ಆಗಮಿಸಿದ್ದ ನೂರಾರು ಜನ ಆತನ ಅಣತಿಯಂತೆ ಪೊಲೀಸ್ ಠಾಣೆಯನ್ನ ಧ್ವಂಸಮಾಡಿದ್ದರು. ಸದ್ಯ ವಾಜಿದ್​ನನ್ನು ಬಂಧಿಸಲಾಗಿದ್ದು, ಅವನ ಬೆಂಬಲಿಗರಲ್ಲಿ ನಡುಕ ಶುರುವಾಗಿದೆ.