ರಸ್ತೆ ತುಂಬಾ ಕಲರ್ ಕಲರ್ ಲಿಲ್ಲಿ ಮಧ್ಯೆ ಧಾರವಾಡ ಬೇಸಿಗೆಯ ಖದರೇ ಬೇರೆ!

ಧಾರವಾಡ: ಹೂವು ಸೃಷ್ಟಿಯ ಅದ್ಭುತಗಳಲ್ಲೊಂದು. ನಿಸರ್ಗದ ವೈಚಿತ್ರ್ಯಗಳಲ್ಲೊಂದು. ಹೂವಿನ ಚೆಲುವಿನ ಮುಂದೆ ಎಲ್ಲವೂ ನಗಣ್ಯ. ಇಂಥ ಬಗೆ ಬಗೆ ಹೂವುಗಳ ಪೈಕಿ ಇದೀಗ ವಿದ್ಯಾಕಾಶಿ ಧಾರವಾಡದಲ್ಲಿ ಗಮನ ಸೆಳೆಯುತ್ತಿರೋದು ಥಂಡರ್ ಲಿಲ್ಲಿ. ಮಳೆಗಾಲ ಆರಂಭವಾದರೆ ಸಾಕು ಈ ಹೂವು ಧುತ್ತನೇ ಅರಳಿ ಬಿಡುತ್ತೆ. ಅದುವರೆಗೂ ಯಾರಿಗೂ ಕಾಣದೇ ಭೂಮಿಯ ಒಡಲಲ್ಲಿ ಬಚ್ಚಿಕೊಂಡಿದ್ದ ಎಲೆ ಒಮ್ಮಿಂದೊಮ್ಮೆಲೇ ಹೊರ ಬರುತ್ತೆ. ಎಲೆ ಬಂದು ಒಂದೇ ವಾರದಲ್ಲಿ ಅಲ್ಲೊಂದು ಅದ್ಭುತ ಲೋಕವೇ ಸೃಷ್ಟಿಯಾಗುತ್ತೆ. ನೋಡ ನೋಡುತ್ತಿದ್ದಂತೆಯೇ ಕೆಂಪಗೆ, ಥಳ ಥಳ ಹೊಳೆಯೋ […]

ರಸ್ತೆ ತುಂಬಾ ಕಲರ್ ಕಲರ್ ಲಿಲ್ಲಿ ಮಧ್ಯೆ ಧಾರವಾಡ ಬೇಸಿಗೆಯ ಖದರೇ ಬೇರೆ!
Follow us
ಆಯೇಷಾ ಬಾನು
|

Updated on:May 26, 2020 | 2:32 PM

ಧಾರವಾಡ: ಹೂವು ಸೃಷ್ಟಿಯ ಅದ್ಭುತಗಳಲ್ಲೊಂದು. ನಿಸರ್ಗದ ವೈಚಿತ್ರ್ಯಗಳಲ್ಲೊಂದು. ಹೂವಿನ ಚೆಲುವಿನ ಮುಂದೆ ಎಲ್ಲವೂ ನಗಣ್ಯ. ಇಂಥ ಬಗೆ ಬಗೆ ಹೂವುಗಳ ಪೈಕಿ ಇದೀಗ ವಿದ್ಯಾಕಾಶಿ ಧಾರವಾಡದಲ್ಲಿ ಗಮನ ಸೆಳೆಯುತ್ತಿರೋದು ಥಂಡರ್ ಲಿಲ್ಲಿ. ಮಳೆಗಾಲ ಆರಂಭವಾದರೆ ಸಾಕು ಈ ಹೂವು ಧುತ್ತನೇ ಅರಳಿ ಬಿಡುತ್ತೆ. ಅದುವರೆಗೂ ಯಾರಿಗೂ ಕಾಣದೇ ಭೂಮಿಯ ಒಡಲಲ್ಲಿ ಬಚ್ಚಿಕೊಂಡಿದ್ದ ಎಲೆ ಒಮ್ಮಿಂದೊಮ್ಮೆಲೇ ಹೊರ ಬರುತ್ತೆ. ಎಲೆ ಬಂದು ಒಂದೇ ವಾರದಲ್ಲಿ ಅಲ್ಲೊಂದು ಅದ್ಭುತ ಲೋಕವೇ ಸೃಷ್ಟಿಯಾಗುತ್ತೆ. ನೋಡ ನೋಡುತ್ತಿದ್ದಂತೆಯೇ ಕೆಂಪಗೆ, ಥಳ ಥಳ ಹೊಳೆಯೋ ಹೂವುಗಳ ದಂಡೇ ಎದ್ದು ನಸುನಗುತ್ತವೆ.

ಮೊದಲ ಮಳೆ ಬೀಳುತ್ತಲೇ ಧಾರವಾಡದ ಪ್ರತಿ ಮನೆ ಮುಂದೆಯೂ ಇಂಥದ್ದೊಂದು ಅದ್ಭುತ ಕಂಡು ಬರುತ್ತೆ. ಇಲ್ಲಿನ ಬಗೆ ಬಗೆಯ ಸಸ್ಯಗಳು ಪ್ರಕೃತಿಯ ಅಂದವನ್ನು ಹೆಚ್ಚಿಸಿವೆ. ಪ್ರಪಂಚದ ಬೇರೆ ಬೇರೆ ಭಾಗದ ಸಸ್ಯಗಳು ನಗರಕ್ಕೆ ಹೆಚ್ಚಿನ ಸೌಂದರ್ಯ ತಂದುಕೊಟ್ಟಿವೆ. ಅಂಥದ್ದರಲ್ಲಿ ಈ ಥಂಡರ್ ಲಿಲ್ಲಿ ಹೂವು ಕೂಡ ಒಂದು. ಈ ಹೂವಿಗೆ ಕನ್ನಡದಲ್ಲಿ ಯಾವುದೇ ಹೆಸರಿರದಿದ್ದರೂ ಇದರ ಆಕಾರ ನೋಡಿ ಬೆಂಕಿಯ ಹೂವು, ಬೆಂಕಿ ಚೆಂಡು ಮುಂತಾದ ಹೆಸರುಗಳಿಂದ ಕರೆಯಲಾಗುತ್ತೆ. ಈ ಹೂವು ಧಾರವಾಡದ ಗಲ್ಲಿಗಲ್ಲಿಗಳಲ್ಲೂ ಇದೀಗ ಕಂಡು ಬರುತ್ತಿವೆ. ಇದಕ್ಕೆ ಕಾರಣ ಗುಡುಗಿನಿಂದ ಕೂಡಿದ ಮಳೆ.

ದಕ್ಷಿಣ ಆಫ್ರಿಕಾದ ಈ ಸಸ್ಯ ಮಾಡ್ತಿದೆ ಮೋಡಿ: ಭೂಮಿಯ ಒಳಭಾಗದಲ್ಲಿ ಬಚ್ಚಿಟ್ಟುಕೊಂಡಿದ್ದ ಗಡ್ಡೆಗಳು ಗುಡುಗು ಆರಂಭವಾಗುತ್ತಲೇ ಒಂದೊಂದಾಗಿ ಹೊರಗೆ ಬರುತ್ತವೆ. ಹಚ್ಚಹಸುರಿನ ಎಲೆಗಳನ್ನು ಭೂಮಿಯಿಂದ ಹೊರಚಾಚಿ, ಪ್ರಕೃತಿ ಮಾತೆ ತನ್ನ ಸುಂದರ ಉಡುಕೊರೆ ನೀಡಲು ಸಿದ್ಧವಾಗುತ್ತವೆ. ಮೂಲತಃ ದಕ್ಷಿಣ ಆಫ್ರಿಕಾದ ಈ ಸಸ್ಯ ಭಾರತಕ್ಕೆ ಬಂದಿದ್ದೇ ಬಲು ಅಚ್ಚರಿಯ ಸಂಗತಿ. ಬ್ರಿಟಿಷರು ತಮ್ಮ ಮನೆಯ ಮುಂದಿನ ಉದ್ಯಾನವನಗಳಲ್ಲಿ ಬೆಳೆಸಲು ಈ ಅಲಂಕಾರಿಕ ಸಸ್ಯವನ್ನು ತರಿಸಿಕೊಂಡಿದ್ದರು.

ಅದು ಹಾಗೆಯೇ ಮನೆಯಿಂದ ಮನೆಗೆ ಸಾಗಿ ಇವತ್ತು ಧಾರವಾಡದ ತುಂಬೆಲ್ಲಾ ಹರಡಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮಳೆ ಆರಂಭವಾಗೋದ್ರಿಂದಾಗಿ ಇದು ಅವಾಗಲೇ ಹೂವನ್ನು ಬಿಡುತ್ತೆ. ಇದೇ ಕಾರಣಕ್ಕೆ ಈ ಹೂವಿಗೆ ಕೆಲವರು ಮೇ ಫ್ಲಾವರ್ ಅಂತಾನೂ ಕರೆಯುತ್ತಾರೆ. ಆದರೆ ವಿಚಿತ್ರವೆಂದರೆ ಮೊದಲ ಮಳೆ ಬಿದ್ದ ಮೇಲೆಯೇ, ಅದೂ ಗುಡುಗಿನ ಶಬ್ದ ಕೇಳುತ್ತಲೇ ಇದು ಹೊರಗೆ ಬರುತ್ತೆ. ಈ ಸಸ್ಯ ಗುಡುಗು ಸಂವೇದಿಯಾಗಿರೋದೇ ಇದಕ್ಕೆ ಕಾರಣ.

ಅದಾಗಿ ಕೊಂಚ ಮಳೆ ಬೀಳುತ್ತಿದ್ದಂತೆಯೇ ಚೆಂಡಿನಾಕಾರದ ಕೆಂಪು ಬಣ್ಣದ ಹೂವುಗಳನ್ನು ಧರೆಗೆ ಸಮರ್ಪಿಸುತ್ತೆ. ಸುಮಾರು ಒಂದು ವಾರದವರೆಗೆ ಇರೋ ಹೂವು ಬಳಿಕ ಒಣಗಿ ಹೋಗುತ್ತೆ. ಆದರೆ ವನದ ತುಂಬೆಲ್ಲಾ ಹಸಿರೆಲೆಯನ್ನು ಉಳಿಸಿಕೊಂಡ ಗಡ್ಡೆ ಮಾತ್ರ ಡಿಸೆಂಬರ್ ವರೆಗೂ ಬದುಕಿರುತ್ತೆ. ಬಳಿಕ ಈ ಸಸ್ಯ ಒಣಗಿ ಹೋಗುತ್ತೆ. ಅಚ್ಚರಿಯ ವಿಷಯವೆಂದರೆ ಮೇಲ್ನೋಟಕ್ಕೆ ಒಣಗಿ ಹೋದಂತೆ ಕಂಡರೂ ಭೂಮಿಯ ಒಳಗಡೆ ಗಡ್ಡೆಯ ರೂಪದಲ್ಲಿ ಬದುಕಿಯೇ ಇರುತ್ತೆ. ಮತ್ತೆ ಮುಂದಿನ ಮಳೆಗಾಲ ಬಂದು ಗುಡುಗಿನ ಶಬ್ದ ಕೇಳುತ್ತಲೇ ಮತ್ತೆ ತನ್ನ ಅಸ್ತಿತ್ವವನ್ನು ಜಗತ್ತಿಗೆ ತೋರಿಸಿ ಬೀಗುತ್ತದೆ. ಒಟ್ಟಿನಲ್ಲಿ ಇದೀಗ ಧಾರಾನಗರಿಯ ಪ್ರತಿ ಮನೆಯ ಮುಂದೆಯೂ ಇದೀಗ ಈ ಹೂವಿನದ್ದೇ ಕಾರುಬಾರು. (ವಿಶೇಷ ಬರಹ-ನರಸಿಂಹಮೂರ್ತಿ ಪ್ಯಾಟಿ)

Published On - 1:28 pm, Tue, 26 May 20

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ