ಕೊರೊನಾಗೆ ಔಷಧಿ ಹೆಸರಲ್ಲಿ ವಿದೇಶಿ ಗ್ಯಾಂಗ್ ಬೆಂಗಳೂರಲ್ಲಿ ಏನು ಮಾಡ್ತಿತ್ತು ಗೊತ್ತಾ?
ಬೆಂಗಳೂರು: ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಜನ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಆದ್ರೆ ಕೆಲ ದುರುಳರು ಇದೇ ಸಮಯ ಅಂತಾ ಅಡ್ಡ ದಾರಿಯಲ್ಲಿ ದುಡ್ಡು ಮಾಡಿಕೊಳ್ಳೋಕೆ ಮುಂದಾಗಿದ್ದಾರೆ. ಹೀಗೆ ಅಡ್ಡ ದಾರಿಯಲ್ಲಿ ಕೊರೊನಾಗೆ ಔಷಧಿಯಿದೆ ಅಂತಾ ಮುಗ್ದರನ್ನ ವಂಚಿಸುತ್ತಿದ್ದ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು ಕಂಬಿ ಹಿಂದೆ ಕಳಿಸಿದ್ದಾರೆ. ಹೌದು ಕೊರೊನಾ ಔಷಧಿ ಹೆಸರಿನಲ್ಲಿ ಜನರಿಗೆ ಕೊಟ್ಯಂತರ ರೂ. ವಂಚಿಸಿದ್ದ ವಿದೇಶಿ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಎಗ್ಬೆ ಹ್ಯೂಬರ್ಟ್ ಎನೋ, ಎನ್ದೇಪ್ ಕಾಲೀನ್ ನ್ಚಾ ಎನ್ನೋ […]
ಬೆಂಗಳೂರು: ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಜನ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಆದ್ರೆ ಕೆಲ ದುರುಳರು ಇದೇ ಸಮಯ ಅಂತಾ ಅಡ್ಡ ದಾರಿಯಲ್ಲಿ ದುಡ್ಡು ಮಾಡಿಕೊಳ್ಳೋಕೆ ಮುಂದಾಗಿದ್ದಾರೆ. ಹೀಗೆ ಅಡ್ಡ ದಾರಿಯಲ್ಲಿ ಕೊರೊನಾಗೆ ಔಷಧಿಯಿದೆ ಅಂತಾ ಮುಗ್ದರನ್ನ ವಂಚಿಸುತ್ತಿದ್ದ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು ಕಂಬಿ ಹಿಂದೆ ಕಳಿಸಿದ್ದಾರೆ.
ಹೌದು ಕೊರೊನಾ ಔಷಧಿ ಹೆಸರಿನಲ್ಲಿ ಜನರಿಗೆ ಕೊಟ್ಯಂತರ ರೂ. ವಂಚಿಸಿದ್ದ ವಿದೇಶಿ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಎಗ್ಬೆ ಹ್ಯೂಬರ್ಟ್ ಎನೋ, ಎನ್ದೇಪ್ ಕಾಲೀನ್ ನ್ಚಾ ಎನ್ನೋ ಕ್ಯಾಮರೂನ್ ದೇಶದ ಆರೋಪಿಗಳು ಬ್ಯುಸಿನೆಸ್ ವಿಸಾದಲ್ಲಿ ಬಂದು ಅವಧಿ ಮುಗಿದಿದ್ದರು ಇಲ್ಲಿಯೇ ನೆಲೆಸಿದ್ದರು. ಜಯನಗರದ ಮನೆಯೊಂದರಲ್ಲಿ ವಾಸವಾಗಿದ್ದ ಆರೋಪಿಗಳು ಅಸ್ಸಾಂ ಮೂಲದ ಬದ್ರೂಲ್ ಹಸನ್ ಲಸ್ಕರ್ ಹಾಗೂ ದಿದಾರುಲ್ ಆಲೋಮ್ ಎಂಬ ಇಬ್ಬರ ಜೊತೆ ಗೂಡಿ ವಿವಿಧ ಬ್ಯಾಂಕ್ ಗಳಲ್ಲಿ ಖಾತೆ ತೆರೆದು ವಂಚಿಸುತ್ತಿದ್ದರು.
೧೦ಕ್ಕೂ ಹೆಚ್ಚು ನಕಲಿ ವೆಬ್ ಸೈಟ್ ಗಳನ್ನು ಸೃಷ್ಠಿಸಿದ್ದ ಆರೋಪಿಗಳು, ನಾಯಿ ಮರಿ ಮಾರಾಟ, ಔಷಧ, ಎಲೆಕ್ಟ್ರಿಕ್ ವಸ್ತುಗಳ ಮಾರಟ ಮಾಡೊದಾಗಿ ಜಾಹೀರಾತು ನೀಡುತ್ತಿದ್ದರು. ನಂಬಿ ಕೊಳ್ಳಲು ಹೊದವರ ಅಕೌಂಟ್ ಹ್ಯಾಕ್ ಮಾಡಿ ಹಣ ಲೂಟಿ ಮಾಡುತ್ತಿದ್ದರು. ಇದೇ ರೀತಿ ಕೋಟ್ಯಾಂತರ ಹಣವನ್ನ ವಂಚಿಸಿದ್ದ ಈ ಆರೋಪಿಗಳನ್ನ ಬನಶಂಕರಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಮೊಬೈಲ್ ಫೋನ್‌ಗಳು, ಲ್ಯಾಪ್ ಟಾಪ್‌ಗಳು, ಬ್ಯಾಂಕ್ ಅಕೌಂಟ್ ಪಾಸ್ ಬುಕ್‌ಗಳು, ಆಧಾರ್ ಕಾರ್ಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Published On - 8:51 pm, Thu, 16 July 20