BBK8 First Day Highlights: ನನ್ನನ್ನು ಅಣ್ಣ ಎಂದು ಮಾತ್ರ ಕರೆಯಬೇಡಿ; ಮಂಜು ಪಾವಗಡ ಈ ಮನವಿ ಇಟ್ಟಿದ್ದು ಯಾರಿಗೆ?
Bigg Boss Kannada 8 First Day highlights: ಜನಪ್ರಿಯ ಮನೋರಂಜನಾ ಕಾರ್ಯಕ್ರಮ ಮಜಾ ಭಾರತ ಮೂಲಕ ಮಂಜು ಪಾವಗಡ ಖ್ಯಾತಿ ಹೆಚ್ಚಿಸಿಕೊಂಡಿದ್ದರು. ತಮ್ಮ ಡೈಲಾಗ್ ಡೆಲಿವರಿ ಮೂಲಕ ಮಂಜು ಹೆಚ್ಚು ಮನೆಮಾತಾಗಿದ್ದಾರೆ.
ಕನ್ನಡ ಬಿಗ್ ಬಾಸ್ ಎಂಟನೇ ಸಂಚಿಕೆ ಆರಂಭವಾಗಿದೆ. 17 ಸ್ಪರ್ಧಿಗಳು ಮೊದಲ ದಿನವನ್ನು ಮನೆಯಲ್ಲಿ ಕಳೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಥೆಗಳು ಹುಟ್ಟುವುದು ಹೊಸದೇನಲ್ಲ. ಈ ಮೊದಲು ಬಿಗ್ ಬಾಸ್ ಮನೆಗೆ ತೆರಳಿದ್ದ ಚಂದನ್ ಶೆಟ್ಟಿ-ನಿವೇದಿತಾ ಗೌಡ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಈಗ ಆರಂಭವಾಗಿರುವ ಹೊಸ ಸೀಸನ್ ಸ್ಪರ್ಧಿಗಳ ಮಧ್ಯೆ ಪ್ರೇಮ ಗೀತೆಗಳು ಹುಟ್ಟಿಕೊಳ್ಳುವ ಎಲ್ಲಾ ಸೂಚನೆ ಸಿಗುತ್ತಿದೆ.
ನಿನ್ನೆ 17 ಅಭ್ಯರ್ಥಿಗಳನ್ನು ಸುದೀಪ್ ಬರಮಾಡಿಕೊಂಡಿದ್ದರು. ಮಂಜು ಪಾವಗಡ ಮನೆ ಒಳಗೆ ತುಂಬಾನೇ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು. ಮನೆ ಒಳಗೆ ಹೋಗುತ್ತಿದ್ದಂತೆ ನನಗೆ ಅಣ್ಣ ಎಂದು ಮಾತ್ರ ಕರೀಬೇಡಿ ಎನ್ನುವ ಎಚ್ಚರಿಕೆ ರವಾನಿಸಿದ್ದರು ಮಂಜು!
ಜನಪ್ರಿಯ ಮನೋರಂಜನಾ ಕಾರ್ಯಕ್ರಮ ಮಜಾ ಭಾರತ ಮೂಲಕ ಮಂಜು ಪಾವಗಡ ಖ್ಯಾತಿ ಹೆಚ್ಚಿಸಿಕೊಂಡಿದ್ದರು. ತಮ್ಮ ಡೈಲಾಗ್ ಡೆಲಿವರಿ ಮೂಲಕ ಮಂಜು ಹೆಚ್ಚು ಮನೆಮಾತಾಗಿದ್ದಾರೆ. ಜನರ ಹೃದಯ ಗೆಲ್ಲುವ ಪ್ರಯತ್ನದಲ್ಲಿರುವ ಮಂಜು ಬಿಗ್ ಬಾಸ್ ಮನೆಯಲ್ಲಿ ಆ್ಯಕ್ಟಿವ್ ಆಗಿದ್ದಾರೆ.
ನಿನ್ನೆ ಬಿಗ್ ಬಾಸ್ ಮನೆ ಒಳಗೆ ಮಂಜು ಎಂಟ್ರಿ ಕೊಡುತ್ತಿದ್ದಂತೆ ಟಿಕ್ ಟಾಕ್ ಸ್ಟಾರ್ ಧನುಶ್ರೀ ಅಣ್ಣಾ ಎಂದು ಕರೆದಿದ್ದಾರೆ. ಇದಕ್ಕೆ ಉತ್ತರಿಸಿದ್ದ ಮಂಜು, ನನ್ನನ್ನು ಅಣ್ಣ ಎಂದು ಮಾತ್ರ ಕರೆಯಬೇಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಧನುಶ್ರೀ ನಗುತ್ತಲೇ ಒಕೆ ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಹಾನಿ! ಕಲರ್ಸ್ ಕನ್ನಡ ಇಂದು ಬಿಡುಗಡೆ ಮಾಡಿದ್ದ ಪ್ರೋಮೋದಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ನಡುವೆ ಪ್ರೇಮ ಗೀತೆ ಆರಂಭವಾಗುವ ಸೂಚನೆ ಸಿಕ್ಕಿದೆ. ದಿವ್ಯಾ ಸುರೇಶ್ ಬಟ್ಟೆ ಜೋಡಿಸಿ ಇಡುವಾಗ ಮಂಜು ಎಂಟ್ರಿ ಕೊಡುತ್ತಾರೆ. ಈ ವೇಳೆ, ನಿಮಗೋಸ್ಕರ ಏನು ಬೇಕಾದ್ರೂ ಮಾಡುತ್ತೇನೆ ಎಂದಿದ್ದಾರೆ ಮಂಜು. ಅಷ್ಟೇ ಅಲ್ಲ, ದಿವ್ಯಾ ಕೂಡ, ನಿಮ್ಮ ಕೈ ನೋವಾದ್ರೆ ನನಗೆ ನೋವಾಗುತ್ತದೆ ಎಂದಿದ್ದಾರೆ. ಇದರಿಂದ ಇಬ್ಬರ ನಡುವೆ ಪ್ರೇಮ ಕಹಾನಿ ಹುಟ್ಟಿಕೊಳ್ಳುತ್ತಿದೆ ಎನ್ನುವ ಮಾತು ಹರಿದಾಡಿದೆ.
ಇದನ್ನೂ ಓದಿ: Bigg Boss Kannada 8: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನ ಏನೇನಾಯ್ತು? 17 ಸ್ಪರ್ಧಿಗಳ ವಿವರ ಇಲ್ಲಿದೆ
Published On - 4:44 pm, Mon, 1 March 21